ನ್ಯಾಯಾಲಯದ ಪರಿಸರದಲ್ಲಿ ಕೇವಲ ಮ. ಗಾಂಧಿ ಮತ್ತು ಸಂತ ತಿರುವಳ್ಳುವರ್ ಇವರ ಪುತ್ತಳಿಗಳನ್ನು ಹಾಕುವಂತೆ ಮದ್ರಾಸ ಉಚ್ಚ ನ್ಯಾಯಾಲಯದ ಆದೇಶ !

ಡಾ. ಬಾಬಾಸಾಹೇಬ ಅಂಬೇಡ್ಕರ ಇವರ ಪುತ್ತಳಿಯನ್ನು ಸ್ಥಾಪಿಸಲು ಸಾಧ್ಯವಿಲ್ಲವೆಂದು ನ್ಯಾಯಾಲಯ ತಿಳಿಸಿದೆ !

ಚೆನ್ನೈ (ತಮಿಳುನಾಡು) – ಮದ್ರಾಸ್ ಉಚ್ಚ ನ್ಯಾಯಾಲಯವು ಒಂದು ಸುತ್ತೋಲೆಯನ್ನು ಹೊರಡಿಸಿದ್ದು ಅದರಲ್ಲಿ, ತಮಿಳುನಾಡು ಮತ್ತು ಪುದುಚೇರಿಯ ನ್ಯಾಯಾಲಯದ ಪರಿಸರದಲ್ಲಿ ಕೇವಲ ಮ. ಗಾಂಧಿ ಮತ್ತು ಸಂತ ತಿರುವಳ್ಳುವರ ಇವರ ಪುತ್ತಳಿಗಳನ್ನು ಸ್ಥಾಪಿಸಬೇಕು. ಇತರೆ ಬೇರೆ ಯಾರ ಚಿತ್ರ ಮತ್ತು ಪುತ್ತಳಿಯನ್ನು ನ್ಯಾಯಾಲಯದ ಪರಿಸರದಲ್ಲಿ ಹಾಕಬಾರದು. ಡಾ. ಬಾಬಾಸಾಹೇಬ ಆಂಬೇಡಕರ ಇವರ ಪುತ್ತಳಿಯನ್ನು ಹಾಕಬೇಕೆನ್ನುವ ವಿನಂತಿಯನ್ನು ತಿರಸ್ಕರಿಸಿದೆ. ಹಾಗೆಯೇ ಎಲ್ಲೆಲ್ಲಿ ಡಾ. ಆಂಬೇಡ್ಕರ ಇವರ ಪುತ್ತಳಿಗಳಿವೆಯೋ ಅವುಗಳನ್ನು ತೆರವುಗೊಳಿಸಬೇಕು ಎಂದೂ ನ್ಯಾಯಾಲಯ ಆದೇಶಿಸಿದೆ.

ನ್ಯಾಯಾಲಯವು ಈ ತೀರ್ಪು ನೀಡುವಾಗ 2008, 2010, 2011, 2013, 2019 ಮತ್ತು ಎಪ್ರಿಲ್ 2023 ರಲ್ಲಿ ತಾನು ನೀಡಿರುವ ಆದೇಶಗಳನ್ನು ಉಲ್ಲೇಖಿಸಿತು. ‘ತಮಿಳುನಾಡು ಬಿ.ಆರ್. ಅಂಬೇಡಕರ ಅಡ್ವೊಕೇಟ ಅಸೋಸಿಯೇಶನ್’ ತಮಿಳುನಾಡಿನ ಎಲ್ಲ ನ್ಯಾಯಾಲಯಗಳ ಪರಿಸರದಲ್ಲಿ ಡಾ. ಆಂಬೇಡ್ಕರಂತಹ ರಾಷ್ಟ್ರೀಯ ನಾಯಕರ ಪುತ್ತಳಿಯನ್ನು ಹಚ್ಚುವಂತೆ ಕೋರಿ ಅರ್ಜಿಯನ್ನು ದಾಖಲಿಸಿತ್ತು. ಅದಕ್ಕೆ ನ್ಯಾಯಾಲಯವು ತನ್ನ ಹಿಂದಿನ ಆದೇಶಗಳನ್ನು ಪುನರುಚ್ಚರಿಸಿತು.