ಇಸ್ಲಾಮಾಬಾದ – ಉಕ್ರೇನಿನ ವಿದೇಶಾಂಗ ಮಂತ್ರಿಗಳಾದ ದಿಮಿತ್ರೋ ಕುಲೆಬಾರವರು ಎರಡು ದಿನಗಳ ಪಾಕಿಸ್ತಾನ ಪ್ರವಾಸದಲ್ಲಿದ್ದಾರೆ. ರಷ್ಯಾವು ಕಷ್ಟಕಾಲದಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡಿತ್ತು. ಇಂತಹ ಪರಿಸ್ಥಿತಿಯಲ್ಲಿ ಉಕ್ರೇನಿನ ವಿದೇಶಾಂಗ ಸಚಿವರ ಈ ಪ್ರವಾಸದ ಬಗ್ಗೆ ರಷ್ಯಾವು ಅಸಮಾಧಾನ ವ್ಯಕ್ತಪಡಿಸಿದೆ. ಪಾಕಿಸ್ತಾನದ ದ್ವಿಮುಖ ನೀತಿಯಿಂದಾಗಿ ರಷ್ಯಾದ ರಾಷ್ಟ್ರಾಧ್ಯಕ್ಷರಾದ ವ್ಲಾದಿಮೀರ ಪುತಿನರವರು ಕೋಪಗೊಂಡಿದ್ದಾರೆ.
ಪಾಕಿಸ್ತಾನ ತಾನು ಉಕ್ರೇನಿಗೆ ಶಸ್ತ್ರಾಸ್ತ್ರ ಪೂರೈಸುತ್ತಿಲ್ಲ ಎಂದು ಹೇಳಿಕೊಂಡಿದೆ. ಆದರೂ ಕೆಲವು ವರದಿಗಳಲ್ಲಿ ಪಾಕಿಸ್ತಾನವು ಉಕ್ರೇನಿಗೆ ನೇರವಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸದೆ ಮೂರನೆಯ ದೇಶದ ಮೂಲಕ ಪೂರೈಕೆ ಮಾಡುತ್ತಿರುವುದಾಗಿ ಹೇಳಲಾಗಿದೆ. ಪಾಕಿಸ್ತಾನವು ತನ್ನ ತಟಸ್ಥ ಭೂಮಿಕೆಯನ್ನು ಬಿಟ್ಟು ಉಕ್ರೇನಿಗೆ ನೇರವಾಗಿ ಬೆಂಬಲಿಸಬೇಕು ಎಂಬ ಇಚ್ಛೆಯನ್ನು ಉಕ್ರೇನಿನ ವಿದೇಶಾಂಗ ಸಚಿವರು ವ್ಯಕ್ತಪಡಿಸಿದ್ದಾರೆ.