ಚೀನಾವು ನೇಪಾಳದಲ್ಲಿ ಉತ್ಪಾದಿಸುವ ವಿದ್ಯುತ್‌ಅನ್ನು ಭಾರತ ಖರೀದಿಸುವುದಿಲ್ಲ ! – ಭಾರತದ ಸ್ಪಷ್ಟನೆ

ಕಾಠ್ಮಾಂಡು – ಭಾರತ ನೇಪಾಳ ಜೊತೆ ೧೦ ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಯ ಒಪ್ಪಂದ ಮಾಡಿಕೊಂಡಿದೆ. ‘ನೇಪಾಳದಲ್ಲಿ ನಿರ್ಮಾಣವಾಗುವ ವಿದ್ಯುತ್ ನಾವು ಖರೀದಿಸುವೆವು; ಆದರೆ ಆ ಪ್ರಕಲ್ಪ ಚೀನಾ ನಿರ್ಮಿಸಿದರೇ ಅಥವಾ ಚೀನಾ ಅದರಲ್ಲಿ ಬಂಡವಾಳ ಹೂಡಿದರೇ ಆ ವಿದ್ಯುತ್ ನಾವು ಖರೀದಿಸುವುದಿಲ್ಲ’, ಎಂದು ಭಾರತ ಸ್ಪಷ್ಟಪಡಿಸಿದೆ. ನೇಪಾಳ ಮಾರ್ಗವಾಗಿ ಭಾರತೀಯ ಮಾರುಕಟ್ಟೆಗೆ ತಲುಪಲು ಚೀನಾ ಅನೇಕ ದಿನಗಳಿಂದ ಪ್ರಯತ್ನಿಸುತ್ತಿದೆ. ಈಗ ಚೀನಾದಿಂದ ಭಾರತೀಯ ಮಾರುಕಟ್ಟೆಯಲ್ಲಿ ಟೊಮೆಟೊದ ಕಳ್ಳ ಸಾಗಾಣಿಕೆ ನಡೆಯುತ್ತಿದೆ. ಶ್ರೀಲಂಕಾ ಮತ್ತು ಪಾಕಿಸ್ತಾನದಂತೆ ನೇಪಾಳದಲ್ಲಿ ವಿವಿಧ ಪ್ರಕಲ್ಪ ನಡೆಸಿ ಅದನ್ನು ಸಾಲಗಾರರನ್ನಾಗಿ ಮಾಡಲು ಬಯಸುವ ಚೀನಾಗೆ ಭಾರತದ ಈ ನಿರ್ಣಯದ ಮೂಲಕ ದೊಡ್ಡ ಆಘಾತ ನೀಡಿದೆ.

೧. ಭಾರತವು ನೇಪಾಳದಲ್ಲಿ ನಿರ್ಮಾಣವಾಗುವ ವಿದ್ಯುತ್ ನ ವಿಚಾರಣೆ ಮುಂದುವರೆಸಿದೆ. ನೇಪಾಳ ಯಾವ ವಿದ್ಯುತ ಪ್ರಕಲ್ಪದಿಂದ ವಿದ್ಯುತ್ ನಿರ್ಮಿಸಿ ನಿರ್ಯಾತ ಮಾಡಲು ಬಯಸುತ್ತದೆ, ಅದರಲ್ಲಿ ಚೀನಾದ ಬಂಡವಾಳ ಹೂಡಿಕೆ ಇದೆಯೇ ಎಂಬುದನ್ನು ಭಾರತ ಪರಿಶೀಲಿಸುತ್ತಿದೆ. ನೇಪಾಳ ಪ್ರಸ್ತುತ ಭಾರತಕ್ಕೆ ೪೫೨ ಮೇಘ ವ್ಯಾಟ್ ವಿದ್ಯುತ್ ಮಾರುತ್ತಿದೆ. ನೇಪಾಳಗೆ ಈಗ ಇನ್ನೂ ೧೮ ಜಲವಿದ್ಯುತ್ ಪ್ರಕಲ್ಪದಿಂದ ವಿದ್ಯುತ್ ಉತ್ಪತ್ತಿ ಮಾಡಬೇಕಿದೆ. ಅದರ ಕ್ಷಮತೆ ಒಟ್ಟು ೧ ಸಾವಿರ ಮೆಗಾ ವ್ಯಾಟ್ ಇರುವುದು. ಭಾರತ ಈಗ ಈ ಎಲ್ಲಾ ಶಕ್ತಿ ಪ್ರಕಲ್ಪದ ಆರ್ಥಿಕ ವರದಿಯ ಬಗ್ಗೆ ಮಾಹಿತಿ ಕೇಳಿದೆ.

೨. ನೇಪಾಳಿ ಅಧಿಕಾರಿಗಳು, ಭಾರತ ಈಗ ಜಲ ವಿದ್ಯುತ್ ಪ್ರಕಲ್ಪದ ಸಂಪೂರ್ಣ ವಿಚಾರಣೆ ನಡೆಸುವುದು ನೋಡುತ್ತಿದೆ, ಇಂತಹ ಪರಿಸ್ಥಿತಿಯಲ್ಲಿ ಈಗ ಚೀನಾದಿಂದ ನಿರ್ಮಿಸಲಾದ ವಿದ್ಯುತ್ ನೇಪಾಳ ಭಾರತಕ್ಕೆ ಮಾರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.