‘ಸಂಘ ಪರಿವಾರದ ನೀತಿಗಳಿಂದ ಮಣಿಪುರದಲ್ಲಿನ ಕ್ರೈಸ್ತ ಕುಕೀ ಜನಾಂಗದ ವಿರುದ್ಧ ಹಿಂಸಾಚಾರ ನಡೆಯುತ್ತಿದೆಯಂತೆ ! – ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್

ವಿಷಕಕ್ಕಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ !

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್

ತಿರುವನಂತಪುರಂ (ಕೇರಳ) – ದೇಶದಲ್ಲಿನ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಸಮಾಜವು, ಸಂಘ ಪರಿವಾರದ (ರಾಷ್ಟ್ರೀಯ ಸ್ವಯಂಸೇವಕ ಸಂಘ) ನೀತಿಗಳಿಂದ ಮಣಿಪುರವು ಗಲಭೆ ಪೀಡಿತ ಭೂಮಿಯಲ್ಲಿ ರೂಪಾಂತರಗೊಂಡಿದೆ ಎಂಬುದು ಎಲ್ಲರು ಗಮನದಲ್ಲಿಟ್ಟುಕೊಳ್ಳಬೇಕು. ಸಂಘ ಪರಿವಾರದಿಂದ ಅಲ್ಲಿ ದ್ವೇಷದ ಬೀಜ ಬಿತ್ತುತ್ತಿದೆ. ಗಲಭೆಯ ಹೆಸರಿನಲ್ಲಿ ಮಣಿಪುರದಲ್ಲಿನ ಕ್ರೈಸ್ತ ಸಮುದಾಯವನ್ನು ಗುರಿ ಮಾಡಲಾಗುತ್ತಿದೆ. ಕ್ರೈಸ್ತ ಆದಿವಾಸಿ ಸಮುದಾಯದ ಚರ್ಚ್ ಗಳ ಮೇಲೆ ದಾಳಿ ನಡೆಯುತ್ತಿದೆ, ಎಂದು ಕೇರಳದಲ್ಲಿನ ಮಾರ್ಕ್ಸ್ ವಾದಿ ಮೂತ್ರಿ ಸರಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇವರು ಟೀಕಿಸಿದರು.

ಮುಖ್ಯಮಂತ್ರಿ ವಿಜಯನ ಮಾತು ಮುಂದುವರೆಸುತ್ತಾ, ಮಣಿಪುರದಲ್ಲಿ ಪ್ರತಿದಿನ ಹೊಸ ಹೊಸ ಆಘಾತಕಾರಿ ಘಟನೆಗಳು ಬೆಳಕಿಗೆ ಬರುತ್ತಿವೆ. ಹಿಂಸಾಚಾರದ ಪ್ರಾರಂಭದ ದಿನಗಳಲ್ಲಿನ ಕೆಲವು ದೃಶ್ಯಗಳು ಈಗ ಬಹಿರಂಗವಾಗಿವೆ. ಕ್ರೈಸ್ತರ ಕುಕೀ ಜನಾಂಗದಲ್ಲಿನ ಮಹಿಳೆಯರಿಗೆ ಹಿಂಸಾತ್ಮಕ ಸಮೂಹವು ಅತ್ಯಂತ ಅಸಹ್ಯಕರ ಮತ್ತು ಅಮಾನುಷ ರೀತಿಯಲ್ಲಿ ವರ್ತಿಸಿದ್ದಾರೆ. ಮಣಿಪುರದಲ್ಲಿ ಶಾಂತಿ ಸ್ತಾಪಿಸಲು ಪ್ರಯತ್ನಿಸಿತ್ತಿರುವವರು, ಕರ್ತವ್ಯ ನಿರತ ಜನರೇ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಕೇಂದ್ರ ಸರಕಾರದ ಮೌನ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೀತಿ ಈಗ ಬಹಿರಂಗವಾಗಿದೆ. ಜಾತಿಯ ದೃವೀಕರಣದ ಪ್ರಯತ್ನಗಳಿಗೆ ಸೋಲಿಸುವುದು, ಇದು ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಇಡುವ ಎಲ್ಲರ ಜವಾಬ್ದಾರಿ ಆಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಮಣಿಪುರದಲ್ಲಿನ ಕ್ರೈಸ್ತ ಕುಕೀ ಜನಾಂಗದವರು ಅಲ್ಲಿಯ ಹಿಂದೂ ಮೈತೆಯಿ ಜನಾಂಗಕ್ಕೆ ನ್ಯಾಯಾಲಯದ ಆದೇಶದಿಂದ ದೊರೆತಿರುವ ಅಧಿಕಾರ ನೀಡಿದ್ದರಿಂದ ಹಿಂಸಾಚಾರ ನಡೆಸುತ್ತಿದ್ದಾರೆ, ಇದು ಎಲ್ಲರಿಗೂ ತಿಳಿದಿರುವಾಗ ಈ ರೀತಿಯ ಹೇಳಿಕೆ ನೀಡಿ ಮುಖ್ಯಮಂತ್ರಿ ವಿಜಯನ್ ಇವರು ಗೋಬೇಲ್ಸ್ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ !
  • ಜಗತ್ತಿನಾದ್ಯಂತ ಮಾರ್ಕ್ಸ್ ವಾದಿಗಳಿಂದ ನಡೆದಿರುವಷ್ಟು ಹಿಂಸಾಚಾರ ಬೇರೆ ಯಾರು ಮಾಡಿಲ್ಲ, ಇದು ಕೂಡ ಇತಿಹಾಸವಿದೆ. ಅಷ್ಟೇ ಅಲ್ಲದೆ ಕೇರಳದಲ್ಲಿ ಕೂಡ ಸಾಮ್ಯವಾದಿಗಳಿಂದ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಗುರಿ ಮಾಡಲಾಗುತ್ತಿದೆ. ಇದರ ಬಗ್ಗೆ ವಿಜಯನ್ ಒಂದಾದರೂ ಬಾಯಿ ತೆರೆದಿರುವರೇ !
  • ಕೇರಳದಲ್ಲಿನ ಹಿಂದೂ ಮಹಿಳೆಯರನ್ನು ಲವ್ ಜಿಹಾದ್ ದಲ್ಲಿ ಸಿಲುಕಿಸಿ ಅವರನ್ನು ಇಸ್ಲಾಮಿಕ್ ಸ್ಟೇಟ್ ನಂತಹ ಭಯೋತ್ಪಾದಕ ಸಂಘಟನೆಯಲ್ಲಿ ಭರತಿ ಮಾಡಿರುವ ಘಟನೆಗಳು ಘಟಿಸಿರುವಾಗ ಮುಖ್ಯಮಂತ್ರಿ ವಿಜಯನ ಅದನ್ನು ನಿರಾಕರಿಸಿದ್ದಾರೆ. ಇದರಿಂದ ಅವರ ಮಾನಸಿಕತೆ ಏನು ಎಂದು ಗಮನಕ್ಕೆ ಬರುತ್ತದೆ !