ದಕ್ಷಿಣ ಕೊರಿಯಾದಿಂದ ಉತ್ತರ ಕೊರಿಯಾಕ್ಕೆ ಎಚ್ಚರಿಕೆ

  • ಉತ್ತರ ಕೊರಿಯಾ ಹಳದಿ (ಯೆಲ್ಲೊ) ಸಮುದ್ರದಲ್ಲಿ ಅನೇಕ ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿದ ಪರಿಣಾಮ !

  • ಪರಮಾಣು ಅಸ್ತ್ರಗಳಿಂದ ದಾಳಿ ನಡೆಸಿದರೆ ಸರ್ವಾಧಿಕಾರಿ ಕಿಮ್ ಜೊಂಗ್ ಆಡಳಿತವನ್ನು ನಾವು ಕೊನೆಗಾಣಿಸುತ್ತೇವೆ !

ಸಿಯೋಲ್ (ದಕ್ಷಿಣ ಕೊರಿಯಾ) – ಉತ್ತರ ಕೊರಿಯಾ ಜುಲೈ 22 ರಂದು ಹಳದಿ (ಯಲ್ಲೊ) ಸಮುದ್ರದಲ್ಲಿ ಅನೇಕ ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿದ್ದರಿಂದ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. `ಉತ್ತರ ಕೊರಿಯಾ ಪರಮಾಣು ಅಸ್ತ್ರಗಳಿಂದ ದಾಳಿ ನಡೆಸಿದರೆ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಡಳಿತವನ್ನು ಕೊನೆಗಾಣಿಸುತ್ತೇವೆ’ ಎಂದು ದಕ್ಷಿಣ ಕೊರಿಯಾ ಎಚ್ಚರಿಕೆ ನೀಡಿದೆ. ಜುಲೈ 19 ರಂದು ದಕ್ಷಿಣ ಕೊರಿಯಾದ ಬಂದರಿನಲ್ಲಿ ಅಮೇರಿಕೆಯು ತನ್ನ ಪರಮಾಣು ಜಲಾಂತರ್ಗಾಮಿ ನೌಕೆಯನ್ನು ನೇಮಿಸಿದ ಬಳಿಕ ಉತ್ತರ ಕೊರಿಯಾ ಕ್ಷಿಪಣಿಗಳನ್ನು ಹಾರಿಸಿದೆ.

ಉತ್ತರ ಕೊರಿಯಾದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಅಮೇರಿಕಾ ಮತ್ತು ದಕ್ಷಿಣ ಕೊರಿಯಾ ತಮ್ಮ ನಡುವಿನ ರಕ್ಷಣಾ ಸಹಕಾರವನ್ನು ಹೆಚ್ಚಿಸುತ್ತಿವೆ. ಇದಕ್ಕಾಗಿ ಸೇನಾ ಸಮರಾಭ್ಯಾಸವನ್ನು ನಡೆಸುತ್ತಿವೆ. ಅವರಿಗೆ ಜುಲೈ 20 ರಂದು ಉತ್ತರ ಕೊರಿಯಾ ರಕ್ಷಣಾ ಸಚಿವ ಕಾಂಗ್ ಸನ್ ನಾಮ್ ಇವರು. `ಉತ್ತರ ಕೊರಿಯಾ ಅವರ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳ ಮೂಲಕ ಪ್ರತೀಕಾರ ತೀರಿಸಿಕೊಳ್ಳಬಹುದು’ ಎಂದು ಬೆದರಿಕೆ ಹಾಕಿದ್ದರು.