ಸೀಮಾ ಹೈದರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಆಕೆಯನ್ನು ಭಾರತದಿಂದ ಹೊರಗೆ ಹಾಕುವೆವು ! – ಕರಣಿ ಸೇನೆಯ ಎಚ್ಚರಿಕೆ

ಮುಖೇಶ ಸಿಂಗ ರಾವಲ ಮತ್ತು ಸೀಮಾ ಹೈದರ

ನವ ದೆಹಲಿ – ಉಗ್ರ ನಿಗ್ರಹ ದಳವು ಶೀಘ್ರವೇ ಸೀಮಾ ಹೈದರ ಇವಳ ವಿರುದ್ಧ ಕ್ರಮ ಕೈಗೊಳ್ಳುವುದಾದರೆ ಸರಿ, ಇಲ್ಲವಾದಲ್ಲಿ ಕರಣಿ ಸೇನೆಯು ಆಕೆಯನ್ನು ದೇಶದಿಂದ ಹೊರಹಾಕುವರು ಎಂದು ಕರಣಿ ಸೇನೆಯ ಉಪಾಧ್ಯಕ್ಷ ಮುಖೇಶ ಸಿಂಗ ರಾವಲ ಅವರು ಎಚ್ಚರಿಕೆ ನೀಡಿದ್ದಾರೆ. ರಾವಲ ಇವರು ಒಂದು ವಾರ್ತಾ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, ನಾನು ಸೀಮಾ ಹೈದರಳನ್ನು ಭಯೋತ್ಪಾದಕಿ ಎಂದು ಹೇಳುವೆ. ಭಾರತವನ್ನು ಪ್ರವೇಶಿಸುವ ಮೊದಲು ಯಾವುದೇ ಪರಿಶೀಲನೆ ಆಗಿರಲಿಲ್ಲ . ಈಗ ಅವಳನ್ನು ಸರಿಯಾಗಿ ವಿಚಾರಣೆಗೆ ಒಳಪಡಿಸಬೇಕು. ಆಕೆ ತನ್ನ 4 ಮಕ್ಕಳೊಂದಿಗೆ ಭಾರತಕ್ಕೆ ಹೇಗೆ ಬಂದಳು ? ಸೀಮಾಳು, ಭಾರತದ ವೀಸಾ ಸಿಗುತ್ತಿರಲಿಲ್ಲ, ಹೀಗಿರುವಾಗ ಭಾರತಕ್ಕೆ ಬರುವ ಅಗತ್ಯ ಏನಿತ್ತು ? ಎಂದು ಪ್ರಶ್ನಿಸಿದ್ದಾರೆ.