ಸಮಾಜಕ್ಕಿಂತ ಬೇರೆ ಎಂಬಂತೆ ನ್ಯಾಯಧೀಶರು ವಿಶೇಷ ಸೌಲಭ್ಯಗಳ ಲಾಭ ಪಡೆಯಬಾರದು !- ನ್ಯಾಯಮೂರ್ತಿ ಧನಂಜಯ ಚಂದ್ರಚೂಡ

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಇವರು ದೇಶದಲ್ಲಿರುವ ಎಲ್ಲಾ ಉಚ್ಚ ನ್ಯಾಯಾಲಯದಲ್ಲಿನ ಮುಖ್ಯ ನ್ಯಾಯಮೂರ್ತಿಗಳಿಗೆ ಕಿವಿ ಹಿಂಡಿದರು !

ನ್ಯಾಯಮೂರ್ತಿ ಧನಂಜಯ ಚಂದ್ರಚೂಡ

ನವದೆಹಲಿ – ನ್ಯಾಯಧೀಶರು, ತಾವು ಸಮಾಜಕ್ಕಿಂತ ಬೇರೆ ಎಂದು ಬಿಂಬಿಸುವಂತಹ ವಿಶೇಷ ಸೌಲಭ್ಯಗಳ ಉಪಯೋಗ ಮಾಡಬಾರದು. ಇಂತಹ ಸೌಲಭ್ಯಗಳ ಯೋಗ್ಯ ರೀತಿಯಲ್ಲಿ ಬಳಕೆಯು ನ್ಯಾಯಾಂಗದ ವಿಶ್ವಾಸಾರ್ಹತೆ ಮತ್ತು ನ್ಯಾಯಸಮ್ಮತತೆಯನ್ನು ಕಾಪಾಡುತ್ತದೆ. ಸಮಾಜದಲ್ಲಿ ನ್ಯಾಯಮೂರ್ತಿಗಳ ಮೇಲಿನ ವಿಶ್ವಾಸ ಶಾಶ್ವತವಾಗಿಸುತ್ತದೆ, ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಧನಂಜಯ ಚಂದ್ರಚೂಡ ಇವರು ನ್ಯಾಯಮೂರ್ತಿಗಳ ಕಿವಿ ಹಿಂಡಿದರು. ‘ನ್ಯಾಯಾಂಗದ ಅಡಿಯಲ್ಲಿ ಮೌಲ್ಯಮಾಪನ ಮತ್ತು ಸಮಾಲೋಚನೆ ನಡೆಸುವುದು ಆವಶ್ಯಕವಾಗಿದೆ. ಇತರರಿಗೆ ತೊಂದರೆಯಾಗುವಂತೆ ವಿಶೇಷ ಸೌಲಭ್ಯಗಳ ಉಪಯೋಗ ಮಾಡಬಾರದು. ಜನರ ಟೀಕೆಗಳಿಗೆ ಆಸ್ಪದ ಕೊಡಬಾರದು’ ಎಂದು ಸಹ ಅವರು ಹೇಳಿದರು.

ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಇವರು ದೇಶದಲ್ಲಿನ ಎಲ್ಲಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಧೀಶರನ್ನುದ್ದೇಶಿಸಿ ಬರೆದಿರುವ ಪತ್ರವು ಜಾಲತಾಣದಲ್ಲಿ ಪ್ರಸಾರವಾಗಿದೆ. ಈ ಪತ್ರದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಇತ್ತೀಚೆಗೆ ನಡೆದಿರುವ ಒಂದು ಪ್ರಕರಣದ ಸಂದರ್ಭದಲ್ಲಿ ನ್ಯಾಯಧೀಶರ ಕಿವಿ ಹಿಂಡಿದರು. ಕೆಲವು ದಿನಗಳ ಹಿಂದೆ ಉಚ್ಚ ನ್ಯಾಯಾಲಯದ ಓರ್ವ ಮುಖ್ಯ ನ್ಯಾಯಧೀಶರು ರೈಲಿನ ಸಂದರ್ಭದಲ್ಲಿನ ತಮ್ಮ ಕೆಟ್ಟ ಅನುಭವದ ಬಗ್ಗೆ ರೈಲು ವ್ಯವಸ್ಥಾಪಕರಿಗೆ ಪತ್ರ ಬರೆದು ಸಂಬಂಧಪಟ್ಟ ವ್ಯಕ್ತಿಗಳಿಂದ ಮಾಹಿತಿ ಪಡೆಯಲು ಹೇಳಿದ್ದರು. ಈ ಕುರಿತು ಮುಖ್ಯ ನ್ಯಾಯಮೂರ್ತಿಗಳು ಎಲ್ಲಾ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಇವರು ಪತ್ರದಲ್ಲಿ ಈ ಪ್ರಕರಣವನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ಅವರು, ರೈಲು ೩ ಗಂಟೆ ತಡವಾಗಿ ಬಂದಿತು; ಆದರೆ ಆಗಾಗ ಹೇಳಿದರೂ ನ್ಯಾಯಧೀಶರನ್ನು ನೋಡಿಕೊಳ್ಳಲು ಓರ್ವ ರೈಲ್ವೆ ಪೊಲೀಸ ಅಧಿಕಾರಿ ಕೂಡ ಬೋಗಿಯಲ್ಲಿ ಇರಲಿಲ್ಲ. ಹಾಗೂ ತಿಂಡಿ ಪೂರೈಕೆಗಾಗಿ ಅಡಿಗೆ ವಿಭಾಗದ ಸಿಬ್ಬಂದಿಗಳೂ ಉಪಸ್ಥಿತರಿರಲಿಲ್ಲ. ಅದಕ್ಕಾಗಿ ಪೆನ್ಟ್ರಿ ಕಾರ್ (ರೈಲಿನಲ್ಲಿನ ಅಡುಗೆ ವಿಭಾಗದ ಬೋಗಿ) ವ್ಯವಸ್ಥಾಪಕರಿಗೆ ಮೊಬೈಲ್ ಮೂಲಕ ಸಂಪರ್ಕಿಸಿದಾಗ ಅವರು ಕರೆಯನ್ನು ಸ್ವೀಕರಿಸಲಿಲ್ಲ. ಇದರಿಂದ ಮುಖ್ಯ ನ್ಯಾಯಧೀಶರು ವಿಪರೀತ ಅಸಮಾಧಾನಗೊಂಡರು. ಆದ್ದರಿಂದ ಅವರಿಗೆ, ನೀವು ಸಂಬಂಧಪಟ್ಟ ಅಧಿಕಾರಿಗಳಿಂದ ಇದರ ಬಗ್ಗೆ ವರದಿ ತರಿಸಿಕೊಳ್ಳಬೇಕು ಎಂಬ ಇಚ್ಛೆ ಇತ್ತು. ಈ ಪತ್ರವು ಒಂದು ಉಚ್ಚ ನ್ಯಾಯಾಲಯದ ಶಿಷ್ಟಾಚಾರ ಇಲಾಖೆಯ ಅಧಿಕಾರಿಗಳು ರೈಲಿನ ವ್ಯವಸ್ಥಾಪಕರಿಗೆ ಕಳುಹಿಸಿದರು. ಉಚ್ಚ ನ್ಯಾಯಾಲಯದ ನ್ಯಾಯಧೀಶರಿಗೆ ರೈಲ್ವೆ ಅಧಿಕಾರಿಗಳ ಮೇಲೆ ಶಿಸ್ತಭಂಗದ ಕ್ರಮ ಕೈಗೊಳ್ಳುವ ಅಧಿಕಾರವಿಲ್ಲ. ಆದ್ದರಿಂದ ಉಚ್ಚ ನ್ಯಾಯಾಲಯದಲ್ಲಿ ಯಾವುದೇ ಅಧಿಕಾರಿಗಳಿಗೆ ರೇಲ್ವೆ ಅಧಿಕಾರಿಗಳಿಂದ ವರದೀತರಿಸಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.