ಕಾರ್ಗಿಲ್‌ ಯುದ್ಧದ ಸಮಯದಲ್ಲಿ ಭಾರತೀಯರಲ್ಲಿ ಉಕ್ಕಿಬಂದಿರುವ ರಾಷ್ಟ್ರಾಭಿಮಾನ ಆ ಕ್ಷಣಗಳ ನೋಟ !

೨೬ ಜುಲೈ ೨೦೨೩ ರಂದು ಇರುವ ‘ಕಾರ್ಗಿಲ್‌ ವಿಜಯದಿನ’ದ ನಿಮಿತ್ತ…

೧೯೬೨ ರಲ್ಲಿ ಚೀನಾ ಮತ್ತು ೧೯೬೫ ರಲ್ಲಿ ಪಾಕಿಸ್ತಾನದೊಂದಿಗೆ ನಡೆದ ಸಂಘರ್ಷ ಮತ್ತು ಬಾಂಗ್ಲಾದೇಶದ ಮುಕ್ತಿ ಇವೆಲ್ಲ ಪ್ರಸಂಗಗಳಲ್ಲಿ ಹಿಂದುಸ್ಥಾನದಲ್ಲಿ ಭಾರಿ ದೇಶಭಕ್ತಿಯ ತರಂಗ ಉಕ್ಕಿ ಬಂದಿತ್ತು. ಆ ಸಮಯದ ದಿನನಪತ್ರಿಕೆಗಳನ್ನು, ಭಾಷಣಗಳನ್ನು ನಾವು ಇಂದಿಗೂ ಸ್ಮರಿಸಿದರೆ ನಮಗೆ ಅದೇ ಚಿತ್ರಗಳು ಕಾಣಿಸುತ್ತವೆ. ಹಾಗಾದರೆ ಕಾರ್ಗಿಲ್‌ ಯುದ್ಧದ ಸಮಯದಲ್ಲಿ ಅಂತಹ ವಿಶೇಷ ಏನಾಗಿತ್ತು ? ದೂರಚಿತ್ರವಾಹಿನಿಯಲ್ಲಿ ಯುದ್ಧದ ದೃಶ್ಯಗಳು, ಅದರ ಆಘಾತ, ಅದರಲ್ಲಿ ಬಲಿಯಾಗಿರುವ ಸೈನಿಕರು ಇತ್ಯಾದಿಗಳ ಚಿತ್ರಗಳು ಹಿಂದೂಸ್ಥಾನದ ಮೂಲೆ ಮೂಲೆಗಳಿಗೆ ತಲುಪಿದವು ಹಾಗೂ ಜನರು ತಮ್ಮ ಮನೆಯ ದೂರಚಿತ್ರವಾಹಿನಿಗಳಲ್ಲಿ ನೋಡಿದರು ಮತ್ತು ಅದರ ವಿಷಯದಲ್ಲಿ ಬಂದಿರುವ ಪ್ರತಿಕ್ರಿಯೆ ಕೂಡ ಜನರಿಗೆ ದೂರಚಿತ್ರವಾಹಿನಿಗಳಲ್ಲಿ ಕಾಣಿಸಿತು. ಆದ್ದರಿಂದ ಯುದ್ಧವು ತೀವ್ರವಾಗುತ್ತಾ ಹೋದಂತೆ ಜನರಲ್ಲಿ ಪಾಕಿಸ್ತಾನದ ವಿಷಯದಲ್ಲಿ ಪ್ರತಿಕ್ರಿಯೆಗಳು ತೀವ್ರವಾಗುತ್ತಾ ಹೋದವು ಹಾಗೂ ‘ನಾವು ಹಿಂದುಸ್ಥಾನದ ಸುಪುತ್ರರಾಗಿದ್ದೇವೆ’, ಎನ್ನುವ ಅಭಿಮಾನ ಉಕ್ಕಿ ಬಂದಿತು. ಅದರ ಕೆಲವು ಪುರಾವೆಗಳನ್ನು ಇಲ್ಲಿ ಕೊಡುತ್ತಿದ್ದೇವೆ.

ಅ. ನಿವೃತ್ತ ಸೈನಿಕರು ವೇತನ ಪಡೆಯದೇ ರಣರಂಗಕ್ಕೆ ಇಳಿಯಲು ಹಾಗೂ ವೈದ್ಯರು ಸೇವೆ ಮಾಡಲು ಸಿದ್ಧರಾಗುವುದು ಹಾಗೂ ವಿದೇಶದಲ್ಲಿನ ಭಾರತೀಯರು ಹಣ ಸಂಗ್ರಹಿಸುವುದರೊಂದಿಗೆ ನಿಷೇಧ ಸಭೆಗಳನ್ನು ಕರೆಯುವುದು

(ಸೌಜನ್ಯ -Namma Kudla News 24×7)

೧೮.೭.೧೯೯೯ ರ ‘ದಿ ಏಶಿಯನ್‌ ಏಜ್‌’ನ ಸಂಚಿಕೆಯಲ್ಲಿ ‘ಕಾರ್ಗಿಲ್‌ ಈಸ್‌ ಎಮರ್ಜನ್ಸ್ ಆಫ್‌ ನ್ಯೂ ಇಂಡಿಯನ್‌ ಆಲ್‌ ಓವರ್’ (ಕಾರ್ಗಿಲ್‌ನ ಯುದ್ಧದಿಂದ ಹೊಸ ಭಾರತೀಯರ ಉದಯ) ಈ ಶೀರ್ಷಿಕೆಯಲ್ಲಿ ಒಂದು ವಾರ್ತೆ ಇದೆ. ಅದರಲ್ಲಿನ ಮಹತ್ವದ ಲೇಖನ : ‘ದೇಶದ ಎಲ್ಲ ಪ್ರದೇಶಗಳಿಂದ ಹಾಗೂ ವಿದೇಶದಿಂದ ಭಾರತೀಯ ಸೈನಿಕರ ತಾಣಗಳಿಗೆ ಸೈನಿಕರಿಗೆ ಬೆಂಬಲವನ್ನು ನೀಡುವ ಮತ್ತು ಅವರಿಗೆ ಉತ್ಸಾಹವನ್ನು ನೀಡುವ ಸಂದೇಶಗಳ ನೆರೆ ಬಂದಿತ್ತು. ನಿವೃತ್ತ ಸೈನಿಕರು ವೇತನ ಪಡೆಯದೇ ರಣರಂಗಕ್ಕೆ ಇಳಿಯುವ ಇಚ್ಛೆಯನ್ನು ತೋರಿಸಿದ್ದಾರೆ. ವೈದ್ಯರು ಯಾವುದೇ ಫಲಾಪೇಕ್ಷೆಯಿಲ್ಲದೆ ಗಡಿಯಲ್ಲಿನ ಸೈನಿಕರಿಗೆ ತಮ್ಮ ಸೇವೆಯನ್ನು ನೀಡಲು ಇಚ್ಛಿಸುತ್ತಾರೆ. ವಿದೇಶದಲ್ಲಿನ ಭಾರತೀಯರು (ಎನ್ಆರ್‍ಐ.) ತಮ್ಮ ದೇವಸ್ಥಾನಗಳಿಂದ ಹಣವನ್ನು ಸಂಗ್ರಹಿಸುತ್ತಾರೆ ಹಾಗೂ ತಮ್ಮ ತಮ್ಮ ನಗರಗಳಲ್ಲಿ ಪಾಕಿಸ್ತಾನಿ ನುಸುಳುಕೋರರ ವಿರುದ್ಧ ನಿಷೇಧದ ಸಭೆಗಳನ್ನು ಕರೆಯುತ್ತಾರೆ.’

ಆ. ಚಿಕ್ಕ ಮಕ್ಕಳು ಸೈನಿಕರಿಗೆ ಪತ್ರ ಬರೆದು ಅಭಿನಂದನೆ ಮಾಡುತಿದ್ದಾರೆ ಹಾಗೂ ಪಾಕಿಸ್ತಾನಕ್ಕೆ ಪಾಠ ಕಲಿಸಬೇಕೆಂದು ಹೇಳುವುದು

೩೦.೭.೧೯೯೯ ರಂದು ದೈನಿಕ ‘ಸಾಮನಾ’ದ ಸಂಚಿಕೆಯಲ್ಲಿ ‘ಸೈನಿಕರಿಗೆ ಅಭಿನಂದನೆಗಳನ್ನು ನೀಡುವ ಸಾವಿರಾರು ಪತ್ರಗಳು ಇರುವ ಕಾರ್ಗಿಲ್‌ಗೆ’ ಒಂದು ವಾರ್ತೆಯಿದೆ. ಅದರಲ್ಲಿನ ಕೆಲವು ಪರಿಚ್ಛೇದಗಳು :

ಆ ೧. ‘ಪ್ರಿಯ ಸೈನಿಕರೇ, ಪಾಕಿಸ್ತಾನದೊಂದಿಗೆ ಜಾಣ್ಮೆಯಿಂದ ಯುದ್ಧ ಮಾಡಿ ಗೆಲ್ಲಿರಿ; ಆದರೆ ನಮ್ಮ ಕ್ರಿಕೇಟ್‌ ಟೀಮಿನ ಹಾಗೆ ಹೋರಾಡಬೇಡಿ. ಟೆನಿಸ್‌ಪಟು ಲಿಂಡರ್‌ ಪೇಸ್‌ ಮತ್ತು ಭೂಪತಿ ಇವರ ಹಾಗೆ ಕಾದಾಡಿ.’

ಆ ೨. ಇನ್ನೊಂದು ಪತ್ರವು ಪೊಲೀಸ್‌ ಪೇದೆ ಭೂಷಣಸಿಂಗ್‌ ಇವರ ಕಣ್ಣುಗಳಲ್ಲಿ ನೀರು ಹರಿಯುವಂತೆ ಮಾಡಿತು. ಈ ಪತ್ರವನ್ನು ಕಳುಹಿಸಿದ ಹುಡುಗ ಹೇಳುತ್ತಾನೆ, ‘ಸೈನಿಕ ಅಂಕಲ್‌ (ಕಾಕಾ), ಜಯಿಸಿಕೊಂಡು ಹಿಂತಿರುಗಿ ಬನ್ನಿ. ನಾವು ನಿಮ್ಮ ರಕ್ಷಣೆಗಾಗಿ ಪ್ರಾರ್ಥನೆಯನ್ನು ಮಾಡುತ್ತಿದ್ದೇವೆ.’

ಆ ೩. ಒಬ್ಬ ಸೈನಿಕ ಹೇಳುತ್ತಾನೆ, ‘ಒಂದು ಸಣ್ಣ ಹುಡುಗನ ಪತ್ರದಲ್ಲಿನ ವಾಕ್ಯಗಳು ನೆನಪಾದಾಗ ನನಗೆ ಹುರುಪು ಬಂದಿತ್ತು. ಆ ಹುಡುಗ ಪತ್ರದಲ್ಲಿ ಬರೆದಿದ್ದನು, ‘ಕಮ್‌ ಆನ್‌ ಇಂಡಿಯಾ (ಬಾ ಭಾರತ), ಪಾಕಿಸ್ತಾನಕ್ಕೆ ಪಾಠ ಕಲಿಸು, ಅಲ್ಲಾಡಿಸಿ ಬಿಡು’

(ಸೌಜನ್ಯ -Oneindia Hindi | वनइंडिया हिंदी)

ಇ. ಕಾರ್ಗಿಲ್‌ ಯುದ್ಧದ ನಂತರ ಭಜನೆ ಮತ್ತು ಗಝಲ್‌ ಗಾಯಕ ಅನೂಪ್‌ ಜಲೋತಾ ಇವರು ಪಾಕಿಸ್ತಾನಿ ಗಝಲ್‌ ಗಾಯಕ ಗುಲಾಮ ಅಲೀ ಇವರ ಜೊತೆಗಿನ ಸಂಗೀತ ಮೈಫಿಲ್‌ (ಕಾರ್ಯಕ್ರಮವನ್ನು) ರದ್ದುಪಡಿಸಿದರು

೧೭.೭.೧೯೯೯ ರಂದಿನ ದೈನಿಕ ‘ಮಿಡ್‌-ಡೇ’ಯ ಸಂಚಿಕೆಯಲ್ಲಿ ‘ಐ ಯಾಮ್‌ ಹರ್ಟ್ ವಿಥ್‌ ವಾಟ್⃆ವರ್‌ ಹೆಪ್ಪಂಡ್‌ ಇನ್‌ ಕಾರ್ಗಿಲ್’ ಈ ಶೀರ್ಷಿಕೆಯಲ್ಲಿ ಒಂದು ವಾರ್ತೆ ಇದೆ. ಅದರಲ್ಲಿನ ಪರಿಚ್ಛೇದ : ‘ಭಜನೆ ಮತ್ತು ಗಝಲ್‌ ಗಾಯಕ ಅನೂಪ್‌ ಜಲೋತಾ ಇವರು ಪಾಕಿಸ್ತಾನದ ಗಝಲ್‌ ಗಾಯಕ ಗುಲಾಮ್‌ ಅಲೀ ಇವರ ಜೊತೆಗೆ ಅಮೇರಿಕಾ ಮತ್ತು ಕೆನೆಡಾದಲ್ಲಿ ನೆರವೇರಲಿಕ್ಕಿದ್ದ ಸಂಗೀತ ಮೈಫಿಲಿಯನ್ನು ರದ್ದುಪಡಿಸಿದರು. ಕಾರ್ಗಿಲ್‌ನಲ್ಲಿ ನಡೆಯುವ ಘಟನೆಗಳಿಂದ ನನಗೆ ನೋವಾಗಿದೆ. ಆದ್ದರಿಂದ ಆಗಸ್ಟ್ ೨೦ ರಿಂದ ಆರಂಭವಾಗಲಿಕ್ಕಿದ್ದ ಕಾರ್ಯಕ್ರಮಗಳನ್ನು ನಾನು ರದ್ದುಪಡಿಸಿದ್ದೇನೆ’, ಎಂದು ಅನೂಪ್‌ ಜಲೋತಾ ಇವರು ‘ಮಿಡ್‌-ಡೇ’ಗೆ ಹೇಳಿದ್ದಾರೆ. ‘ಎಲ್ಲವೂ ಸುಧಾರಣೆಯಾದರೆ ಮಾತ್ರ ಭವಿಷ್ಯದಲ್ಲಿ ಕಾರ್ಯಕ್ರಮಗಳು ನಡೆಯಬಹುದು’, ಎಂದು ಕೂಡ ಅವರು ಹೇಳಿದ್ದಾರೆ.

ಈ. ಚೆನ್ನೈ (ತಮಿಳುನಾಡು) ಯಲ್ಲಿನ ವೃದ್ಧಾಶ್ರಮದಲ್ಲಿನ ಮಹಿಳೆಯರು ಒಂದು ದಿನದ ಉಪವಾಸ ಮಾಡಿ ಅನ್ನಕ್ಕಾಗಿ ಖರ್ಚಾಗುವ ಹಣವನ್ನು ರಾಷ್ಟ್ರರಕ್ಷಣೆಗಾಗಿ ನೀಡುತ್ತಾರೆ

ದೈನಿಕ ‘ಮಿಡ್‌-ಡೇ’ಯ ಅದೇ ದಿನದ ಸಂಚಿಕೆಯಲ್ಲಿ ಈ ಮೇಲಿನ ವಾರ್ತೆಯ ಜೊತೆಗೆ ಇನ್ನೊಂದು ವಾರ್ತೆ ಇದೆ: ‘ವಿಚಾರಗಳಿಗೆ ಎಲ್ಲಕ್ಕಿಂತ ದೊಡ್ಡ ಮೌಲ್ಯವಿದೆ ! ಚೆನ್ನೈಯಲ್ಲಿನ ‘ವಿಶ್ರಾಂತಿ’ ಈ ವೃದ್ಧಾಶ್ರಮದಲ್ಲಿನ ೯೮ ಸ್ತ್ರೀಯರಲ್ಲಿ ದಾನ ನೀಡಲು ಏನೂ ಇರಲಿಲ್ಲ. ಆದ್ದರಿಂದ ಅವರು ಒಂದು ದಿನದ ಉಪವಾಸ ಮಾಡಿದರು. ಅದರಿಂದ ಅವರ ಒಂದು ಊಟದ ಖರ್ಚು ೧ ಸಾವಿರದ ೭೦೦ ರೂಪಾಯಿ ಉಳಿಯಿತು. ಅದನ್ನು ಅವರು ರಾಷ್ಟ್ರ ರಕ್ಷಣೆಯ ಕಾರ್ಯಕ್ಕೆ ಸಹಾಯವೆಂದು ನೀಡಿದರು. ಓರ್ವ ೭೧ ವರ್ಷದ ವೃದ್ಧ ಸ್ತ್ರೀ ಹೇಳಿದರು, ‘ನೀವು ಅಂತಃಕರಣದಿಂದ ನೀಡುವುದರಿಂದ ನಿಮಗೆ ಹಸಿವೆಯ ತೊಂದರೆಯಾಗುವುದಿಲ್ಲ.’

ಉ. ಭಾರತೀಯರ ಅಂತಃಕರಣದಲ್ಲಿ ಭಾರತ ಜೀವಂತವಾಗಿದೆ’, ಎಂದು ಲೇಖಕ ಸ್ವಪನ ದಾಸಗುಪ್ತಾ ಇವರು ಹೇಳುತ್ತಾರೆ

ಇದೇ ಸಂಚಿಕೆಯಲ್ಲಿ ಲೇಖಕ ಸ್ವಪನ ದಾಸಗುಪ್ತಾ ಇವರ ‘ಬ್ಯಾಟಿಂಗ್‌ ಫಾರ್‌ ಇಂಡಿಯಾ’ ಈ ಶೀರ್ಷಿಕೆಯಲ್ಲಿ ಒಂದು ಉತ್ತಮವಾದ ಲೇಖನವಿದೆ. ಅದರಲ್ಲಿ ‘ಕಾಸ್ಮೋಪೊಲಿಟನ್‌ ಇಂಟಲೆಕ್ಚ್ಯುವಲ್ಸ್‌’ (ವಿಶ್ವವ್ಯಾಪಿ ಬೌದ್ಧಿಕ) ಹಾಗೂ ‘ಲೆಫ್ಟಿಸ್ಟ್ಸ್‌’ (ಸಾಮ್ಯವಾದಿ) ಗಳ ವಿರುದ್ದ ಟೀಕೆ ಇದೆ; ಆದರೆ ರಾಷ್ಟ್ರೀಯ ಐಕ್ಯತೆಯ ವಿಷಯದಲ್ಲಿ ಅವರು ಬರೆದಿರುವ ಪರಿಚ್ಛೇದವನ್ನು ಉದ್ದೇಶಪೂರ್ವಕ ಉದ್ಘೃತ ಮಾಡುತಿದ್ದಾರೆ. ಅವರು ಬರೆಯುತ್ತಾರೆ, ”ರಾಷ್ಟ್ರೀಯ ಜಾಗೃತಿಯನ್ನು ಮೂಡಿಸಿರುವ ಆಥವಾ ಆರ್ಕೆಸ್ಟ್ರೇಟೆಡ್‌ (ಉದ್ದೇಶಪೂರ್ವಕ ಆಯೋಜಿಸಿದ) ಆಗಿರಲಿಲ್ಲ. ಅದು ನಿಜವಾದ, ಸ್ವಯಂಸ್ಫೂರ್ತಿಯದ್ದಾಗಿತ್ತು ಹಾಗೂ ದೇಶದ ಮೂಲೆ ಮೂಲೆಯನ್ನು ಸ್ಪರ್ಷ ಮಾಡಿತ್ತು. ಒಡಿಶಾದಲ್ಲಿನ ನವವಧು ತನ್ನ ವಿವಾಹದಲ್ಲಿನ ಆಭರಣವನ್ನು ಅರ್ಪಣೆ ಮಾಡಿದಳು, ಯುದ್ಧದ ಪ್ರಯತ್ನಕ್ಕೆ ಜನರಿಂದ ಅಪ್ರತಿಮ ಪ್ರೋತ್ಸಾಹವಿತ್ತು. ಯಾರ್ಯಾರು ಏನೇನೋ ಕೊಟ್ಟರು, ಅವರು ಇಂದಿನ ವರೆಗೆ ಕಾರ್ಗಿಲ್‌ ನೋಡಿಲ್ಲ ಆಥವಾ ಅವರು ಅಲ್ಲಿಗೆ ಹೋಗಲು ಸಾಧ್ಯವೂ ಇಲ್ಲ; ಆದರೆ ಕಾರ್ಗಿಲ್‌ನಲ್ಲಿನ ‘ಟೈಗರ್‌ ಹಿಲ್’ ಮತ್ತು ‘ಮುಶ್ಕೋಹ ವ್ಯಾಲಿ’ ಇವೆರಡೂ ಸ್ಥಳಗಳು ಇಂಡಿಯಾ ಗೇಟ್‌ನ ಹಾಗೆ ಹಿಂದೂಸ್ಥಾನದ ಸಂಕೇತಗಳಾಗಿವೆ. ಇದಕ್ಕೆ ನೀವು ರಾಷ್ಟ್ರವಾದವೆಂದು ಹೇಳಿ,

‘ಝೆನೋಫೋಬಿಯಾ’ (ಪರಕೀಯರ ವಿಷಯದಲ್ಲಿ ತಿರಸ್ಕಾರ) ಎಂದು ಹೇಳಿ; ಆದರೆ ಕಾರ್ಗಿಲ್‌ ಯುದ್ಧವು ಭಾರತೀಯರ ಅಂತಃಕರಣದಲ್ಲಿ ಭಾರತ ಜೀವಂತವಿದೆ ಎನ್ನುವುದನ್ನು ತೋರಿಸಿದೆ. ಇಚ್ಛೆ ಇಲ್ಲದಿರುವಾಗಲೂ ಮಿಯಾ ನವಾಝ ಶರೀಫ ಇವರು ಭಾರತವನ್ನು ಭಾರತೀಯರ ಕೈಗೆ ಹಿಂತಿರುಗಿಸಲು ಸಹಾಯ ಮಾಡಿದ್ದಾರೆ.’

ಊ. ಭಾರತೀಯ ಸೈನಿಕರ ತಂಡಗಳ ಹೆಸರುಗಳು ಮಹಾಭಾರತದಲ್ಲಿನ ಹೆಸರಿನ ಹಾಗೆ ಇರುವುದು ಹಾಗೂ ಅದರಿಂದ ಕಾಣಿಸುವ ಪರಂಪರೆಯ ಅಭಿಮಾನವಾಗಿದೆ ೫.೭.೧೯೯೯ ರಂದಿನ ‘ಇಂಡಿಯಾ ಟು-ಡೇ’ಯ ಸಂಚಿಕೆಯಲ್ಲಿ ‘ಟೇಕಿಂಗ್‌ ಟೊಲೋಲಿಂಗ್’ (ಟೊಲೋಲಿಂಗ್‌ ಹಿಂತಿರುಗಿ ಪಡೆಯುವುದು) ಈ ಶೀರ್ಷಿಕೆಯಲ್ಲಿ ಸುದೀರ್ಘ ಯುದ್ಧ ವಾರ್ತಾಪತ್ರವಾಗಿದೆ. ಅದರಲ್ಲಿ ಟೊಲೋಲಿಂಗ್‌ನಲ್ಲಿನ (ದ್ರಾಸ್, ಲಡಾಕ್‌ನಲ್ಲಿನ ಪ್ರದೇಶ) ಕೊನೆಯ ಆಕ್ರಮಣಕ್ಕಾಗಿ ಅವಲಂಬಿಸಿರುವ ರಣತಂತ್ರಕ್ಕಾಗಿ ೩ ಸೈನಿಕರ ತಂಡವನ್ನು ನೇಮಕ ಮಾಡಲಾಯಿತು. ಅವುಗಳ ಹೆಸರು ‘ಅಭಿಮನ್ಯು’, ‘ಭೀಮ’ ಮತ್ತು ‘ಅರ್ಜುನ’ ! ಈಗ ಅಮರ, ಅಕ್ಬರ, ಅಂಥನೀ ಈ ಚಲನಚಿತ್ರವು ಜನಪ್ರಿಯವಾಗಿರುವ ಹೆಸರು ಕೈಯಲ್ಲಿರುವಾಗ ಭಾರತೀಯ ಸೇನಾಧಿಕಾರಿಗಳು ಮಹಾಭಾರತದ ಕಡೆಗೆ ತಿರುಗಿದರು. ಇದಕ್ಕೆ ಕಾರಣವೆಂದರೆ ಪರಂಪರೆಯ ಅಭಿಮಾನ !

ರಾಷ್ಟ್ರದ ನಿರ್ಮಿತಿಯಲ್ಲಿ ಪರಂಪರೆಗೆ ಮಹತ್ವವಿರುತ್ತದೆ, ಎಂಬುದನ್ನು ಈ ಹೆಸರಿನಲ್ಲಿ ತೋರಿಸಲಾಗಿದೆ. ಈ ಹೆಸರಿನಲ್ಲಿಯೆ ಹಿಂದುತ್ವದ ದರ್ಶನವಿದೆ. ಹೆಚ್ಚು ಪುರಾವೆ ಯಾಕೆ ! – ಜ.ದ. ಜೋಗ್ಳೆಕರ್‌ (ಆಧಾರ : ಮಾಸಿಕ ‘ಧರ್ಮಭಾಸ್ಕರ’, ಸಪ್ಟೆಂಬರ್‌ ೧೯೯೯)