ತಮಿಳುನಾಡಿನಲ್ಲಿ ಸಿಕ್ಕಿಬಿದ್ದ ಇಸ್ಲಾಮಿಕ್ ಸ್ಟೇಟ್‌ನ ಭಯೋತ್ಪಾದಕ !

ಚೆನ್ನೈ – ಇತ್ತೀಚೆಗೆ ರಾಷ್ಟ್ರೀಯ ತನಿಖಾ ದಳವು ತಮಿಳುನಾಡಿನಲ್ಲಿ ‘ಇಸ್ಲಾಮಿಕ್ ಸ್ಟೇಟ್’ನ ಕಟ್ಟರ ಜಿಹಾದಿ ಭಯೋತ್ಪದಾಕ ಸಂಘಟನೆಯ ಭಯೋತ್ಪಾದಕನನ್ನು ಬಂಧಿಸಿದೆ. ಕೇರಳದಲ್ಲಿನ ಹಿಂದೂ ಧಾರ್ಮಿಕ ಸ್ಥಳಗಳು ಮತ್ತು ನಾಯಕರ ಮೇಲೆ ದಾಳಿ ಮಾಡುವ ಸಂಚಾಗಿತ್ತು. ರಾಜ್ಯದಲ್ಲಿ ಭಯೋತ್ಪಾದನೆಯನ್ನು ಹಬ್ಬಿಸುವುದು ಮತ್ತು ಕೋಮುಗಲಭೆ ಸೃಷ್ಟಿಸುವುದು ಇಸ್ಲಾಮಿಕ್ ಸ್ಟೇಟ್‌ನ ಉದ್ದೇಶವಾಗಿತ್ತು. ಆತನ ಈ ಸಂಚು ವಿಫಲಗೊಳಿಸಲು ಪಾಲಕ್ಕಡನ ಒಂದು ಮತ್ತು ತ್ರಿಶೂರನಲ್ಲಿನ ಮೂರು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ, ಎಂದು ರಾಷ್ಟ್ರೀಯ ತನಿಖಾ ದಳದ ವಕ್ತಾರರು ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ ರಾಷ್ಟ್ರೀಯ ತನಿಖಾ ದಳವು ಆರೋಪಿಗಳ ಪೈಕಿ ಒಬ್ಬನಾದ ಆಶಿಫ್ ಅಲಿಯಾಸ್ ಅಶ್ರಫ್ ನನ್ನು ತಮಿಳುನಾಡಿನ ಸತ್ಯಮಂಗಲಂನಿಂದ ಬಂಧಿಸಲಾಗಿದೆ.

ಮರುದಿನ ಆಶಿಫನ ಜೊತೆ ಸೈಯದ್ ನಬೀಲ ಅಹಮದ, ತ್ರಿಶೂರಿನ ಶಿಯಾ ಟಿ.ಎಸ್. ಮತ್ತು ಪಲಕ್ಕಡನಲ್ಲಿರುವ ರಯಿಶ ಅವರ ಮನೆಗಳನ್ನು ತನಿಖೆ ಮಾಡಲಾಯಿತು. ಆ ಸಮಯದಲ್ಲಿ ಸಂದೇಹಾಸ್ಪದ ಅತ್ಯಾಧುನಿಕ ಉಪಕರಣಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿ ಆಶಿಫ ಇಸ್ಲಾಮಿಕ್ ಸ್ಟೇಟನ ಭಯೋತ್ಪಾದಕ ಚಟುವಟಿಕೆಗಳಿಗೆ ನಿಧಿ ಸಂಗ್ರಹಿಸಲು ತೊಡಗಿದ್ದ.

ಸಂಪಾದಕರ ನಿಲುವು

* ಭಯೋತ್ಪಾದಕರ ಮೇಲೆ ಅಂಕುಶ ಬೀಳುವಂತಹ ಯಾವುದೇ ರೀತಿಯ ಕಠಿಣ ಕ್ರಮಕೈಗೊಳ್ಳದ ಪರಿಣಾಮ, ಅವರ ಮನೋಬಲ ಹೆಚ್ಚುತ್ತದೆ ಮತ್ತು ಅವರು ಪದೇ ಪದೇ ವಿಧ್ವಂಸಕ ಕೃತ್ಯಗಳನ್ನು ಮಾಡಲು ಧೈರ್ಯ ಮಾಡುತ್ತಾರೆ !