‘ಪಿ.ಎಫ್.ಐ.’ನ ಜಿಹಾದಿ ಭಯೋತ್ಪಾದಕ ಉಸ್ಮಾನ್ ಸುಲ್ತಾನ್ ಖಾನ್ ಬಿಹಾರದ ಮದರಸಾದಿಂದ ಬಂಧನ !

ಯುವಕರಿಗೆ ಭಯೋತ್ಪಾದನೆ ತರಬೇತಿ ನೀಡುವ ಖಾನ್ ನನ್ನು ಹಲವು ವರ್ಷಗಳ ಕಾಲ ರಾಷ್ಟ್ರೀಯ ತನಿಖಾ ದಳವು ಶೋಧ ಕಾರ್ಯ ನಡೆಯುತ್ತಿತ್ತು !

ಪಟ್ಲಿಪುತ್ರ (ಬಿಹಾರ) – ರಾಷ್ಟ್ರೀಯ ತನಿಖಾ ದಳವು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ‘ಪಿ.ಎಫ್‌ಐ.’ ನ ಜಿಹಾದಿ ಭಯೋತ್ಪಾದಕ ಉಸ್ಮಾನ್ ಸುಲ್ತಾನ್ ಖಾನ್ ಅಲಿಯಾಸ್ ಯಾಕೂಬ್‌ನನ್ನು ರಾಜ್ಯದ ಪೂರ್ವ ಚಂಪಾರಣ್ ಜಿಲ್ಲೆಯ ಚಾಕಿಯಾ ಗ್ರಾಮದ ಬನ್ಸ್‌ಘಾಟ್‌ ನಿಂದ ಬಂಧಿಸಿದೆ. ಇಲ್ಲಿನ ಗವಂದ್ರಾ ಗ್ರಾಮದ ಮದರಸಿನಲ್ಲಿ ಅವನನ್ನು ಬಂಧಿಸಲಾಗಿದೆ. ಇವನು ಇಮದಪಟ್ಟಿ ಗ್ರಾಮದವನಾಗಿದ್ದಾನೆ. ಬಿಹಾರ ಪೊಲೀಸರು ಮತ್ತು ಪಾಟ್ನಾ ಉಗ್ರ ನಿಗ್ರಹ ದಳ ಹಲವು ವರ್ಷಗಳಿಂದ ಆತನಿಗಾಗಿ ಹುಡುಕಾಟ ನಡೆಸಿತ್ತು.

1. ಖಾನ್ ಯುವ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿದ್ದನು. ಅವನನ್ನು ‘ಮಾಸ್ಟರ್ ಟ್ರೈನರ್’ ಎಂದೂ ಕರೆಯಲಾಗುತ್ತಿತ್ತು. ಈತ ಉತ್ತರ ಬಿಹಾರ ಮತ್ತು ಭಾರತ-ನೇಪಾಳ ಗಡಿ ಪ್ರದೇಶಗಳಲ್ಲಿ ಭಯೋತ್ಪಾದಕ ಯುವಕರ ದೊಡ್ಡ ಜಾಲವನ್ನೇ ಸೃಷ್ಟಿಸಿದ್ದ.

2. ಕೆಲವು ದಿನಗಳ ಹಿಂದೆ ಚಾಕಿಯಾ ಗ್ರಾಮದ ಗಾಂಧಿ ಮೈದಾನದಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿರುವ ವಿಡಿಯೋವೊಂದು ಹೊರಬಿದ್ದಿತ್ತು. ಈ ತರಬೇತಿಯು ಹಲವಾರು ದಿನಗಳವರೆಗೆ ಮುಂದುವರೆದಿತ್ತು; ಆದರೆ ಬಿಹಾರ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. (ಇದು ನಿಜವೇ ಆಗಿದ್ದರೆ, ಇಂತಹ ಅಕ್ಷಮ್ಯ ತಪ್ಪು ಮಾಡಿದ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಜೀವಾವಧಿ ಶಿಕ್ಷೆಯಾಗಬೇಕು ! – ಸಂಪಾದಕರು)

3. ಖಾನ್ ಬಂಧನದ ನಂತರ ತನಿಖೆಯಿಂದ ಹೆಚ್ಚಿನ ದಾಳಿಗಳನ್ನು ನಡೆಸಲಾಗುತ್ತಿದೆ.

4. ಕಳೆದ ಕೆಲವು ದಿನಗಳಲ್ಲಿ ಉಸ್ಮಾನ್ ಸುಲ್ತಾನ್ ಖಾನ್ ಸೇರಿದಂತೆ ಒಟ್ಟು 6 ಮಂದಿಯನ್ನು ಬಂಧಿಸಲಾಗಿದೆ. ಅವರಲ್ಲಿ ಮೊಹಮ್ಮದ್ ರಿಯಾಜ್ ಅಲಿಯಾಸ್ ಬಬ್ಲು, ಇರ್ಷಾದ್ ಆಲಂ, ಮುಮ್ತಾಜ್ ಅನ್ಸಾರಿ, ಮೊಹಮ್ಮದ್ ಅಫ್ರೋಜ್ ಮತ್ತು ಮೊಹಮ್ಮದ್ ನಜ್ರೆ ಆಲಂ ಅಲಿಯಾಸ್ ಬೆಚು ಸೇರಿದ್ದಾರೆ.

ಸಂಪಾದಕೀಯ ನಿಲುವು

ಜಿಹಾದಿ ಭಯೋತ್ಪಾದಕರು ಮದರಸಾಗಳಲ್ಲಿ ಅಡಗಿರುವುದು ಹಲವು ಬಾರಿ ಬೆಳಕಿಗೆ ಬಂದಿದೆ. ಮದರಸಾಗಳಲ್ಲಿ ಹಲವು ಅಕ್ರಮ ಚಟುವಟಿಕೆಗಳು ಆಗಾಗ ಬೆಳಕಿಗೆ ಬರುತ್ತಿವೆ. ಹೀಗಿದ್ದರೂ ಭಾರತಾದ್ಯಂತ ಇರುವ ಮದರಸಾಗಳನ್ನು ಸರಕಾರ ಏಕೆ ಮುಚ್ಚುವುದಿಲ್ಲ ಎಂದು ದೇಶಪ್ರೇಮಿಗಳಿಗೆ ಅನಿಸುತ್ತಿದೆ !