ಮಣಿಪುರ ಸರಕಾರದಿಂದ ಸೇನೆಗೆ ವರದಿ ಸಲ್ಲಿಸಲು ಆದೇಶ
ನವ ದೆಹಲಿ – ಜುಲೈ ೨೨ ಮತ್ತು ೨೩ ಈ ಎರಡು ದಿನಗಳಲ್ಲಿ ಮ್ಯಾನ್ಮಾರ್‌ನ ೭೧೮ ನಾಗರಿಕರು ಮಣಿಪುರನ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆ. ಈ ಕುರಿತು ಮಣಿಪುರ ಸರಕಾರ ಅಸ್ಸಾಂ ರೈಫಲ್ಸ್ಸೈನ್ಯದ ಒಂದು ತುಕಡಿಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದೆ. ಇದರಲ್ಲಿ “ಸೂಕ್ತ ದಾಖಲೆಗಳಿಲ್ಲದೆ ಈ ನಾಗರಿಕರನ್ನು ಭಾರತಕ್ಕೆ ಪ್ರವೇಶಿಸಲು ಹೇಗೆ ಅನುಮತಿಸಲಾಯಿತು ?” ಈ ನಾಗರಿಕರ ಛಾಯಾಚಿತ್ರಗಳು ಮತ್ತು ಬೆರಳಚ್ಚುಗಳನ್ನು ತೆಗೆದುಕೊಳ್ಳುವಂತೆ ಸರಕಾರವು ಚಂದೇಲ ಜಿಲ್ಲೆಯ ಡೆಪ್ಯುಟಿ ಕಮಿಷನರ ಮತ್ತು ಪೊಲೀಸ್ ಅಧೀಕ್ಷಕರಿಗೆ ಆದೇಶಿಸಿದೆ. ಮಣಿಪುರದಲ್ಲಿ ಕಳೆದ ೨ ತಿಂಗಳಗಳಿಗೂ ಹೆಚ್ಚು ಕಾಲ ಹಿಂಸಾಚಾರ ನಡೆಯುತ್ತಿರುವಾಗ ಇಂತಹ ಘಟನೆ ನಡೆದಿರುವುದು ಅನುಮಾನ ಮೂಡಿಸಿದೆ ಎನ್ನಲಾಗಿದೆ. ಈ ನಾಗರಿಕರು ತಮ್ಮೊಂದಿಗೆ ಶಸ್ತ್ರಾಸ್ತ್ರಗಳನ್ನು ತಂದಿದ್ದಾರೆಯೇ ? ಈ ಮಾಹಿತಿಯು ಸಿಗಲಿಲ್ಲ.
Chief secretary Vineet Joshi sought information from the Assam Rifles how the #Myanmar nationals were allowed to enter India without proper travel documentshttps://t.co/a3M3VubISX
— Hindustan Times (@htTweets) July 25, 2023
ಸಂಪಾದಕರ ನಿಲುವುಈ ಘಟನೆಗೆ ಕಾರಣರಾದವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ! |