ಸತ್ಸೇವೆಯ ಮೂಲಕ ಈ ರೀತಿ ಆನಂದವನ್ನು ಪಡೆಯಿರಿ !

(ಸದ್ಗುರು) ಡಾ. ಮುಕುಲ ಗಾಡಗೀಳ

‘ಆನಂದವನ್ನು ಪಡೆಯಲು ಸಾಧನೆ ಮಾಡಬೇಕಾಗುತ್ತದೆ. ಸಾಧನೆಯಲ್ಲಿನ ‘ಸತ್ಸೇವೆ, ಎಂದರೆ ಈಶ್ವರಪ್ರಾಪ್ತಿಯ ಉದ್ದೇಶವನ್ನಿಟ್ಟು ಮಾಡಿದ ಕೃತಿ. ಆದ್ದರಿಂದ ಸತ್ಸೇವೆಯಿಂದಲೂ ಆನಂದ ದೊರೆಯಬೇಕು; ಆದರೆ ‘ಸತ್ಸೇವೆ ನನ್ನಿಂದಾಗಬಹುದೇ ?, ಎಂಬ ವಿಚಾರದಿಂದ ಅಥವಾ ‘ಅದರಲ್ಲಿ ನಮ್ಮಿಂದ ತಪ್ಪುಗಳಾಗಬಹುದು, ಎಂಬ ಭಯದಿಂದ ಕೆಲವು ಸಾಧಕರಿಗೆ ಸತ್ಸೇವೆಯಿಂದ ಆನಂದ ಪಡೆಯಲು ಆಗುವುದಿಲ್ಲ. ಅವರಿಗಾಗಿ ‘ಸತ್ಸೇವೆಯ ಮೂಲಕ ಆನಂದ ಹೇಗೆ ಪಡೆಯುವುದು ?, ಎಂಬುದರ ಕೆಲವು ಉದಾಹರಣೆಗಳನ್ನು ಇಲ್ಲಿ ಕೊಡಲಾಗಿದೆ.

೧. ಸತ್ಸೇವೆ ಮಾಡುವಾಗ ಮಧ್ಯಮಧ್ಯದಲ್ಲಿ ‘ನಮ್ಮ ನಾಮಜಪ ಆಗುತ್ತಿದೆಯಲ್ಲವೆ ?, ಎಂದು ಗಮನಿಸುತ್ತಿರಬೇಕು. ನಾಮಜಪ ದಿಂದಾಗಿ ನಮ್ಮ ಮನಸ್ಸು ಸ್ಥಿರವಾಗಿರಲು ಸಹಾಯವಾಗುತ್ತದೆ. ಹಾಗೆಯೇ ನಾಮಜಪದಿಂದ ಮನಸ್ಸು ಈಶ್ವರನ ಚರಣಗಳಲ್ಲಿ ಲೀನವಾಗುತ್ತದೆ. ಈಶ್ವರನ ಚರಣಗಳಲ್ಲಿ ಅಥವಾ ಗುರುಗಳ ಚರಣಗಳಲ್ಲಿ ಇದ್ದರೆ ಖಂಡಿತವಾಗಿ ಆನಂದ ಸಿಗುತ್ತದೆ.
೨. ಮಾರ್ಗದರ್ಶಕರು ಹೇಳಿದ ಅಥವಾ ಧರ್ಮಾಚರಣೆಯಂತೆ ಸತ್ಸೇವೆ ಮಾಡಿದರೆ ಆಜ್ಞಾಪಾಲನೆಯ ಆನಂದ ಸಿಗುತ್ತದೆ.
೩. ಸತ್ಸೇವೆಯನ್ನು ಮಾಡುವಾಗ ಮನಸ್ಸು ಮತ್ತು ಬುದ್ಧಿಯನ್ನು ಸಂಪೂರ್ಣವಾಗಿ ಆ ಸೇವೆಯಲ್ಲಿ ತೊಡಗಬೇಕು. ಇದರಿಂದ ಅಂತರ್ಮುಖರಾಗಲು ಸಾಧ್ಯವಾಗುತ್ತದೆ. ಮನಸ್ಸಿನಲ್ಲಿ ಅನಾವಶ್ಯಕ ವಿಚಾರಗಳು ಆಲೋಚನೆಗಳು ಬರುವುದಿಲ್ಲ ಮತ್ತು ಪೂರ್ಣ ಏಕಾಗ್ರತೆಯಿಂದ ಸೇವೆಯಾಗಿ ಅದರ ಆನಂದ ಸಿಗುತ್ತದೆ.
೪. ಸತ್ಸೇವೆಯನ್ನು ಮಾಡುವಾಗ ಏನಾದರೂ ಸಂದೇಹ ಅಥವಾ ಅಡಚಣೆಯುಂಟಾದರೆ ತಕ್ಷಣ ಅದರ ನಿವಾರಣೆ ಅಥವಾ ಪರಿಹಾರ ಮಾಡಿಕೊಳ್ಳಬೇಕು. ಇದರಿಂದ ಸಹಜವಾಗಿ ಸತ್ಸೇವೆಯಾಗಿ ಅದರಿಂದ ಆನಂದ ಸಿಗುತ್ತದೆ.
೫. ಸತ್ಸೇವೆಯಲ್ಲಾದ ಒಂದು ತಪ್ಪು ತೋರಿಸಿಕೊಟ್ಟರೆ ಅದನ್ನು ಸರಿಪಡಿಸಿಕೊಳ್ಳುವುದರಿಂದ ಯೋಗ್ಯ ದಿಶೆಯಲ್ಲಿ ಸತ್ಸೇವೆಯಾಗಿ ಅದರಿಂದ ಆನಂದ ಸಿಗುತ್ತದೆ. ಮತ್ತು ತಪ್ಪು ತೋರಿಸಿದವರ ಬಗ್ಗೆ ಕೃತಜ್ಞತೆ ಅನಿಸಿ ಸಹ ಆನಂದ ಸಿಗುತ್ತದೆ.
೬. ಸತ್ಸೇವೆ ಮಾಡುವಾಗ ನಮ್ಮಿಂದಾದ ತಪ್ಪುಗಳಿಂದ ಕಲಿತಾಗಲೂ ಆನಂದ ಸಿಗುತ್ತದೆ.
೭. ಸತ್ಸೇವೆಯಲ್ಲಿ ಕಲಿಯಲು ಸಿಕ್ಕಿದಾಗಲೂ ಆನಂದ ಸಿಗುತ್ತದೆ. ಇದಕ್ಕಾಗಿ ಕಲಿಯುವ ಜಿಜ್ಞಾಸೆಯನ್ನು ಜಾಗೃತವಾಗಿಡಬೇಕು.
೮. ಸತ್ಸೇವೆ ಮಾಡುವಾಗ ಜಿಜ್ಞಾಸೆಯನ್ನು ಜಾಗೃತವಾಗಿಟ್ಟರೆ ಸೇವೆಯ ಅಂಶಗಳು ಅಥವಾ ಸೇವೆಯ ಒಂದು ಹೊಸ ವಿಧಾನವು ದೇವರ ಕೃಪೆಯಿಂದ ಹೊಳೆಯುತ್ತದೆ. ಅದರಿಂದ ಸಹ ಆನಂದ ಸಿಗುತ್ತದೆ.
೯. ದೇವರ ಕೃಪೆಯಿಂದ ಹೊಸತು ಏನಾದರೂ ಹೊಳೆದರೆ ಅದನ್ನು ನಿಮ್ಮ ಮಾರ್ಗದರ್ಶಕರಿಗೆ ಹೇಳಬೇಕು ಮತ್ತು ದೇವರ ಕೃಪೆಯಿಂದ ಹೊಳೆದಂತೆ ಮಾಡಲು ಅವರು ಒಪ್ಪಿದರೆ ಹಾಗೆ ಮಾಡಬೇಕು. ಇದರಿಂದ ಮನೋಲಯ ಮತ್ತು ಅಹಂಲಯ ವಾಗುತ್ತಿರುವುದರ ಆನಂದ ಅನುಭವಿಸಲು ಸಿಗುತ್ತದೆ.
೧೦. ಸತ್ಸೇವೆಯು ಪೂರ್ಣವಾದ ನಂತರ ಅದರ ವರದಿಯನ್ನು ತೆಗೆದುಕೊಳ್ಳಬೇಕು. ಅದರಲ್ಲಿ ಏನಾದರೂ ತಪ್ಪು ಕಂಡು ಬಂದರೆ ಅದನ್ನು ಸುಧಾರಿಸಿದರೆ ಆಗಲೂ ಆನಂದ ಸಿಗುತ್ತದೆ.
೧೧. ‘ನಮ್ಮ ಮಾರ್ಗದರ್ಶಕರು ನಮ್ಮ ಗುರುಗಳೇ ಇದ್ದಾರೆ, ಎಂಬ ಭಾವವಿಟ್ಟು ನಮ್ಮಿಂದಾದ ಸತ್ಸೇವೆಯನ್ನು ಅವರ ಚರಣ ಗಳಿಗೆ ಅರ್ಪಿಸಬೇಕು. ಇದರಿಂದ ನಮಗೆ ಸಾಧ್ಯವಾದ ಮಟ್ಟಿಗೆ ಪರಿಪೂರ್ಣ ಮಾಡಿದ ಆನಂದ ಸಿಗುತ್ತದೆ. ಆಗಲೂ ಸಹ ಮಾರ್ಗದರ್ಶಕರು ತಪ್ಪುಗಳನ್ನು ತೋರಿಸಿ ಕೊಟ್ಟರೆ ‘ಅವರು ನಮಗೆ ಇನ್ನೂ ಪರಿಪೂರ್ಣತೆಯತ್ತ ಹೋಗಲು ಸಹಾಯ ಮಾಡಿದರು, ಎಂಬ ವಿಚಾರದಿಂದ ಆನಂದ ಸಿಗುತ್ತದೆ.

ಈ ರೀತಿ ಸತ್ಸೇವೆಯ ಪ್ರತಿಯೊಂದು ಹಂತದಲ್ಲಿ ಆನಂದ ಪಡೆಯಬಹುದು. ಸಾಧಕರ ಜೀವನದಲ್ಲಿನ ಪ್ರತಿಯೊಂದು ಕೃತಿಯು ಸತ್ಸೇವೆಯೇ ಆಗಿರಬೇಕು. ಆದ್ದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿರುವ ‘ಅಷ್ಟಾಂಗಸಾಧನೆಯನ್ನು ಪ್ರತಿಯೊಂದು ಕೃತಿಯಿಂದ ಮಾಡಲು ಸಾಧ್ಯವಾಗಿ ಆಧ್ಯಾತ್ಮಿಕ ಉನ್ನತಿಯು ಸಹಜವಾಗಿ ಆಗಬಲ್ಲದು !

– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೭.೬.೨೦೨೩)