ಕೊರಳಲ್ಲಿ ‘ಜೈ ಶ್ರೀ ರಾಮ್’ ಎಂಬ ಪಟ್ಟಿ ಹಾಕಿದ್ದ ವಿದ್ಯಾರ್ಥಿಯನ್ನು ಹೊರಹಾಕಿದ ಶಿಕ್ಷಕರು !

  • ಜಾತ್ಯಾತಿತ ಶಿಕ್ಷಣ ಪದ್ಧತಿಯ ಫಲಿತಾಂಶ!

  • ಅದೇ ತರಗತಿಯಲ್ಲಿದ್ದ ಮುಸ್ಲಿಂ ವಿದ್ಯಾರ್ಥಿನಿಗಳಿಗೆ ಹಿಜಾಬ್ ತೆಗೆಯುವಂತೆ ಹೇಳಲು ಶಿಕ್ಷಕರ ನಿರಾಕರಣೆ !

  • ವಿದ್ಯಾರ್ಥಿಗಳು ಮತ್ತು ಹಿಂದುತ್ವನಿಷ್ಠರ ಪ್ರತಿಭಟನೆಯ ಬಳಿಕ ಸಂಬಂಧಪಟ್ಟ ಶಿಕ್ಷಕರಿಂದ ಕ್ಷಮಾಯಾಚನೆ!

ಕೊಲ್ಲಾಪುರ – ನಗರದ ಕಾಲೇಜೊಂದರ ವಾಣಿಜ್ಯ ವಿಭಾಗದ ಮೊದಲ ವರ್ಷದ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಯೊಬ್ಬ ‘ಜೈ ಶ್ರೀ ರಾಮ್’ ಎಂದು ಬರೆದಿದ್ದ ಕೇಸರಿ ಪಟ್ಟಿಯನ್ನು ಕುತ್ತಿಗೆಯಲ್ಲಿ ಧರಿಸಿದ್ದನು. ತರಗತಿ ಆರಂಭವಾದ ನಂತರ ಶಿಕ್ಷಕರೊಬ್ಬರು ಅವನಿಗೆ ಕುತ್ತಿಗೆಯಲ್ಲಿದ್ದ ಪಟ್ಟಿಯನ್ನು ತೆಗೆಯುವಂತೆ ಹೇಳಿದರು. ಈ ಬಗ್ಗೆ ವಿದ್ಯಾರ್ಥಿಯು, ‘ಕ್ಲಾಸ್‌ನಲ್ಲಿರುವ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆಯಲು ಹೇಳಿರಿ’, ಆಗಲೇ ನಾನು ಪಟ್ಟಿಯನ್ನು ತೆಗೆಯುತ್ತೇನೆ’, ಎಂದು ಹೇಳಿದನು. ಈ ಕುರಿತು ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವೆ ವಾದ ನಡೆದಿದ್ದರಿಂದ ಶಿಕ್ಷಕನು ಸಂಬಂಧಪಟ್ಟ ವಿದ್ಯಾರ್ಥಿಯನ್ನು ತರಗತಿಯಿಂದ ಹೊರಹೋಗುವಂತೆ ಹೇಳಿದರು. ಇದಾದ ಬಳಿಕ ಕಾಲೇಜಿನ ಹಲವು ವಿದ್ಯಾರ್ಥಿಗಳು ಒಂದೆಡೆ ಸೇರಿದರು ಮತ್ತು ಹಠಾತ್ ಆಂದೋಲನ ನಡೆಸಿದರು. ಈ ಘಟನೆ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರಿಗೆ ತಿಳಿದಾಗ ಅವರು ಕಾಲೇಜಿಗೆ ಬಂದು ವಿಚಾರಿಸಿದಾಗ ಸಂಬಂಧಪಟ್ಟ ಶಿಕ್ಷಕರು ಕ್ಷಮೆ ಯಾಚಿಸಿದರು.

ಈ ಘಟನೆ ಜುಲೈ 17 ರಂದು ನಡೆದಿದೆ. ಇದರ ‘ವೀಡಿಯೊ’ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗಿದೆ. ಕೇಸರಿ ಪಟ್ಟಿ ಧರಿಸಿದ್ದ ಮತ್ತು ಸಂಬಂಧಿಸಿದ ಶಿಕ್ಷಕನಿಗೆ ತೀಕ್ಷ್ಣವಾಗಿ ಉತ್ತರ ನೀಡಿದ್ದ ವಿದ್ಯಾರ್ಥಿಯನ್ನು ಹಿಂದೂ ಸಹೋದರರು ಅಭಿನಂದಿಸುತ್ತಿದ್ದಾರೆ.

ಸಂಪಾದಕರ ನಿಲುವು

ಜಾತ್ಯತಿತ ಶಿಕ್ಷಣ ಪದ್ದತಿಯಿಂದ ಹಿಂದೂ ಬಾಹುಸಂಖ್ಯಾತವಿರುವ ದೇಶದಲ್ಲಿ, ಶಿಕ್ಷಕರು ‘ಜೈ ಶ್ರೀ ರಾಮ್’ ಅನ್ನು ವಿರೋಧಿಸುತ್ತಾರೆ, ಆದರೆ ಅದೇ ತರಗತಿಯಲ್ಲಿ ‘ಹಿಜಾಬ್’ ಧರಿಸಿರುವ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಹಾಗೆಯೇ ಬಿಡುತ್ತಾರೆ. ಇಂತಹ ಶಿಕ್ಷಕರ ಮೇಲೆ ಶಾಲಾ ಆಡಳಿತದಿಂದ ಕಠಿಣ ಕ್ರಮಕೈಗೊಳ್ಳುವುದು ಅಪೇಕ್ಷೆವಿದೆ !