ನವ ದೆಹಲಿ – ರೈಲಿನಲ್ಲಿ ಓರ್ವ ಹಿಂದೂ ಪ್ರಯಾಣಿಕನಿಗೆ ಹಲಾಲ ಪ್ರಮಾಣ ಪತ್ರ ಇದ್ದ ಚಹಾದ ಪಾಕೀಟ್ ನೀಡಿದಕ್ಕೆ ಅಸಮಾಧಾನಗೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂಬಂಧ ಪಟ್ಟ ಹಿಂದೂ ಧರ್ಮ ಪ್ರೇಮಿಯೂ ಈ ಘಟನೆಯ ವಿಡಿಯೋ ಮಾಡಿ ಅಲ್ಲಿ ಉಪಸ್ಥಿತರಿದ್ದ ರೈಲು ಅಧಿಕಾರಿಗಳಿಗೆ ಇದರ ಬಗ್ಗೆ ಪ್ರಶ್ನೆ ಕೇಳಿದರು. ವಿಡಿಯೋದಲ್ಲಿ, ಹಿಂದೂ ಧರ್ಮ ಪ್ರೇಮಿಯು, ‘ದೇಶ ಜತ್ಯತೀತವಾಗಿರುವಾಗ ಈ ರೀತಿಯ ಹಲಾಲ ಪ್ರಮಾಣ ಪತ್ರ ಇರುವ ಚಹಾ ಹೇಗೆ ನೀಡುತ್ತೀರಿ ?’ ಎಂದು ಕೇಳಿದರು. ಅಧಿಕಾರಿಗಳಿಗೆ ಹಲಾಲ ಪ್ರಮಾಣ ಪತ್ರದ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದು ಅವರ ಉತ್ತರದಿಂದ ಕಂಡು ಬರುತ್ತದೆ. ಅವರು ಧರ್ಮಪ್ರೇಮಿಗೆ, ಚಹಾ ಶಾಕಾಹಾರಿಯಾಗಿದೆ ಎಂದು ಹೇಳುತ್ತಿದ್ದಾರೆ.
Did you know ⁉️@IRCTCofficial serves Halal certified food in trains. @RailMinIndia & @MoTmv need to mandate ‘secular’ entities like IRCTC and Tourism Corporation to refrain from providing ‘Halal’ food products.
Sign petition and demand the Govt. to #Ban_Halal
📝… pic.twitter.com/SP8CfHMwGS— HinduJagrutiOrg (@HinduJagrutiOrg) July 20, 2023
ಸಂಪಾದಕರ ನಿಲುವು* ಓರ್ವ ಹಿಂದೂ ಧರ್ಮಪ್ರೇಮಿಯಿಂದ ರೈಲ್ವೆ ಅಧಿಕಾರಿಗಳ ಬಳಿ ಆಕ್ಷೇಪ ವ್ಯಕ್ತ ! * ಜಾತ್ಯತೀತ ಭಾರತದಲ್ಲಿನ ಸರಕಾರಿ ಸಂಸ್ಥೆಯಾಗಿರುವ ರೈಲ್ವೆ ಇಲಾಖೆಯೂ ಕೂಡ ಹಲಾಲ ಪ್ರಮಾಣ ಪತ್ರವಿರುವ ಚಹಾ ಹೇಗೆ ಮಾರುತ್ತಿದೆ ? ಇದಕ್ಕೆ ಕಾರಣಕರ್ತರಾಗಿರುವ ಸರಕಾರಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದು ಆವಶ್ಯಕ ! |