ಮಣಿಪುರದ ಘಟನೆಯಿಂದ ಭಯೋತ್ಪಾದಕ ಸಂಘಟನೆ `ಮಿಜೋ ನ್ಯಾಷನಲ್ ಫ್ರಂಟ’ ನೀಡಿದ ಬೆದರಿಕೆಯ ಪರಿಣಾಮ !
ಐಝ್ಯಾಲ (ಮಿಜೋರಾಮ) – ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆ ಹಾಗೂ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದ ನಂತರ, ಮಿಜೋರಾಂನಲ್ಲಿ ವಾಸಿಸುವ ಮೈತೈ ಹಿಂದೂ ಸಮುದಾಯದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಹಿಂದೂಗಳಿಗೆ ಮಿಜೋರಾಂದಲ್ಲಿನ ಭಯೋತ್ಪಾದಕ ಸಂಘಟನೆ ‘ಮಿಜೋ ನ್ಯಾಷನಲ್ ಫ್ರಂಟ್’ನಿಂದ ರಾಜ್ಯವನ್ನು ತೊರೆಯುವಂತೆ ಬೆದರಿಕೆಯು ಹಾಕಿದೆ. ಆದ್ದರಿಂದ ಮಿಜೋರಾಂ ರಾಜ್ಯದಿಂದ ಮೈತೈ ಸಮುದಾಯದ ಜನರು ಸ್ಥಳಾಂತರವಾಗಲು ಆರಂಭಿಸಿದ್ದಾರೆ. ಕೆಲವರು ವಿಮಾನ ನಿಲ್ದಾಣಗಳು ಮತ್ತು ಇತರ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ. ಮತ್ತೊಂದೆಡೆ `ಅಗತ್ಯವಿದ್ದರೆ ಈ ಜನರನ್ನು ವಿಮಾನದ ಮೂಲಕ ಸುರಕ್ಷಿತವಾಗಿ ಮಣಿಪುರಕ್ಕೆ ಕರೆತರಲಾಗುವುದು’, ಎಂದು ಮಣಿಪುರ ಸರಕಾರವು ಹೇಳಿದೆ.
मैतेई लोगों का मिजोरम से पलायन, उनकी दुकानों का बहिष्कार: मिजोरम पुलिस जुटी सुरक्षा में, मणिपुर सरकार करेगी एयरलिफ्ट#Meitei #Mizoram #Manipur https://t.co/WjSouf05bq
— ऑपइंडिया (@OpIndia_in) July 23, 2023
೧. ಮಣಿಪುರದಲ್ಲಿ ಹಿಂಸಾಚಾರ ಆರಂಭವಾದಾಗಿನಿಂದ ಅಲ್ಲಿನ ೧೨ ಸಾವಿರ ೫೮೪ ಕುಕಿ ಮತ್ತು ಝೋಮಿ ಈ ಸಮುದಾಯದ ಜನರು ಮಿಜೋರಾಂನಲ್ಲಿ ಆಶ್ರಯ ಪಡೆದಿದ್ದಾರೆ. ಮಿಜೋರಾಂನದಲ್ಲಿನ `ಮಿಜೋ ನ್ಯಾಷನಲ ಫ್ರಂಟ್’ ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿದ ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದೆ. ಇದೇ ಸಂಘಟನೆಯು ಮಿಜೋರಾಂನಲ್ಲಿ ವಾಸಿಸುತ್ತಿರುವ ಮೈತೈ ಸಮುದಾಯದ ಜನರಿಗೆ ಬೆದರಿಕೆ ಹಾಕಿತ್ತು.
೨. ಮಿಜೋರಾಂನ ರಾಜಧಾನಿಯಾದ ಐಝ್ಯಾಲನಲ್ಲಿ ಸರಕಾರಿ ನೌಕರರು, ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಸೇರಿದಂತೆ ಮೈತೈ ಸಮುದಾಯದ ಸುಮಾರು ೨ ಸಾವಿರ ಜನರು ವಾಸಿಸುತ್ತಿದ್ದರು. ಬೆದರಿಕೆಯ ನಂತರ ಐಝ್ಯಾಲನಲ್ಲಿನ ಮೈತೈಯ ಸುರಕ್ಷತೆಗಾಗಿ ಪ್ರತಿ ಸ್ಥಳದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಪೊಲೀಸ್ ಉಪಮಹಾನಿರೀಕ್ಷಕರು ಆದೇಶವನ್ನು ಹೊರಡಿಸಿದ್ದಾರೆ.
ಸಂಪಾದಕೀಯ ನಿಲುವು
|