ಶೇಕಡ ೫೬ ಯುವತಿಯರು ಹಾಗೂ ಶೇಕಡ ೩೨ ಪುರುಷರು ಮನೆಯಿಂದ ದೂರ ಇದ್ದರೆ ದೈಹಿಕ ಸಂಬಂಧ ಬೆಳೆಸುತ್ತಾರೆ !

ಕೇಂದ್ರ ಸರಕಾರದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ನಿಷ್ಕರ್ಷ !

ಭಾರತದಲ್ಲಿನ ಸಾಮಾಜಿಕ ನೈತಿಕತೆ ಅಧೋಗತಿಗೆ ಹೋಗಿರುವುದು ದ್ದೋತಕವಾಗಿದೆ !

ನವ ದೆಹಲಿ – ಕೇಂದ್ರ ಸರಕಾರದಿಂದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ) ನಡೆಸಲಾಯಿತು. ಅದರಲ್ಲಿ ಭಾರತೀಯರಿಗೆ HIV ರೋಗದ ಬಗ್ಗೆ ಕೆಲವು ಪ್ರಶ್ನೆ ಕೇಳಿದಾಗ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಪತಿ ಮತ್ತು ಪತ್ನಿ ಹೊರಗಿನ ಜನರೊಂದಿಗೆ ದೈಹಿಕ ಸಂಬಂಧ ಇಟ್ಟುಕೊಳ್ಳುವುದು ಬೆಳಕಿಗೆ ಬಂದಿದೆ. ಇದರಿಂದ HIV ರೋಗ ತಗಲುವ ಅಪಾಯ ಹೆಚ್ಚಾಗುತ್ತದೆ, ಎಂಬುದು ಗಮನಕ್ಕೆ ಬಂದಿದೆ. ಶೇಕಡ ೫೬ ಯುವತಿಯರು, ಅವರು ಮನೆಯ ಹೊರಗೆ ಇರುವಾಗ ದೈಹಿಕ ಸಂಬಂಧ ಇಟ್ಟುಕೊಳ್ಳುತ್ತಾರೆ ಎಂದು ಒಪ್ಪಿಕೊಂಡಿದ್ದಾರೆ ಹಾಗೂ ಶೇಕಡ ೩೨ ಪುರುಷರು ಮನೆಯ ಹೊರಗೆ ಇರುವಾಗ ದೈಹಿಕ ಸಂಬಂಧ ಹೊಂದಲು ಪ್ರಾಧಾನ್ಯತೆ ನೀಡುತ್ತಾರೆ.

೧. ಈ ಸಮೀಕ್ಷೆಯಲ್ಲಿ ೧೫ ರಿಂದ ೪೯ ವಿಯೋಮಾನದ ಮಹಿಳೆಯರು ಮತ್ತು ಪುರುಷರನ್ನು ಅವರ ಒಂದು ವರ್ಷದಲ್ಲಿನ ಲೈಂಗಿಕ ಜೀವನದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆ ಸಮಯದಲ್ಲಿ ಶೇಕಡಾ ೧ ರಷ್ಟು ಪುರುಷರ ಒಬ್ಬರಕ್ಕಿಂತ ಹೆಚ್ಚು ಮಹಿಳೆಯರೊಂದಿಗೆ ದೈಹಿಕ ಸಂಬಂಧ ಇದೆ ಎಂದು ಹೇಳಿದರು. ಶೇಕಡ ೧ ಕ್ಕಿಂತ ಕಡಿಮೆ ಮಹಿಳೆಯರು ಮತ್ತು ಶೇಕಡ ೪ ರಷ್ಟು ಪುರುಷರ ಹೇಳಿಕೆಯ ಪ್ರಕಾರ, ಅವರು ಪತಿ-ಪತ್ನಿ ಅಥವಾ ಜೊತೆಗಾರನ ಬಿಟ್ಟು ಇತರರ ಜೊತೆಗೆ ದೈಹಿಕ ಸಂಬಂಧ ಇಟ್ಟುಕೊಂಡಿದ್ದಾರೆ.

೨. ಒಂದು ತಿಂಗಳಕ್ಕಿಂತಲೂ ಹೆಚ್ಚಿನ ಕಾಲ ಮನೆಯ ಹೊರಗೆ ಇದ್ದಾಗ ಕೂಡ ಇತರರೊಂದಿಗೆ ದೈಹಿಕ ಸಂಬಂಧ ನಿರ್ಮಾಣವಾಗುವ ಸಾಧ್ಯತೆ ಹೆಚ್ಚುತ್ತದೆ ಎಂದು ಈ ಸಮೀಕ್ಷೆಯಿಂದ ತಿಳಿದು ಬಂದಿದೆ. ಇದರಲ್ಲಿಯೂ ಸುಶಿಕ್ಷಿತರು ಮತ್ತು ಶ್ರೀಮಂತ ಜನರಲ್ಲಿ ಈ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತದೆ.

೩. ಮಹಿಳೆ ಮತ್ತು ಪುರುಷರ ಸರಾಸರಿ ೭ ದಿನದ ಅಂತರದಲ್ಲಿ ದೈಹಿಕ ಸಂಬಂಧ ಬೆಳೆಸುತ್ತಾರೆ ಹಾಗೂ ವಯಸ್ಸಾದಂತೆ ಮಹಿಳೆಯರೊಂದಗಿನ ಸಂಬಂಧ ಇಡುವ ಅಂತರದಲ್ಲಿ ಹೆಚ್ಚಳವಾಗುತ್ತದೆ. ಯಾವ ಪುರುಷರ ಮತ್ತು ಮಹಿಳೆಯರ ವಿವಾಹಕ್ಕೆ ಬಹಳಷ್ಟು ಸಮಯ ಕಳೆದಿದೆಯೋ ಇಂತಹ ವ್ಯಕ್ತಿ ಅವಿವಾಹಿತ ಜನರಕ್ಕಿಂತ ಕಡಿಮೆ ಪ್ರಮಾಣದಲ್ಲಿ ಶಾರೀರಿಕ ಸಂಬಂಧ ಇಟ್ಟುಕೊಳ್ಳುತ್ತಾರೆ.

೪. ಒಂದುವೇಳೆ ಮಹಿಳೆ ತಿಂಗಳಿಗಿಂತ ಹೆಚ್ಚು ಕಾಲ ಹೊರಗೆ ಉಳಿದರೆ, ಅವರ ದೈಹಿಕ ಸಂಬಂಧ ಇಟ್ಟುಕೊಳ್ಳುವ ಜೊತೆಗಾರರ ಸಂಖ್ಯೆ ಸರಾಸರಿ ಶೇಕಡ ೨.೩ ರಷ್ಟು ಹೆಚ್ಚಾಗಿರುವುದು ಕಾಣುತ್ತದೆ.

ಸಂಪಾದಕರ ನಿಲುವು

* ಇಲ್ಲಿಯವರೆಗೆ ಸಮಾಜಕ್ಕೆ ಸರಕಾರದಿಂದ ಸಾಧನೆ ಕಲಿಸಿ ಅವರಿಂದ ಧರ್ಮಾಚರಣೆ ಮಾಡಿಸಿಕೊಳ್ಳದಿರುವುದರ ಪರಿಣಾಮವಾಗಿದೆ. ಇದನ್ನು ಬದಲಾಯಿಸುವುದಕ್ಕೆ ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ !