ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿ ಸಂತರ ಕೊಡುಗೆಯ ಮಹತ್ವ ! – ಪೂ. ಪರಮಾತ್ಮಾಜಿ ಮಹಾರಾಜರು

ಪೂ. ಪರಮಾತ್ಮಾಜಿ ಮಹಾರಾಜರು

೧. ಕಾರ್ಯ ಯಶಸ್ವಿಯಾಗಲು ಆಧ್ಯಾತ್ಮಿಕ ಅಧಿಷ್ಠಾನದ ಮಹತ್ವ

‘ಭಾರತ ಆಧ್ಯಾತ್ಮಿಕ ಭೂಮಿ ಯಾಗಿದೆ. ಇಲ್ಲಿನ ಇತಿಹಾಸದಲ್ಲಿ ಏನೆಲ್ಲ ಒಳ್ಳೆಯ ಪರಿವರ್ತನೆ ಆಗಿ ದೆಯೋ, ಅದರ ಹಿಂದೆ ಆಧ್ಯಾತ್ಮಿಕ ಸಂಸ್ಥೆಗಳ ಪೂರ್ಣ ಕೊಡುಗೆ ಇದೆ. ಆದುದರಿಂದ ಯಾವುದೇ ಕಾರ್ಯವನ್ನು ಯಶಸ್ವಿಗೊಳಿಸ ಬೇಕಾಗಿದ್ದಲ್ಲಿ ನಾವು ಆಧ್ಯಾತ್ಮಿಕ ಸ್ತರದಲ್ಲಿ ಅಥವಾ ಆ ಸಂಸ್ಥೆಗಳ ಮಾಧ್ಯಮದಿಂದಲೇ ಕಾರ್ಯವನ್ನು ಮಾಡುವುದು ಆವಶ್ಯಕವಾಗಿದೆ. ಇಲ್ಲಿ ಪ್ರತಿಯೊಬ್ಬ ಭಾರತೀಯ ವ್ಯಕ್ತಿಯು ಆತ್ಮ ಮತ್ತು ಪರಮಾತ್ಮ ಇವುಗಳ ಬಗ್ಗೆ ವಿಚಾರ ಮಾಡುತ್ತಾನೆ, ಇದು ಈ ಭಾರತೀಯ ಮಣ್ಣಿನ ಒಂದು ಗುಣವಾಗಿದೆ. ಆ ವ್ಯಕ್ತಿ ಯಾವುದೇ ಪಂಥದವನಾಗಿದ್ದರೂ ಯಾವಾಗಲಾದರೊಮ್ಮೆ ಆಧ್ಯಾತ್ಮಿಕ ಸಂಪ್ರದಾಯ ಅಥವಾ ಸಂಸ್ಥೆಯ ಜೊತೆಗೆ ಜೋಡಿಸ ಲ್ಪಟ್ಟಿರುತ್ತಾನೆ. ಆದುದರಿಂದ ಇಂದು ನಮ್ಮ ದೇಶದಲ್ಲಿ ಸಂತರ ಮತ್ತು ಆಧ್ಯಾತ್ಮಿಕ ಸಂಸ್ಥೆಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಈ ಎಲ್ಲ ಸಂತರು ಮತ್ತು ಆಧ್ಯಾತ್ಮಿಕ ಸಂಸ್ಥೆಗಳು ಹಿಂದೂ ರಾಷ್ಟ್ರದ ಬೇಡಿಕೆಯನ್ನಿಡಲು ಒಟ್ಟಾಗಿ ರಸ್ತೆಗಿಳಿದರೆ, ‘ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವು ಅತ್ಯಂತ ಸುಲಭವಾಗುವುದು. ನಾವೆಲ್ಲರೂ ಇದೇ ಕಾರ್ಯವನ್ನು ಮಾಡುತ್ತಿದ್ದೇವೆ. ನಾವು ಕರ್ನಾಟಕದಲ್ಲಿ ‘ರಾಜ್ಯಮಟ್ಟದ ಹಿಂದೂ ರಾಷ್ಟ್ರ ಅಧಿವೇಶನ ವನ್ನು ಆಯೋಜಿಸಿದ್ದೆವು. ಆಗ ಅಲ್ಲಿ ಬಹಳಷ್ಟು ಸಂತರು ಉಪಸ್ಥಿತರಿದ್ದರು. ಆ ಸಮಯದಲ್ಲಿ ನಾನು ವೈಯಕ್ತಿಕ ಸ್ತರದಲ್ಲಿ ಅವರ ಭಾವನೆಗಳನ್ನು ತಿಳಿದುಕೊಂಡೆನು.

೨. ಸಮಾಜವು ಸಂತರ ಕಡೆಗೆ ನೋಡುವ ದೃಷ್ಟಿಕೋನವನ್ನು ಬದಲಾಯಿಸಬೇಕು !

ನಮ್ಮ ಭಾರತದಲ್ಲಿ ಸಾಧುಸಂತರ ಬಹಳ ದೊಡ್ಡ ಆಶ್ರಮ ಗಳಿವೆ. ಪ್ರತಿಯೊಂದು ಆಶ್ರಮದಲ್ಲಿ ನಮ್ಮ ಸಂತರು ಚಿನ್ನದ ಸಿಂಹಾಸನದ ಮೇಲೆ ಕುಳಿತಿರುತ್ತಾರೆ. ‘ಭಾರತದಲ್ಲಿ ಹಿಂದೂ ಸಮಾಜಕ್ಕೆ ತೊಂದರೆಯಾಗುತ್ತಿದ್ದು ಅದು ಅಪಾಯದಲ್ಲಿದೆ, ಎಂಬ ಅರಿವು ಅವರಿಗೂ ಇದೆ; ಆದರೆ ಅವರು ಚಿನ್ನದ ಸಿಂಹಾಸನವನ್ನು ಬಿಟ್ಟು ಕೆಳಗೆ ಇಳಿಯುವುದಿಲ್ಲ. ಅವರಿಗೆ ಸಿಂಹಾಸನದ ಮೇಲಿನಿಂದ ಕೆಳಗೆ ಇಳಿದರೆ ತಮ್ಮ ಮಾನ-ಸನ್ಮಾನ ಹಾಳಾಗುತ್ತದೆ ಎಂದು ಅನಿಸುತ್ತದೆ. ಸದ್ಯ ನಮ್ಮ ಸಮಾಜದಲ್ಲಿ ಪ್ರವಾಸ ಮಾಡುವ, ಭಕ್ತರನ್ನು ಸಹಜವಾಗಿ ಭೇಟಿಯಾಗುವ ಮತ್ತು ಹೆಚ್ಚು ಪ್ರಮಾಣದಲ್ಲಿ ಮಾತನಾಡುವ ಸಂತರನ್ನು ಕನಿಷ್ಠರೆಂದು ತಿಳಿಯಲಾಗುತ್ತದೆ. ಆದುದರಿಂದ ಅನೇಕ ಸಂತರು ಸಾರ್ವಜನಿಕ ವೇದಿಕೆಯ ಮೇಲೆ ಬರಲು ಧೈರ್ಯವನ್ನು ತೋರಿಸುವುದಿಲ್ಲ. ಇಂದು ಚಿನ್ನದ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಮತ್ತು ಮೌನವನ್ನು ಪಾಲಿಸುವ ಸಂತರನ್ನು ಶ್ರೇಷ್ಠರೆಂದು ತಿಳಿಯಲಾಗುತ್ತದೆ. ಇದರ ಬಗ್ಗೆ ಒಂದು ಉದಾಹರಣೆಯನ್ನು ಕೊಡುತ್ತೇನೆ. ಒಂದು ಸಲ ಓರ್ವ ಭಿಕ್ಷುಕ ಒಂದು ಮನೆಗೆ ಭಿಕ್ಷೆಗಾಗಿ ಹೋದನು. ಆಗ ಆ ಮನೆಯಲ್ಲಿನ ಸ್ತ್ರೀ ಅವನಿಗೆ ಒಂದು ಬಟ್ಟೆಯನ್ನು ದಾನವೆಂದು ನೀಡಿದಳು. ಆ ಬಟ್ಟೆಯ ಬಣ್ಣ ಕೇಸರಿಯಾಗಿತ್ತು. ತನಗೆ ದೊರಕಿದ ಕೇಸರಿ ಬಟ್ಟೆಯನ್ನು ಮೈಮೇಲೆ ಹೊದ್ದುಕೊಂಡು ಅವನು ಸಾರ್ವಜನಿಕ ಸ್ಥಳದಲ್ಲಿ ಬಂದು ಕುಳಿತನು. ಅವನು ತೊದಲು ಮಾತನಾಡುತ್ತಿದ್ದುದರಿಂದ ಅವನಿಗೆ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ಆದುದರಿಂದ ಅವನು ಅತಿ ಕಡಿಮೆ ಮಾತನಾಡುತ್ತಿದ್ದನು ಅಥವಾ ಮೌನವಾಗಿಯೇ ಇರುತ್ತಿದ್ದನು. ಆದುದರಿಂದ ಜನರು ಅವನನ್ನು ಮಹಾಜ್ಞಾನಿ ಎಂದು ತಿಳಿಯತೊಡಗಿದರು. ಅವರು ದೊಡ್ಡ ಮಹಾತ್ಮರಾಗಿದ್ದಾರೆ ಎಂಬ ಪ್ರಚಾರ ತಾನಾಗಿಯೇ ಆಗತೊಡಗಿತು ಮತ್ತು ಅವರು ಈಗ ಉತ್ತರ ಭಾರತದಲ್ಲಿ ಓರ್ವ ದೊಡ್ಡ ಸಂತರೆಂದು ಗುರುತಿಸಲ್ಪಡುತ್ತಾರೆ. ಅವರು ಏಕೆ ಮಾತನಾಡುವುದಿಲ್ಲ ? ಎಂಬುದನ್ನು ಯಾರೂ ತಿಳಿದುಕೊಳ್ಳಲಿಲ್ಲ. ಅವರು ಹೆಚ್ಚು ವಿದ್ಯಾವಂತರಾಗಿರಲಿಲ್ಲ. ನಮ್ಮ ಭಾರತೀಯ ಸಂಸ್ಕೃತಿಯ ಮೂಲ ಗ್ರಂಥಗಳಾದ ವೇದ, ಶಾಸ್ತ್ರ ಮತ್ತು ಉಪನಿಷತ್ತುಗಳ ಬಗ್ಗೆ ಅವರಿಗೆ ಸ್ವಲ್ಪವೂ ಜ್ಞಾನವಿರಲಿಲ್ಲ; ಆದರೂ ಆ ವ್ಯಕ್ತಿ ಇಂದು ಕೋಟ್ಯಾವಧಿ ರೂಪಾಯಿಗಳ ಆಶ್ರಮಗಳ ಮಾಲೀಕರಾಗಿದ್ದಾರೆ. ಆದುದರಿಂದ ಇಂದು ನಾವು ಸಂತರತ್ತ ನೋಡುವ ದೃಷ್ಟಿಯನ್ನು ಬದಲಾಯಿಸುವ ಆವಶ್ಯಕತೆ ಇದೆ.

೩. ಭಾರತದಲ್ಲಿ ಧಾರ್ಮಿಕತೆಯ ಆಡಂಬರವನ್ನು ಮಾಡುವ ಸಂತರಿಗೆ ಹೆಚ್ಚು ಮಾನಸನ್ಮಾನವಿದೆ !

ಈ ಬಗ್ಗೆ ನಾನು ಕರ್ನಾಟಕದ ಅಧಿವೇಶನದಲ್ಲಿ ಉಪಸ್ಥಿತ ಓರ್ವ ಸಂತರೊಂದಿಗೆ ಮಾತನಾಡಿದೆನು. ಆಗ ಅವರು ಮುಂದಿನಂತೆ ಹೇಳಿದರು, “ಒಂದು ವೇಳೆ ನಾವು ಹೆಚ್ಚು ಮಾತನಾಡತೊಡಗಿದರೆ, ಇದೇ ಸಮಾಜದ ಜನರು ನಮ್ಮನ್ನು ದೂರವಿಡುವರು. ಹಾಗೆಯೇ ಪ್ರಸಾರಮಾಧ್ಯಮಗಳೂ ನಮ್ಮ ಮೇಲೆ ಸತತ ಕಣ್ಣಿಡುವರು. ನಮ್ಮ ಬಾಯಿಯಿಂದ ಒಂದು ತಪ್ಪು ಶಬ್ದ ಬಂದರೂ ಅಥವಾ ನಮ್ಮ ವರ್ತನೆಯಲ್ಲಿ ಸಣ್ಣ ತಪ್ಪಾದರೂ ಅವರು ನಮ್ಮನ್ನು ಬಹಳ ಅವಮಾನಿಸುವರು. ಅದೇ ಕೆಲಸವನ್ನು ನಮ್ಮ ಸಮಾಜವೂ ಮಾಡುತ್ತದೆ ಆದುದರಿಂದ ‘ಹಿಂದೂ ರಾಷ್ಟ್ರವನ್ನು ತರುವ ಕಾರ್ಯ ನಮ್ಮದಾಗಿರದೇ. ಆ ಕಾರ್ಯ ರಾಜಕಾರಣಿಗಳದ್ದಾಗಿದೆ. ಅದನ್ನು ಯೋಗಿ ಆದಿತ್ಯನಾಥ ಅಥವಾ ಪ್ರಧಾನಮಂತ್ರಿ ಮೋದಿಯವರು ಮಾಡುವರು. ಅದಕ್ಕಾಗಿ ನಾವು ಕೇವಲ ವಿಚಾರ ಮಾಡಬಹುದು ಅಥವಾ ಪರಮಾತ್ಮನಲ್ಲಿ ಪ್ರಾರ್ಥನೆ ಮಾಡಬಹುದು. ನಾವು ಜನಜಾಗೃತಿಯನ್ನು ಮಾಡಲು ಬಹಿರಂಗವಾಗಿ ಕಾರ್ಯವನ್ನು ಮಾಡಲಾರೆವು. ನಾವು ಬಹಿರಂಗವಾಗಿ ಕಾರ್ಯವನ್ನು ಮಾಡತೊಡಗಿದರೆ, ಇದೇ ಸಮಾಜ ನಮ್ಮನ್ನು ಅಜ್ಞಾನಿಗಳು ಎಂದು ತಿಳಿಯುವುದು; ಏಕೆಂದರೆ ನಮಗೆ, ಸಂತರಿಗೆ ಹೆಚ್ಚು ಮಾತನಾಡುವುದನ್ನು ನಿಷೇಧಿಸಲಾಗಿದೆ. ನಮಗೆ ಹೆಚ್ಚು ಪ್ರವಾಸ ಮಾಡಲು ಅವಕಾಶವಿಲ್ಲ. ನಾವು ಸಂತರು ಯಾವುದಾದರೊಬ್ಬ ಸಾಮಾನ್ಯ ವ್ಯಕ್ತಿಯನ್ನು ಸಹಜವಾಗಿ ಭೇಟಿಯಾಗಲಾರೆವು. ಒಂದು ವೇಳೆ ನಾವು ಸಾಮಾನ್ಯ ವ್ಯಕ್ತಿಯೊಂದಿಗೆ ಸಹಜವಾಗಿ ಮಾತನಾಡತೊಡಗಿದರೆ, ಇತರರ ದೃಷ್ಟಿಯಲ್ಲಿ ನಮ್ಮ ಮಟ್ಟ ಕಡಿಮೆಯಾಗುತ್ತದೆ. ನನ್ನ ಸುತ್ತಮುತ್ತಲೂ ಯಾವಾಗಲೂ ೪-೫ ಜನರಾದರು ಇರಲೇಬೇಕು. ಅವರೆಲ್ಲರೂ ನನ್ನ ಅಕ್ಕಪಕ್ಕದಲ್ಲಿ ಸುತ್ತಾಡುತ್ತಿರಬೇಕು. ನನ್ನ ಬಳಿ ಕಡಿಮೆಯೆಂದರೂ ೪೦ ಲಕ್ಷ ರೂಪಾಯಿಗಳ ಚತುಷ್ಚಕ್ರವಾಹನ ಇರಬೇಕು. ನನ್ನ ಆಶ್ರಮ ವಾತಾನುಕೂಲಿತ (ಏರಕಂಡಿಶನರ್) ಇರಬೇಕು. ಹೀಗಿದ್ದರೆ ಮಾತ್ರ ಜನರು ನನ್ನನ್ನು ಗೌರವಿಸುವರು, ಜನರಲ್ಲಿ ಇಂತಹ ಒಂದು ತಿಳುವಳಿಕೆ ಇದೆ. ಈ ರೀತಿಯ ಒಂದು ವಿಚಾರ ಇಂದು ಪ್ರತಿಯೊಬ್ಬ ಸ್ವಾಮೀಜಿ ಅಥವಾ ಮಹಾತ್ಮರ ಮನಸ್ಸಿನಲ್ಲಿ ಮನೆ ಮಾಡಿಕೊಂಡಿದೆ. ಯಾವ ಸಂತರು ಚೆನ್ನಾಗಿ ಕಾರ್ಯವನ್ನು ಮಾಡುತ್ತಾರೆ ಮತ್ತು ಚೆನ್ನಾಗಿ ಪ್ರವಚನಗಳನ್ನು ಮಾಡುತ್ತಾರೆ ಅಥವಾ ಜನಜಾಗೃತಿಯನ್ನು ಮಾಡುತ್ತಾರೆ ಅಂತಹ ಸಂತರಿಗೆ ಕಡಿಮೆ ಗೌರವ ಸಿಗುತ್ತದೆ. ಕೇವಲ ಧಾರ್ಮಿಕತೆಯ ಕೇವಲ ಆಡಂಬರ ಮಾಡುವ ವ್ಯಕ್ತಿ ಗಳಿಗೆ ಹೆಚ್ಚು ಮಾನಸನ್ಮಾನವು ಸಿಗುತ್ತದೆ.

೪. ಶುಕ್ರವಾರದ ನಮಾಜಿಗೆ ಬರದಿರುವ ಮುಸಲ್ಮಾನನ ಮನೆಗೆ ಹೋಗಿ ಅವನ ವಿಚಾರಣೆಯನ್ನು ಮಾಡುವ ಮೌಲಾನಾ !

ತದ್ವಿರುದ್ಧ ಇತರ ಪಂಥದವರನ್ನು ನೋಡಿ. ಇಂದಿನವರೆಗೆ ನಾನು ಯಾವುದೇ ಮೌಲಾನಾನನ್ನು (ಇಸ್ಲಾಮಿನ ಅಭ್ಯಾಸಕ) ಚಿನ್ನದ ಸಿಂಹಾಸನದ ಮೇಲೆ ಕುಳಿತಿರುವುದನ್ನು ನೋಡಿಲ್ಲ. ಅವನು ಪ್ರತಿಯೊಬ್ಬರ ಮನೆಗೆ ಹೋಗುತ್ತಾನೆ. ಮಸೀದಿಯಲ್ಲಿ ನಡೆಯುವ ಶುಕ್ರವಾರದ ನಮಾಜ್‌ಗೆ ಯಾರಾದರೊಬ್ಬ ಮುಸ್ಲಿಂ ವ್ಯಕ್ತಿ ಬರದಿದ್ದರೆ, ಅದರ ಕಡೆಗೆ ಮೌಲಾನಾನ ಗಮನವಿರುತ್ತದೆ. ಆ ವ್ಯಕ್ತಿಯು ಸತತ ೨ ಶುಕ್ರವಾರ ನಮಾಜ್‌ಗೆ ಬರದೇ ಇರುವುದು ಮೌಲಾನಾನಿಗೆ ಕಂಡು ಬಂದರೆ, ಮೂರನೇ ಶುಕ್ರವಾರ ಅವನು ಆ ವ್ಯಕ್ತಿಯ ಮನೆಗೆ ಹೋಗುತ್ತಾನೆ. ಈ ಮೌಲಾನಾ ಅವರ ಮನೆಗೆ ಹೋಗಿ ‘ನೀನು ನಮಾಜ್‌ಗೆ ಏಕೆ ಬರಲಿಲ್ಲ ?, ಎಂದು ಕೇಳುತ್ತಾನೆ. ತದ್ವಿರುದ್ಧ ನಮ್ಮ ಸಂತರು. ಸಮಾಜದಲ್ಲಿ ಈ ರೀತಿಯ ರೂಢಿ ಇಲ್ಲ; ಏಕೆಂದರೆ ‘ನಾವು ಸಾಮಾನ್ಯ ವ್ಯಕ್ತಿಗಳಂತೆ ಸಮಾಜದಲ್ಲಿ ಹೋಗಿ ಬೆರೆಯಲು ಆಗುವುದಿಲ್ಲ, ಎಂದು ಸಂತ ಸಮಾಜಕ್ಕೆ ಅನಿಸುತ್ತಿರುತ್ತದೆ. ಮೌಲಾನಾ ಮಾತ್ರ ಸಹಜವಾಗಿ ಸಾಮಾನ್ಯ ಮನುಷ್ಯನಂತೆ ಎಲ್ಲಿಗೆ ಬೇಕೋ ಅಲ್ಲಿಗೆ ಹೋಗಬಹುದು. ಅವನು ರೈಲಿನಲ್ಲಿ ಅಥವಾ ಬಸ್‌ನಲ್ಲಿ ಪ್ರಯಾಣ ಮಾಡಬಹುದು. ಅವನು ಎಲ್ಲರೊಂದಿಗೆ ಬೆರೆಯಬಹುದು.

೫. ಎಲ್ಲ ಸಂತ ಸಮುದಾಯ ಒಟ್ಟಾಗಿ ‘ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮಾಡುವುದು ಆವಶ್ಯಕ !

ಓರ್ವ ಕ್ರೈಸ್ತ ಪಾದ್ರಿ ಸಹಜವಾಗಿ ಎಲ್ಲವನ್ನೂ ಮಾಡು ತ್ತಾನೆ. ಅವನು ತನ್ನ ಕ್ರೈಸ್ತ ಬಾಂಧವರನ್ನು ಸಹಜವಾಗಿ ಭೇಟಿಯಾಗುತ್ತಾನೆ. ತದ್ವಿರುದ್ಧ ಹಿಂದೂ ಸನ್ಯಾಸಿಗಳು ಸಹಜವಾಗಿ ಎಲ್ಲರನ್ನೂ ಭೇಟಿಯಾಗುವುದಿಲ್ಲ. ‘ಹಿಂದೂ ಸನ್ಯಾಸಿಗಳು ಸಹಜವಾಗಿ ಎಲ್ಲರನ್ನು ಭೇಟಿಯಾದರೆ, ಅವರ ಬೆಲೆ ಕಡಿಮೆಯಾಗುವುದು, ಎಂಬ ಮಾನಸಿಕತೆ ಇತ್ತೀಚೆಗೆ ಉಂಟಾಗಿದೆ. ಈ ಮಾನಸಿಕತೆಯನ್ನು ನಾವು ಬದಲಾಯಿಸಬೇಕು ಮತ್ತು ಎಲ್ಲ ಸಂತ-ಮಹಾತ್ಮರು ರಸ್ತೆಗಿಳಿದು ‘ಹಿಂದೂ ರಾಷ್ಟ್ರದ ಬೇಡಿಕೆಯನ್ನಿಡಬೇಕು. ಇಂದು ಭಾರತದಲ್ಲಿನ ಎಲ್ಲ ಸಂತರು ಒಮ್ಮೆ ಒಟ್ಟಾಗಿ ರಸ್ತೆಗಿಳಿದು ‘ನಮಗೆ ಹಿಂದೂ ರಾಷ್ಟ್ರ ಬೇಕು ! ಎಂದು ಘೋಷಿಸಬೇಕು, ಹೀಗೆ ಘೋಷಿಸಿದರೆ ‘ಹಿಂದೂ ರಾಷ್ಟ್ರ ಇಂದೇ ಬರಬಲ್ಲದು. ಸಂತರಿಗೆ ಹಿಂದೂ ರಾಷ್ಟ್ರವನ್ನು ತರುವುದು, ಒಂದು ದೊಡ್ಡ ವಿಷಯವೇನಲ್ಲ.

ಇಂದು ನಮ್ಮ ಸಂತರ ಬಳಿ ಬಹಳಷ್ಟು ಸಾಧನಸಂಪತ್ತಿದೆ, ತಪಶ್ಚರ್ಯದ ಶಕ್ತಿ ಇದೆ, ಪೂರ್ವಜರ ಶಕ್ತಿಯಿದೆ ಮತ್ತು ದೇವತೆಗಳ ಆಶೀರ್ವಾದವಿದೆ. ಈ ಎಲ್ಲವನ್ನೂ ಯಾವ ಕಾರ್ಯಕ್ಕಾಗಿ ಬಳಸುವುದು ಆವಶ್ಯಕವಾಗಿದೆಯೋ, ಆ ಕೆಲಸಕ್ಕೆ ಬಳಸಲಾಗುವುದಿಲ್ಲ. – ಪೂ. ಪರಮಾತ್ಮಾಜಿ ಮಹಾರಾಜರು, ಧಾರವಾಡ.

ಅವರ ಹಣವನ್ನು ಮಹಾವಿದ್ಯಾಲಯಗಳು, ವೈದ್ಯಕೀಯ ಮಹಾವಿದ್ಯಾಲಯಗಳು ಮತ್ತು ಇತರ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಲು ಬಳಸಲಾಗುತ್ತದೆ; ಆದರೆ ಹಿಂದೂ ಸಮಾಜದಲ್ಲಿ ಸಂಕಟದಲ್ಲಿರುವ ಹಿಂದೂ ಸಹೋದರ – ಸಹೋದರಿಯರ ಅಡಚಣೆಗಳನ್ನು ಯಾವುದೇ ಸಂತರು ಕೇಳಿಕೊಳ್ಳುವುದೂ ಇಲ್ಲ, ಮಾಡುವುದಂತೂ ದೂರದ ಮಾತಾಯಿತು, ಹೀಗೆ ಮಾಡಿದರೆ ತಮ್ಮ ಗೌರವ(ಮೌಲ್ಯ) ಕಡಿಮೆಯಾಗುತ್ತದೆ, ಎಂದು ಅವರಿಗೆ ಭಯವಾಗುತ್ತದೆ. ಅವರ ಮನಸ್ಸಿನಲ್ಲಿನ ಈ ತಪ್ಪುತಿಳುವಳಿಕೆಯನ್ನು ನಾವು ಮೊದಲು ದೂರಮಾಡಬೇಕು.

ನಮ್ಮ ಸಂತ ಸಮಾಜ ಎಷ್ಟು ಶಕ್ತಿಶಾಲಿಯಾಗಿದೆ ಎಂದರೆ, ಯಾವುದೇ ಪಂಥವು ಅದರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ನಮ್ಮ ಬಳಿ ದೊಡ್ಡ ದೊಡ್ಡ ವಿದ್ವಾನರು ಮತ್ತು ತಪಸ್ವಿಗಳಿದ್ದಾರೆ. ಅವರಿಗೆ ದೇವತೆಗಳ ಆಶೀರ್ವಾದವಿದೆ. ಇಷ್ಟು ಸಾಮರ್ಥ್ಯವಿದ್ದರೂ, ಯಾವ ಕಾರ್ಯಕ್ಕೆ ಅದನ್ನು ಬಳಸಬೇಕೋ ಆ ಕಾರ್ಯಕ್ಕಾಗಿ ಅದನ್ನು ಬಳಸಲಾಗುವುದಿಲ್ಲ. ಇದಕ್ಕಾಗಿ ನಾವು ಕಾರ್ಯವನ್ನು ಮಾಡುವುದು ಆವಶ್ಯಕವಾಗಿದೆ.

೬. ಹಿಮಾಲಯದಲ್ಲಿ ತಪಃಸಾಧನೆ ಮಾಡುವ ಸಂತರನ್ನು ಸಂಘಟಿಸಿ ಹೂಣರನ್ನು ಸೋಲಿಸಿದ ಆದಿಶಂಕರಾಚಾರ್ಯರು

ಇಂದಿನ ಕಾಲವು ಸಂಕ್ರಮಣಕಾಲವಾಗಿದೆ. ಇಂದು ನಮಗೆ, ಸಂತರಿಗೆ ಭಗವಾನ ಪರಶುರಾಮನಂತೆ ಕಾರ್ಯವನ್ನು ಮಾಡುವ ಆವಶ್ಯಕತೆ ಇದೆ. ಸಂತರು ಇಂದು ಆದಿಶಂಕರಾ
ಚಾರ್ಯರಂತೆ ಕಾರ್ಯವನ್ನು ಮಾಡಬೇಕು. ಆದಿಶಂಕರಾ ಚಾರ್ಯರು ಸಂಪೂರ್ಣ ಭಾರತದಾದ್ಯಂತ ಪ್ರವಾಸ ಮಾಡಿದರು. ಧರ್ಮಸಂಸ್ಥಾಪನೆ ಮತ್ತು ಸನಾತನ ಧರ್ಮದ
ಪ್ರಚಾರ ಮಾಡುವಾಗ ದೊಡ್ಡ ದೊಡ್ಡ ವಿದ್ವಾಂಸರೊಂದಿಗೆ ಅವರ ಚರ್ಚಾಕೂಟಗಳಾದವು. ಅದರಲ್ಲಿ ಅವರು ವಿಜಯವನ್ನು ಸಾಧಿಸಿದರು. ಹೀಗೆ ಮಾಡುತ್ತಾ ಅವರು ಕಾಶ್ಮೀರದ ದಿಶೆಯಲ್ಲಿ ಸಾಗಿದರು. ಅಲ್ಲಿ ಅವರಿಗೆ ಒಂದು ದೊಡ್ಡ ಅಡಚಣೆ ಎದುರಾಯಿತು. ಅಲ್ಲಿನ ಹೂಣ ಜಾತಿಯ ಜನರಲ್ಲಿ ಕಳ್ಳತನ ಮಾಡುವ, ಲೂಟಿಮಾಡುವ ಒಂದು ಸಮೂಹವಿತ್ತು. ಮೊಘಲರಕ್ಕಿಂತ ಮೊದಲಿನಿಂದಲೇ ಅವರು ಭಾರತದ ಮೇಲೆ ಆಕ್ರಮಣ ಮಾಡುತ್ತಿದ್ದರು. ಅವರು ಅತ್ಯಂತ ಕ್ರೂರಿಗಳಾಗಿದ್ದರು. ಜನರ ಕೊಲೆ ಮಾಡುವುದು, ಅತ್ಯಾಚಾರ ಮಾಡುವುದು ಮತ್ತು ಲೂಟಿ ಮಾಡುವುದು, ಇದೇ ಅವರ ಕೆಲಸವಾಗಿತ್ತು. ಶಂಕರಾಚಾರ್ಯರು ಹಿಮಾಲಯದ ಆ ಭಾಗದಿಂದ ಹೋಗುತ್ತಿರುವಾಗ ಅಲ್ಲಿನ ಗ್ರಾಮಸ್ಥರು ಬಂದು ಶಂಕರಾಚಾರ್ಯರಿಗೆ ಈ ಸಮಸ್ಯೆಯನ್ನು ಹೇಳಿದರು. ಆಗ ಶಂಕರಾಚಾರ್ಯರು ಹೂಣರನ್ನು ಚರ್ಚಾಕೂಟಕ್ಕೆ ಅಥವಾ ಶಾಸ್ತ್ರಗಳ ಬಗ್ಗೆ ಮಾತನಾಡಲು ಕರೆಯಲಿಲ್ಲ. ಅವರು ಒಂದು ಕೆಲಸ ಮಾಡಿದರು. ಯಾವ ಸಾಧುಸಂತರು ಹಿಮಾಲಯದಲ್ಲಿ ಗುಹೆಗಳಲ್ಲಿ ಕುಳಿತು ತಪಶ್ಚರ್ಯ ಮಾಡುತ್ತಿದ್ದರೋ, ಆ ಎಲ್ಲ ಸಾಧುಸಂತರನ್ನು ಒಟ್ಟುಗೂಡಿಸಿದರು. ಹಿಂದೂ ಧರ್ಮವನ್ನು ಹೇಗೆ ಕಾಪಾಡಬೇಕು ? ಈ ಬಗ್ಗೆ ಚರ್ಚೆಯನ್ನು ಮಾಡಿದರು.

ಅವರಿಗೆ ತ್ರಿಶೂಲ ದೀಕ್ಷೆಯನ್ನು ನೀಡಿದರು. ಆದಿಶಂಕರಾ ಚಾರ್ಯರು, “ಯಾವ ಕೈಯಲ್ಲಿ ನೀವು ಜಪಮಾಲೆ ಮತ್ತು ದಂಡ, ಕಮಂಡಲುಗಳನ್ನು ಹಿಡಿಯುತ್ತೀರೋ, ಅದೇ ಕೈಗಳಲ್ಲಿ ನಾನು ನಿಮಗೆ ತ್ರಿಶೂಲವನ್ನು ಕೊಟ್ಟಿದ್ದೇನೆ. ಆ ಎಲ್ಲ ಜನರು ತ್ರಿಶೂಲವನ್ನು ಹಿಡಿದರು. ಅನಂತರ ತ್ರಿಶೂಲವನ್ನು ಹಿಡಿದ ೧೧ ಸಾವಿರ ಸಂತರು ಒಂದೇ ಸಮಯಕ್ಕೆ ಹೂಣರೊಂದಿಗೆ ಹೋರಾಡಿದರು. ಆಗ ಹೂಣರೊಂದಿಗೆ ಭೀಕರ ಯುದ್ಧ ವಾಯಿತು. ಆ ಯುದ್ಧದಲ್ಲಿ ಹೂಣರ ಸರ್ವನಾಶವಾಯಿತು. ಭಾರತಿಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಹೂಣರು ತಣ್ಣಗಾದರು. ಅನಂತರ ಆದಿಶಂಕರಾಚಾರ್ಯರು ಅಲ್ಲಿರುವ ಇತರ ಪಂಥಗಳೊಂದಿಗೆ ಶಾಸ್ತ್ರಗಳ ಬಗ್ಗೆ ಚರ್ಚೆಯನ್ನೂ ಮಾಡಿದರು. ಇದರಿಂದ ಏನು ಕಲಿಯಲು ಸಿಗುತ್ತದೆ ಎಂದರೆ, ಇಂದು ಭಾರತದಲ್ಲಿ ಹಿಂದೂಗಳ ಸ್ಥಿತಿಯನ್ನು ನೋಡಿದರೆ, ಇದು ಸಾಧುಸಂತರು ಆತ್ಮಸಾಕ್ಷಾತ್ಕಾರಕ್ಕಾಗಿ ಕಾರ್ಯವನ್ನು ಮಾಡುವ ಸಮಯವಲ್ಲ, ಇದು ಹೋರಾಡುವ ಸಮಯವಾಗಿದೆ. ನಾವು ಇದನ್ನು ಪ್ರತಿಯೊಬ್ಬ ಸಂತರಿಗೆ ತಿಳಿಸಿ ಹೇಳಬೇಕಾಗುವುದು.

೭. ‘ಹಿಂದೂ ರಾಷ್ಟ್ರಕ್ಕಾಗಿ ಕೇವಲ ವಿಚಾರವಿನಿಮಯವಲ್ಲ, ಪ್ರತ್ಯಕ್ಷ ಸಂಘರ್ಷ ಮಾಡುವ ಸಮಯ !

ಮಹರ್ಷಿ ಜಮದಗ್ನಿಯವರು ಭಗವಾನ ಪರಶುರಾಮರ ತಂದೆಯಾಗಿದ್ದರು. ಪರಶುರಾಮರು ಓರ್ವ ಮಹಾನ ತಪಸ್ವಿಗಳಾಗಿದ್ದರು; ಆದರೆ ಯಾವಾಗ ಎಲ್ಲೆಡೆ ಅಜ್ಞಾನದ ಅಂಧಃಕಾರ ಹರಡಿತೋ ಆಗ ಧರ್ಮದ ಮೇಲೆ ಅಧರ್ಮದ ರಾಜ್ಯ ಆರಂಭವಾಯಿತು, ಆಗ ಅವರು ಕೈಯಲ್ಲಿ ವಿನಾಶಕಾರಿ ಕೊಡಲಿಯನ್ನು ಹಿಡಿದರು. ಅದೇ ರೀತಿ ‘ಹಿಂದೂ ರಾಷ್ಟ್ರ ದ ಸ್ಥಾಪನೆ ಮಾಡುವ ಕಾರ್ಯವೇನು ಬಹಳ ದೊಡ್ಡದಲ್ಲ. ಇದು ಹಿಂದೂಗಳದ್ದೇ ರಾಷ್ಟ್ರವಾಗಿದೆ. ನಮ್ಮ ರಾಷ್ಟ್ರವನ್ನೇ ನಾವು ಬೇಡುತ್ತಿದ್ದೇವೆ. ಅದಕ್ಕಾಗಿ ಪ್ರತಿಯೊಬ್ಬ ಸನ್ಯಾಸಿ ಮತ್ತು ಮಹಾತ್ಮರು ಇಂದು ರಸ್ತೆಗಿಳಿದು ‘ನಮಗೆ ಹಿಂದೂ ರಾಷ್ಟ್ರ ಬೇಕು, ಎಂದು ಸತತವಾಗಿ ಘೋಷಣೆ ಮಾಡಿದರೆ ನಾಳೆಯೇ ‘ಹಿಂದೂ ರಾಷ್ಟ್ರ ಬರಬಹುದು. ಈ ರೀತಿ ಎಲ್ಲರೂ ತಮ್ಮ ಮಠಗಳನ್ನು ಬಿಟ್ಟು ‘ಹಿಂದೂ ರಾಷ್ಟ್ರಕ್ಕಾಗಿ ಕಾರ್ಯ ಮಾಡುವ ಕಾಲವು ಹತ್ತಿರ ಬಂದಿದೆ. ಎಲ್ಲರೂ ಒಟ್ಟಾದರೆ, ಈ ದೇಶ ‘ಹಿಂದೂ ರಾಷ್ಟ್ರ ಆಗಬಹುದು. ಇಂದು ‘ಹಿಂದೂ ರಾಷ್ಟ್ರಕ್ಕಾಗಿ ಕೇವಲ ವಿಚಾರವಿನಿಮಯವಲ್ಲ, ಪ್ರತ್ಯಕ್ಷ ಸಂಘರ್ಷ ಮಾಡುವ ಸಮಯ ಬಂದಿದೆ. ಭಗವಂತನು ನಮಗೆ ಏನು ನೀಡಿದ್ದಾನೆಯೋ, ಅದನ್ನು ಹಿಂದೂ ರಾಷ್ಟ್ರಕ್ಕಾಗಿ ತ್ಯಾಗ ಮಾಡೋಣ. ಆದಷ್ಟು ಬೇಗನೆ ಈ ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗಬಹುದು, ಎಂದು ನನಗೆ ಪೂರ್ಣ ವಿಶ್ವಾಸವಿದೆ.

– ಪೂ. ಪರಮಾತ್ಮಾಜಿ ಮಹಾರಾಜರು, ಧಾರವಾಡ, ಕರ್ನಾಟಕ.