ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧನೆಯಲ್ಲಿ ಶೀಘ್ರ ಉನ್ನತಿಗಾಗಿ ಹೇಳಿದ ‘ಅಷ್ಟಾಂಗಸಾಧನೆಯ ಬಗ್ಗೆ ಅರಿವಾದ ಅಂಶಗಳು

(ಸದ್ಗುರು) ಡಾ. ಮುಕುಲ ಗಾಡಗೀಳ

‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧನೆಯಲ್ಲಿ ಶೀಘ್ರ ಉನ್ನತಿಯಾಗಲು ವಿನೂತನವಾದ ‘ಅಷ್ಟಾಂಗಸಾಧನೆ’ಯನ್ನು ಕಂಡು ಹಿಡಿದಿದ್ದಾರೆ. ಅದನ್ನು ಅಳವಡಿಸಿಕೊಂಡ ಸನಾತನ ಸಂಸ್ಥೆಯ ಸಾವಿರಾರು ಸಾಧಕರಿಗೆ ಲಾಭವಾಗಿದೆ. ಈ ಅಷ್ಟಾಂಗಸಾಧನೆಯಲ್ಲಿ ‘ಸ್ವಭಾವದೋಷ-ನಿರ್ಮೂಲನೆ (ಹಾಗೂ ಗುಣಸಂವರ್ಧನೆ), ಅಹಂ-ನಿರ್ಮೂಲನೆ, ನಾಮಜಪ, ಭಾವಜಾಗೃತಿ, ಸತ್ಸಂಗ, ಸತ್ಸೇವೆ, ತ್ಯಾಗ ಮತ್ತು ಪ್ರೀತಿ’ ಈ ೮ ಅಂಗಗಳು, ಎಂದರೆ ಹಂತಗಳಾಗಿವೆ. ಈ ಪ್ರಕ್ರಿಯೆಯ ಬಗ್ಗೆ ನನಗೆ ಮುಂದಿನ ಅಂಶಗಳ ಅರಿವಾಯಿತು.

೧. ಈ ಅಷ್ಟಾಂಗಸಾಧನೆಯಲ್ಲಿನ ‘ಸ್ವಭಾವದೋಷ-ನಿರ್ಮೂಲನೆ (ಹಾಗೆಯೇ ಗುಣಸಂವರ್ಧನೆ), ಅಹಂ-ನಿರ್ಮೂಲನೆ, ನಾಮ ಜಪ, ಭಾವಜಾಗೃತಿ ಮತ್ತು ಸತ್ಸಂಗ’ ಈ ಮೊದಲ ೫ ಅಂಗ ಗಳನ್ನು ಮನಸ್ಸಿನ ಮೂಲಕ ಮಾಡಬಹುದಾಗಿದೆ ಮತ್ತು ಇನ್ನುಳಿದ ‘ಸತ್ಸೇವೆ, ತ್ಯಾಗ ಮತ್ತು ಪ್ರೀತಿ ಈ ಅಂಗಗಳನ್ನು ಕೃತಿಯ ಮೂಲಕ ಮಾಡಬಹುದಾಗಿದೆ. ಆದುದರಿಂದ ನಾವು ಕಾರಣಾಂತರಗಳಿಂದ ಅಸ್ವಸ್ಥವಿರುವಾಗ ನಾವು ಮೊದಲ ೫ ಅಂಗಗಳ ಮೂಲಕ ಸಹಜವಾಗಿ ಸಾಧನೆಯನ್ನು ಮಾಡಬಹುದು.

೨. ಈ ಅಷ್ಟಾಂಗಸಾಧನೆಯಲ್ಲಿನ ‘ಸ್ವಭಾವದೋಷ-ನಿರ್ಮೂಲನೆ (ಹಾಗೆಯೇ ಗುಣಸಂವರ್ಧನೆ), ಅಹಂ-ನಿರ್ಮೂಲನೆ, ನಾಮ ಜಪ ಮತ್ತು ಭಾವಜಾಗೃತಿ’ ಈ ಮೊದಲ ೪ ಅಂಗಗಳು ಮನೋಲಯ ಮಾಡುತ್ತವೆ. ನಂತರದ ‘ಸತ್ಸಂಗ, ಸತ್ಸೇವೆ ಮತ್ತು ತ್ಯಾಗ’ ಈ ೩ ಅಂಗಗಳು ಬುದ್ಧಿಯ ಲಯ ಮಾಡುತ್ತವೆ ಮತ್ತು ಕೊನೆಯ ‘ಪ್ರೀತಿ’ ಈ ಅಂಗವು ಅಹಂನ ಲಯ ಮಾಡುತ್ತದೆ.’

– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೬.೬.೨೦೨೩)