ಕೋಲಕಾತಾ (ಬಂಗಾಲ) -ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ಚಾಕು ಮತ್ತು ಇತರೆ ಮಾರಕಾಸ್ತ್ರಗಳೊಂದಿಗೆ ನುಗ್ಗಲು ಪ್ರಯತ್ನಿಸಿದ ನೂರ ಅಲಂ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ಯುವಕನ ಬಳಿ ವಿವಿಧ ತನಿಖಾ ಸಂಸ್ಥೆಗಳ ಗುರುತಿನ ಚೀಟಿಯೂ ಪತ್ತೆಯಾಗಿದ್ದು, ಅವನ ಚತುಷ್ಚಕ್ರ ವಾಹನದ ಮೇಲೆ `ಪೊಲೀಸ್’ ಎಂಬ ಸ್ಟಿಕ್ಕರ್ ಅಂಟಿಸಲಾಗಿದೆ. (ಹೀಗೆ ಮಾಡಿ ಮುಖ್ಯಮಂತ್ರಿಗಳ ನಿವಾಸಸ್ಥಾನಕ್ಕೆ ತಲುಪಲು ಸಾಧ್ಯವಿದ್ದರೆ, ಪೊಲೀಸರು ಯಾವ ರೀತಿಯ ಭದ್ರತೆಯನ್ನು ನೀಡುತ್ತಿದ್ದಾರೆ? ಎನ್ನುವ ಕಲ್ಪನೆಯನ್ನು ಮಾಡಬಹುದು- ಸಂಪಾದಕರು) ಇದೇ ವಾಹನದಿಂದ ನೂರ ಅಲಂ ಮುಖ್ಯಮಂತ್ರಿಗಳ ನಿವಾಸಸ್ಥಾನವನ್ನು ತಲುಪಿದ್ದನು. ನೂರ ಅಲಂ ಯಾಕೆ ಈ ಕೃತ್ಯವನ್ನು ಎಸಗಿದ್ದಾನೆ? ಎನ್ನುವುದು ಇನ್ನೂ ತಿಳಿದು ಬಂದಿಲ್ಲ.
Kolkata Police arrested a man with arms for trying to enter West Bengal CM Mamata Banerjee’s residence
Click on the 🔗 to read more: https://t.co/oS8n7cp2ht#ABPLive #Bengal #CM #MamtaBanerjee #Arrest pic.twitter.com/qudOvIknKq
— ABP LIVE (@abplive) July 21, 2023
ಸಂಪಾದಕರ ನಿಲುವು* ಮಮತಾ ಬ್ಯಾನರ್ಜಿಯವರ ಸರಕಾರ ಮುಸಲ್ಮಾನರಿಗಾಗಿ ಎಲ್ಲವನ್ನೂ ಮಾಡುತ್ತಿರುವಾಗ ಮುಸಲ್ಮಾನರು ಯಾಕೆ ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ? ಸರಕಾರ ಈ ಬಗ್ಗೆ ಯೋಚಿಸುವ ಆವಶ್ಯಕತೆಯಿದೆ. |