ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಭಾರತೀಯ ಸಂಸ್ಕೃತಿಯ ಅಪಮಾನವಾಗಲು ಬಿಡುವುದಿಲ್ಲ – ಕೇಂದ್ರ ಸರಕಾರ

ಕೇಂದ್ರೀಯ ಮಾಹಿತಿ ಮತ್ತು ಪ್ರಸಾರಣ ಮಂತ್ರಿಗಳಾದ ಅನುರಾಗ ಠಾಕೂರ

ನವದೆಹಲಿ – ಕೇಂದ್ರೀಯ ಮಾಹಿತಿ ಮತ್ತು ಪ್ರಸಾರಣ ಮಂತ್ರಿಗಳಾದ ಅನುರಾಗ ಠಾಕೂರರವರು `ಓಟಿಟಿ ಪ್ಲಾಟ್ಫಾರ್ಮ್’ ನ್ನು (ಚಲನಚಿತ್ರ ಇತ್ಯಾದಿಗಳನ್ನು ನೋಡುವ ಆನ್ಲೈನ್ ಮಾಧ್ಯಮ) ಎಲ್ಲ ವಯೋಮಾನದ ಜನರು ಬಳಸುತ್ತಿದ್ದಾರೆ. ಆದುದರಿಂದ ಈ ಮಾಧ್ಯಮದ ಪ್ರಸಾರಕರಿಗೆ (ಬ್ರೊಡ್ಕ್ಯಾಸ್ಟ್ರ್ಸ್ ಗಳಿಗೆ) ತಮ್ಮ ಮಾಧ್ಯಮಗಳ ಬಳಕೆಯು ತಪ್ಪು ಸಂಗತಿಗಳಿಗಾಗಿ ಆಗಬಾರದು ಎಂದು ಹೇಳಲಾಗಿದೆ, ಎಂಬ ಮಾಹಿತಿಯನ್ನು ನೀಡಿದರು. `ಓಟಿಟಿ ಪ್ಲಾಟ್ಫಾರ್ಮ್’ನ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ನಂತರ ಅವರು ಟ್ವೀಟ್ ಮಾಡಿ ಈ ಮಾಹಿತಿ ನೀಡಿದ್ದಾರೆ.

ಠಾಕೂರರವರು ಮುಂದುವರಿದು, ಸರಕಾರವು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಭಾರತೀಯ ಸಂಸ್ಕೃತಿಯ ಮತ್ತು ಸಮಾಜದ ಅಪಮಾನವಾಗಲು ಬಿಡುವುದಿಲ್ಲ. ಓಟಿಟಿಯಲ್ಲಿ ತೋರಿಸಲಾಗುವ ಅಸಭ್ಯ ಮತ್ತು ಅಪಮಾನಾಸ್ಪದ `ವೆಬ್ ಸೀರೀಸ್’ನಲ್ಲಿರುವ ವಿಷಯಗಳ ಮೇಲೆ ಅಂಕುಶವಿಡುವುದು ಆವಶ್ಯಕವಿದೆ ಎಂದು ಸಭೆಯಲ್ಲಿ ಎಲ್ಲರಿಗೂ ಸೂಚಿಸಲಾಗಿದೆ, ಎಂದು ಹೇಳಿದರು. (ಹಿಂದೂ ಧರ್ಮಪ್ರೇಮಿಗಳಿಗೆ ಕೇವಲ ಮೌಕಿಕ ಸೂಚನೆಯನ್ನು ನೀಡುವುದರ ಬದಲು ಅಂಕುಶವಿಡುವ ಕಾನೂನುಗಳನ್ನು ರಚಿಸುವುದು ಅವಶ್ಯಕವಾಗಿದೆ, ಎಂದು ಅನಿಸುತ್ತದೆ ! – ಸಂಪಾದಕರು)