`ಇಂಡಿಯಾ’ ಹೆಸರನ್ನು ಉಪಯೋಗಿಸಿ ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ ! – ಪ್ರಧಾನ ಮಂತ್ರಿ

ನವದೆಹಲಿ – `ಈಸ್ಟ ಇಂಡಿಯಾ ಕಂಪನಿ ಮತ್ತು ಪಾಪ್ಯುಲರ್ ಫ್ರಂಟ ಆಫ್ ಇಂಡಿಯಾ’ ಹೆಸರುಗಳನ್ನು ಉಲ್ಲೇಖಿಸುತ್ತಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರು `ಇಂಡಿಯಾ’ ಹೆಸರನ್ನು ಬಳಸಿಕೊಂಡು ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ಅವರು ಭಾಜಪ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡುತ್ತಿದ್ದರು, ವಿರೋಧಿ ಪಕ್ಷಗಳು ಜನರ ದಾರಿತಪ್ಪಿಸಲು ತಮ್ಮ ಮೈತ್ರಿಕೂಟಕ್ಕೆ `ಇಂಡಿಯಾ’ ಎಂದು ಹೆಸರಿಟ್ಟಿದ್ದು, ವಿರೋಧಿ ಪಕ್ಷಗಳಿಗೆ ಸ್ವತಃ ದಿಕ್ಕು ತೋಚದಂತಾಗಿದೆ ಎಂದು ಟೀಕಿಸಿದರು. ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಇಂದು ವಿಶ್ವದಲ್ಲಿ ಭಾರತದ ಚಿತ್ರಣ ಸುಧಾರಿಸಿದ್ದು, 2047ರ ವರೆಗೆ ನಾವು ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುತ್ತೇವೆ. ದೇಶವಾಸಿಗಳು ನಮ್ಮ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ ಜನತೆಯ ಬೆಂಬಲದೊಂದಿಗೆ ಭಾಜಪ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ಹೇಳಿದರು.

(ಸೌಜನ್ಯ – Republic World)