ಉತ್ತರಪ್ರದೇಶದಲ್ಲಿ ‘ಲವ್ ಜಿಹಾದ್ ವಿರೋಧಿ ಕಾನೂನಿನಿಂದಾಗಿ ಹಿಂದೂ ಪೀಡಿತೆಗೆ ಸಿಕ್ಕಿದ ನ್ಯಾಯ – ಪೂ. (ನ್ಯಾಯವಾದಿ) ಸುರೇಶ ಕುಲಕರ್ಣಿ

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೧. ಉತ್ತರಪ್ರದೇಶದಲ್ಲಿ ತಾನು ಹಿಂದೂ ಆಗಿದ್ದೇನೆ ಮತ್ತು ನಾನು ನಿನ್ನೊಂದಿಗೆ ಮದುವೆ ಆಗುವೆನು ಎಂದು ಹೇಳಿ ಬಲಾತ್ಕರಿಸಿದ ಮತಾಂಧನ ವಿರುದ್ಧ ನೊಂದ ಯುವತಿಯಿಂದ ಪೊಲೀಸರಲ್ಲಿ ದೂರು ಚಾಂದಬಾಬು ಎಂಬ ‘ಓರ್ವ ಮತಾಂಧನು ವಿಶಾಲ ಎಂಬ ಹಿಂದೂ ಹೆಸರನ್ನು ಹೇಳಿ ಹಿಂದೂ ಯುವತಿಯನ್ನು ಮದುವೆಯಾಗುವುದಾಗಿ ಸುಳ್ಳು ಆಮಿಷ ತೋರಿಸಿ ಅವಳೊಂದಿಗೆ ೪-೫ ತಿಂಗಳು ದೈಹಿಕ ಸಂಬಂಧವನ್ನಿರಿಸಿ ಬಲಾತ್ಕಾರ ಮಾಡಿದನು. ತದನಂತರ ಸತತವಾಗಿ ಅವಳನ್ನು ಥಳಿಸಿ ಅವಳಿಗೆ ಮತಾಂತರ ವಾಗಲು ಒತ್ತಡ ಹೇರಿದನು. ಇದರಿಂದ ಅವಳು ಆತನ ವಿರುದ್ಧ ಬರೇಲಿಯ (ಉತ್ತರಪ್ರದೇಶ) ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದಳು. ತದನಂತರ ಪೊಲೀಸರು ಮತಾಂಧ ನನ್ನು ಬಂಧಿಸಿ ಅವನ ವಿರುದ್ಧ ಬಲಾತ್ಕಾರ, ನಕಲಿ ಪರಿಚಯ, ಮೋಸಗಾರಿಕೆ, ಮತಾಂತರಕ್ಕಾಗಿ ಒತ್ತಡ ಹೇರುವುದು ಈ ಆರೋಪಗಳಡಿಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ ೩೭೬ (೨) ೫೦೬, ೪೨೦ ಹಾಗೂ ‘ಉತ್ತರಪ್ರದೇಶ ಅನಧಿಕೃತ ಮತಾಂತರ ಪ್ರತಿಬಂಧಕ ಕಾನೂನು ಅಡಿ ಕಲಂ ೫ ಮತ್ತು ೩ ಈ ಕಲಂಗಳಡಿಯಲ್ಲಿ ದೂರನ್ನು ದಾಖಲಿಸಿದ್ದಾರೆ.

೨. ನ್ಯಾಯಾಲಯದಿಂದ ಮತಾಂಧನಿಗೆ ಜಾಮೀನು ನಿರಾಕರಣೆ

ಈ ಪ್ರಕರಣದ ತನಿಖೆಯಾದ ಬಳಿಕ ಮತಾಂಧನು ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದನು. ಈ ಅರ್ಜಿಯಲ್ಲಿ ‘ನಾವಿಬ್ಬರೂ ಪ್ರಬುದ್ಧರಾಗಿದ್ದು, ನಾವು ಮದುವೆಯಾಗುವ ವರಿದ್ದೇವೆ. ಆದುದರಿಂದ ತನ್ನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಬೇಕು, ಎಂದು ಹೇಳಲಾಗಿತ್ತು. ಈ ಅರ್ಜಿಯನ್ನು ಪೀಡಿತೆಯು ವಿರೋಧಿಸಿದಳು. ನ್ಯಾಯಾಧೀಶರ ಎದುರಿಗೆ ಪೀಡಿತೆಯು ಸಾಕ್ಷಿಯನ್ನು ನೊಂದಾಯಿಸುವಾಗ ಸ್ಪಷ್ಟವಾಗಿ “ಮತಾಂಧನು ತನ್ನ ಹೆಸರು ವಿಶಾಲ ಎಂದು ಪರಿಚಯಿಸಿಕೊಂಡನು ಮತ್ತು ಮೋಸ ಮಾಡಿದನು. ತದನಂತರ ಅಶ್ಲೀಲ ಅವಸ್ಥೆಯಲ್ಲಿರುವ ತನ್ನ ಛಾಯಾಚಿತ್ರಗಳನ್ನು ತೆಗೆದು ‘ಬ್ಲ್ಯಾಕ್ ಮೇಲ್ ಮಾಡಿದನು ಹಾಗೂ ಅವಳಿಗೆ ಬಹಳಷ್ಟು ಬಾರಿ ಥಳಿಸಿದನು. ಅಲ್ಲದೇ ನಿರಂತರವಾಗಿ ತನ್ನನ್ನು ಪೀಡಿಸುತ್ತಾ ೫ ತಿಂಗಳು ಬಲಾತ್ಕಾರ ಮಾಡಿದನು. ಮತಾಂತರಕ್ಕಾಗಿ ತನ್ನ ಮೇಲೆ ಒತ್ತಡವನ್ನೂ ಹೇರಿದನು.“ಈ ಪ್ರಕರಣದಲ್ಲಿ ಸರಕಾರಿ ನ್ಯಾಯವಾದಿ ಮತ್ತು ಪೀಡಿತೆಯ ನ್ಯಾಯವಾದಿಗಳು ಆಳವಾಗಿ ಅಧ್ಯಯನ ಮಾಡಿ ಜಾಮೀನನ್ನು ವಿರೋಧಿಸಿದರು. ಇದರಿಂದ ಅಪರಾಧ ಸಾಬೀತಾಗಿ ನ್ಯಾಯಮೂರ್ತಿಗಳು ಆರೋಪಿಗೆ ಜಾಮೀನನ್ನು ನಿರಾಕರಿಸಿದರು. ಹಿಂದೂಗಳಿಗೆ ಸಮಾಧಾನ ನೀಡುವಂತಹ ಇಂತಹ ಎಲ್ಲಿಯಾದರೊಂದು ಘಟನೆ ನಡೆಯುತ್ತದೆ. ಇಲ್ಲದಿದ್ದರೆ ‘ಹುಡುಗಿ ಪ್ರಬುದ್ಧಳಾಗಿದ್ದು, ಅನೇಕ ತಿಂಗಳುಗಳ ಕಾಲ ಮತಾಂಧನೊಂದಿಗೆ ಸುಖ ವನ್ನು ಅನುಭವಿಸಿದಳು ಎನ್ನುವ ಕಾರಣ ನೀಡಿ ಮತಾಂಧನನ್ನು ಹಾಗೆಯೇ ಬಿಟ್ಟು ಬಿಡಲಾಗುತ್ತದೆ.

೩. ಹಿಂದೂ ಮಹಿಳೆಯರು ಚಲನಚಿತ್ರಗಳು ಮತ್ತು ಸಾಮಾಜಿಕ ಮಾಧ್ಯಮಗಳಿಂದ ಜಾಗರೂಕರಾಗುವುದು ಆವಶ್ಯಕ !

ಸದ್ಯ ಶಿಕ್ಷಣ, ನೌಕರಿ ಮತ್ತು ವ್ಯವಹಾರ ಇವುಗಳ ಕಾರಣ ದಿಂದ ಬಹುತೇಕ ಹಿಂದೂಗಳು ತಮ್ಮ ಕುಟುಂಬದಿಂದ ಸ್ವತಂತ್ರವಾಗಿರುತ್ತಾರೆ. ಅದರಲ್ಲಿಯೂ ಪ್ರತಿಯೊಬ್ಬ ವ್ಯಕ್ತಿಯೂ ಐಹಿಕ ವಿಷಯಗಳಲ್ಲಿ ವ್ಯಸ್ತರಾಗಿರುವುದರಿಂದ ಅವರು ಮನೆ ಯಲ್ಲಿದ್ದರೂ ಪರಸ್ಪರರಿಂದ ದೂರವಿರುತ್ತಾರೆ. ಇಂತಹ ಸ್ಥಿತಿ ಯಲ್ಲಿ ಸಾಮಾಜಿಕ ಮಾಧ್ಯಮಗಳು ಹಿಂದೂ ಮಹಿಳೆಯರು ಮತ್ತು ಹುಡುಗಿಯರೊಂದಿಗೆ ಎಷ್ಟು ಸಾಮೀಪ್ಯವನ್ನು ಸಾಧಿಸಿ ದವೋ, ಅಷ್ಟು ದುರ್ದೈವದಿಂದ ರಕ್ತಸಂಬಂಧಿಕರು ಸಹ ಸಾಧಿಸಲಿಲ್ಲ. ಈ ಮಾಧ್ಯಮಗಳು ಅವರನ್ನು ನಕಲಿ ಜಾಲದಲ್ಲಿ ಸೆಳೆದುಕೊಂಡು ಮೋಸಗೊಳಿಸಿವೆ. ಅವು ಅವರ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ನೀಡಬಹುದು ಎಂದು ಅವರಿಗೆ ಅನಿಸುತ್ತದೆ. ಇದರಿಂದ ಹಿಂದೂ ಸ್ತ್ರೀಯರು ಹೆಚ್ಚು ಸಮಯ ಸಾಮಾಜಿಕ ಮಾಧ್ಯಮಗಳಲ್ಲಿ ಸಿಲುಕಿರುತ್ತಾರೆ. ಚಲನಚಿತ್ರಗಳಲ್ಲಿ ಉದ್ದೇಶಪೂರ್ವಕವಾಗಿ ಹಿಂದೂ ನಾಯಕಿ ಮತ್ತು ಮತಾಂಧ ನಾಯಕನನ್ನು ತೋರಿಸಲಾಗುತ್ತದೆ. ಈ ಮಾಧ್ಯಮದಿಂದ ನೇರವಾಗಿ ‘ಲವ್ ಜಿಹಾದ್ ಕ್ಕೆ ಪ್ರೋತ್ಸಾಹವನ್ನು ನೀಡಲಾಗುತ್ತದೆ ಮತ್ತು ಹಿಂದೂಗಳು ಹಣವನ್ನು ವೆಚ್ಚ ಮಾಡಿ ಇಂತಹ ಚಲನಚಿತ್ರಗಳನ್ನು ನೋಡುತ್ತಿರುತ್ತಾರೆ. ಇದರಿಂದಲೇ ಹಿಂದೂ ಮಹಿಳೆಯರು-ಹುಡುಗಿಯರು ಅತ್ಯಲ್ಪ ಕಾಲಾವಧಿಯಲ್ಲಿಯೇ ವಾಸನಾಂಧ ಮತಾಂಧರ ಜಾಲದಲ್ಲಿ ಸೆಳೆಯಲ್ಪಡುತ್ತಾರೆ. ಮತಾಂಧರು ಧೂರ್ತ ರಾಗಿದ್ದಾರೆ ಎಂಬುದು ನೂರಾರು ವರ್ಷಗಳ ಇತಿಹಾಸದಿಂದ ಎಲ್ಲರಿಗೂ ಗೊತ್ತಿದೆ. ಹೀಗಿರುವಾಗ ಹಿಂದೂ ಮಹಿಳೆಯರು-ಹುಡುಗಿಯರ ಹಣೆಬರಹದಲ್ಲಿ ಆರ್ಥಿಕ, ಶಾರೀರಿಕ, ಮಾನಸಿಕ ಮತ್ತು ಸಾಮಾಜಿಕ ತೊಂದರೆಗಳು ಬರುತ್ತವೆ. ಅವುಗಳನ್ನು ಅವರೇ ತಮ್ಮ ಮೇಲೆ ಎಳೆದುಕೊಂಡದ್ದಾಗಿರುತ್ತದೆ.

೪. ‘ಲವ್ ಜಿಹಾದ್ ಇನ್ನೆಷ್ಟು ಹಿಂದೂ ಯುವತಿಯರನ್ನು ಮೋಸಗೊಳಿಸಲಿದೆ ?

ಇಂದು ಯಾವುದೇ ದಿನಪತ್ರಿಕೆಯಲ್ಲಿ ಹಿಂದೂ ಹುಡುಗಿಯು ‘ಲವ್ ಜಿಹಾದ್ನ ಮೋಸದ ಜಾಲದಲ್ಲಿ ಸಿಲುಕಿ ಜೀವನ ಹಾಳು ಮಾಡಿಕೊಂಡಿರುವ ಸುದ್ದಿಗಳನ್ನು ಓದುತ್ತೇವೆ. ಕೆಲವು ದಿನಪತ್ರಿಕೆಗಳಂತೂ ಮತಾಂಧರಿಗೆ ನೋವಾಗಬಾರದೆಂದು ಆರೋಪಿಗಳ ನಿಜವಾದ ಹೆಸರನ್ನು ಸಹ ಮುಚ್ಚಿಡುತ್ತವೆ. ಅನೇಕ ಹಿಂದೂ ಯುವತಿಯರು ಮತಾಂಧರೊಂದಿಗೆ ‘ಲಿವ್ ಇನ್ ರಿಲೇಶನಶಿಪ್ನಲ್ಲಿರುತ್ತಾರೆ. ‘ಲವ್ ಜಿಹಾದ್ನ ಸಮಸ್ಯೆ ಭಯಂಕರವಾಗಿದೆ. ದುರ್ದೈವದಿಂದ ಅದು ಹಿಂದೂ ಗಳಿಗೆ ಇನ್ನೂ ಸರಿಯಾಗಿ ತಿಳಿದಿಲ್ಲ ಮತ್ತು ಸರಕಾರಕ್ಕೆ ಅದರ ಬಗ್ಗೆ ಸ್ವಲ್ಪವೂ ಅರಿವಿಲ್ಲ್ಲ. ಈ ಕಾರಣದಿಂದಾಗಿ ಇದರ ವಿರುದ್ಧ ಕೇಂದ್ರ ಮಟ್ಟದಲ್ಲಿ ಕಠಿಣ ಕಾನೂನುಗಳಿಲ್ಲ. ಕಾನೂನು ಜಾರಿಗೊಳಿಸಿರುವ ರಾಜ್ಯಗಳು ಈ ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸದೇ ಕೇವಲ ಮತಾಂತರವನ್ನು ತಡೆಯುವ ಉದ್ದೇಶ ಹೊಂದಿರುವುದು ಕಂಡು ಬರುತ್ತದೆ. ಯಾವ ಯುವತಿಯ ಜೀವನ ‘ಲವ್ ಜಿಹಾದ್ ನಲ್ಲಿ ನಾಶವಾಗಿದೆಯೋ ಅವರಲ್ಲಿ ಇದರ ದುಃಖವನ್ನು ವಿಚಾರಿಸಬೇಕು. ‘ಲವ್ ಜಿಹಾದ್ನಲ್ಲಿ ಮೋಸಗೊಂಡಿರುವ ಯುವತಿಯು ಎಲ್ಲ ರೀತಿಯಿಂದಲೂ ಪೀಡಿತರಾಗಿರುತ್ತಾರೆ. ಹೀಗಿರುವಾಗ ಅದರ ವಿರುದ್ಧ ಸೂಕ್ತ ಕಠಿಣ ಕಾನೂನುಗಳು ಬಂದಿಲ್ಲ. ಈ ಸಂದರ್ಭದಲ್ಲಿ ಸರಕಾರವೂ ವಿಶೇಷ ಜಾಗರೂಕವಾಗಿಲ್ಲ್ಲ ಎಂದು ವಿಷಾದದಿಂದ ಹೇಳಬೇಕಾಗುತ್ತದೆ. ಇವೆಲ್ಲದರಿಂದ ಹಿಂದೂ ರಾಷ್ಟ್ರದ ಸ್ಥಾಪನೆ ಎಷ್ಟು ಆವಶ್ಯಕವಾಗಿದೆ ಎಂಬುದು ಇಲ್ಲಿ ಗಮನಕ್ಕೆ ಬರುತ್ತದೆ.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೭.೬.೨೦೨೩)