ಇಂತಹವರನ್ನು ಸರಕಾರ ಹುಡುಕಿ ಪಾಕಿಸ್ತಾನಕ್ಕೆ ಕಳುಹಿಸಬೇಕು ! – ನ್ಯಾಯಾಲಯದ ಅಭಿಪ್ರಾಯ
ಕರ್ಣಾವತಿ (ಗುಜರಾತ) – ಇಲ್ಲಿಯ ನ್ಯಾಯಾಲಯವು ಜುಲೈ ೧೭ ರಂದು ಭಾರತದ ಕುರಿತು ಬೇಹುಗಾರಿಕೆ ಮಾಡಿದ ಮೂರು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಸಿರಾಜುದ್ದೀನ್ ಅಲಿ ಫಕೀರ್, (ವಯಸ್ಸು ೨೪ ವರ್ಷ), ಮಹಮ್ಮದ್ ಆಯುಬ್ (ವಯಸ್ಸು ೨೩ ವರ್ಷ) ಮತ್ತು ನೌಶಾಧ ಅಲಿ (ವಯಸ್ಸು ೨೩ ವರ್ಷ) ಇವರ ಹೆಸರುಗಳಾಗಿವೆ. ಇವರು ಭಾರತದ ಸೇನೆಯ ಸ್ಥಳದ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್ಐಗೆ ಪೂರೈಸುತ್ತಿದ್ದರು. ನ್ಯಾಯಾಲಯವು ಈ ಮೂವರಿಗೆ ಶಿಕ್ಷೆ ವಿಧಿಸುವಾಗ, ಈ ಮೂರು ಜನರು ಕೂಡ ಭಾರತದ ನಾಗರೀಕರಾಗಿದ್ದಾರೆ. ಈ ಮೂರು ಜನರಿಗೆ ಕೂಡ ಭಾರತದಲ್ಲಿ ಉದ್ಯೋಗ ದೊರೆತಿದೆ; ಆದರೆ ಅವರಿಗೆ ಭಾರತದ ಮೇಲೆ ಪ್ರೀತಿ ಇಲ್ಲ ಮತ್ತು ಅವರಲ್ಲಿ ದೇಶಭಕ್ತಿಯ ಭಾವನೆ ಕೂಡ ಇಲ್ಲ. ಅವರಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಇರುವುದರಿಂದ ಪಾಕಿಸ್ತಾನದ ಬಗ್ಗೆ ದೇಶಭಕ್ತಿ ಕಂಡು ಬರುತ್ತದೆ. ಆದ್ದರಿಂದ ಅವರು ಭಾರತದ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ನೀಡಿದ್ದಾರೆ. ಭಾರತದಲ್ಲಿದ್ದು ಭಾರತದ ನಾಗರೀಕರಾಗಿದ್ದು ಕೂಡ ಪಾಕಿಸ್ತಾನಗೋಸ್ಕರ ಬೇಹುಗಾರಿಕೆ ಮಾಡುವವರು ತಾವೇ ದೇಶ ಬಿಟ್ಟು ಹೋಗಬೇಕು ಅಥವಾ ಸರಕಾರ ಇಂತಹ ಜನರನ್ನು ಹುಡುಕಿ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಹೇಳಿದೆ.
#Gujarat court sentences 3 men for life for working for Pakistan’s spy agency @gopimaniar | #Pakistan https://t.co/ESUJoj9Pz1
— IndiaToday (@IndiaToday) July 17, 2023
ಕರ್ಣಾವತಿ ಪೊಲೀಸರು ಅಕ್ಟೋಬರ್ ೧೪, ೨೦೧೨ ರಂದು ಜಮಾಲಪುರದಲ್ಲಿ ವಾಸಿಸುವ ಫಕೀರ ಹಾಗೂ ಕರ್ಣಾವತಿಲ್ಲಿ ವಾಸಿಸುವ ಅಯುಬ್ ನನ್ನು ಬಂಧಿಸಿದ್ದರು. ಜೋಧಪುರದಿಂದ ನೌಶಾದ್ ಅಲಿ ಇವನನ್ನು ನವಂಬರ್ ೨, ೨೦೧೨ ರಲ್ಲಿ ಬಂಧಿಸಿದ್ದರು. ಫಕೀರ ೨೦೦೭ ರಲ್ಲಿ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದನು.
ಸಂಪಾದಕರ ನಿಲುವು* ಇಂತಹ ದೇಶದ್ರೋಹಿಗಳನ್ನು ಜೀವಾವಧಿ ಶಿಕ್ಷೆಯ ಬದಲು ಗಲ್ಲು ಶಿಕ್ಷೆ ವಿಧಿಸಿದರೆ ಇತರರಿಗೆ ಕೂಡ ಇದರಿಂದ ಭಯ ಹುಟ್ಟುವುದು, ಎಂದು ದೇಶಭಕ್ತ ಭಾರತೀಯರಿಗೆ ಅನಿಸುವುದು ! |