ಮೆರಠನ ದೇವಸ್ಥಾನದಲ್ಲಿನ ಹಿಂದೂ ಹೆಸರಿನಲ್ಲಿ ಮುಸಲ್ಮಾನ ಅರ್ಚಕ !

ಪೊಲೀಸರು ವಶಕ್ಕೆ ವಶಪಡೆದರು !

ಮುಸಲ್ಮಾನ “ಅರ್ಚಕ ಜಿಹಾದ್” !

(ಮಧ್ಯದಲ್ಲಿ) ಬಂಧಿತ ಗುಲ್ಲು ಖಾನ

ಮೆರಠ (ಉತ್ತರ ಪ್ರದೇಶ) – ಇಲ್ಲಿಯ ಮಟೌರ ಗ್ರಾಮದ ಶನಿ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದ ಗುಲ್ಲು ಖಾನ ಎಂಬ ವ್ಯಕ್ತಿ ಮುಸಲ್ಮಾನ ಎಂದು ಬಹಿರಂಗವಾದ ನಂತರ, ಪೊಲೀಸರು ಖಾನ್ ನನ್ನು ವಶಕ್ಕೆ ಪಡೆದಿದ್ದಾರೆ. ಈತ ಹರಿಯಾಣದ ಪಾಣಿಪತ ಮೂಲದವನು.

೧. ಈತ ಜನವರಿ ೨೦೨೩ ರಿಂದ ಈ ದೇವಾಲಯದಲ್ಲಿ ಅರ್ಚಕನಾಗಿದ್ದಾನೆ. ತನ್ನನ್ನು ಗುರ್ಜರನಾಥ ಮಹಾರಾಜ ಎಂದು ಹೇಳಿಕೊಂಡಿದ್ದಲ್ಲದೆ, ಈ ಹಿಂದೆ ಈತ ಹರಿಯಾಣದ ಡಿಗಲಬೆರಿ ರಸ್ತೆಯಲ್ಲಿರುವ ಬಾಬಾ ಗೋರಖನಾಥ ದೇವಸ್ಥಾನದಲ್ಲಿ ಅರ್ಚಕನಾಗಿದ್ದನು. ಆ ಬಳಿಕ ಮಟೌರ ಗ್ರಾಮದ ಜನರು ಆತನನ್ನು ದೇವಸ್ಥಾನದ ಸ್ವಚ್ಛತೆಯ ಕೆಲಸವನ್ನು ನೀಡಿದ್ದರು.

೨. ಕೆಲವು ತಿಂಗಳುಗಳಿಂದ ಅವನ ಮೇಲೆ ಯಾರಿಗೂ ಅನುಮಾನ ಬರಲಿಲ್ಲ. ಎರಡು ದಿನಗಳ ಹಿಂದೆ ಗುಲ್ಲು ಖಾನನಿಗೆ ಪರಿಚಯವಿದ್ದ ಕೃಷ್ಣಪಾಲ ಎಂಬ ಹೆಸರಿನ ವ್ಯಕ್ತಿ ಈ ದೇವಸ್ಥಾನಕ್ಕೆ ಬಂದಿದ್ದು, ಕೃಷ್ಣಪಾಲ ಅವರು ಗುಲ್ಲು ಖಾನ ಅನ್ನು ಗುರುತಿಸಿ ಗ್ರಾಮಸ್ಥರಿಗೆ ಗುಲ್ಲು ಬಗ್ಗೆ ನೈಜ ಮಾಹಿತಿ ತಿಳಿಸಿದರು. ಹಿಂದೂ ಸಂಘಟನೆಗಳಿಗೆ ಈ ಮಾಹಿತಿ ತಿಳಿದ ಮೇಲೆ ಅವರು ಪೊಲೀಸರಿಗೆ ಹೇಳಿದರು. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಆತನ ಆಧಾರ ಕಾರ್ಡ್ ನೋಡಿದಾಗ ಆತ ಮುಸಲ್ಮಾನ ಎಂಬುದು ಗೊತ್ತಾಗಿದೆ.

(ಸೌಜನ್ಯ :Local18 Uttar Pradesh)

ಸಂಪಾದಕರ ನಿಲುವು

ಒಂದು ಕಡೆ ಮತಾಂಧ ಮುಸಲ್ಮಾನರು ಹಿಂದೂಗಳ ದೇವಾಲಯಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡುತ್ತಾರೆ, ಇನ್ನೊಂದು ಕಡೆ ಪುರೋಹಿತರು ಮತ್ತು ಸಾಧುಗಳಂತೆ ನಟಿಸಿ ಹಿಂದೂಗಳನ್ನು ವಂಚಿಸುತ್ತಿದ್ದಾರೆ. ಇದು ಹಿಂದೂ ಧರ್ಮದ ಮೇಲಿನ ಆಘಾತವಾಗಿದ್ದು, ಹಿಂದೂಗಳು ಈ ಬಗ್ಗೆ ಎಚ್ಚರದಿಂದಿ ಇರುವುದು ಅವಶ್ಯಕವಾಗಿದೆ !