1 ಸಾವಿರ ವರ್ಷಗಳ ವರೆಗೆ ಅಯೋಧ್ಯೆಯ ಶ್ರೀರಾಮಮಂದಿರಕ್ಕೆ ಏನೂ ಆಗುವುದಿಲ್ಲ ! – ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ

ಅಯೋಧ್ಯೆ (ಉತ್ತರಪ್ರದೇಶ) – ಅಯೋಧ್ಯೆಯ ಶ್ರೀರಾಮ ಮಂದಿರದ ಕೆಳಮಹಡಿಯ ಕೆಲಸವು ಅಕ್ಟೋಬರ 2023 ವರೆಗೆ ಪೂರ್ಣಗೊಳ್ಳಲಿದೆ. ಹಾಗೂ ಜನೇವರಿ 15 ರಿಂದ 24, 2024 ರ ಕಾಲಾವಧಿಯಲ್ಲಿ ಗರ್ಭಗುಡಿಯಲ್ಲಿ ಶ್ರೀರಾಮ ಮೂರ್ತಿಗೆ ಅಭಿಷೇಕವನ್ನು ಮಾಡಲಾಗುವುದು. ದೇವಸ್ಥಾನದ ಪ್ರತಿಯೊಂದು ಕಲಾಕೃತಿ ಹಾಗೂ ಅದರ ಭಾಗಗಳು ಮುಂದಿನ 1 ಸಾವಿರ ವರ್ಷಗಳ ವರೆಗೆ ಏನೂ ಆಗದಿರುವಂತೆ ಹಾಗೂ ಅದಕ್ಕೆ ಯಾವುದೇ ದುರಸ್ತಿಯ ಆವಶ್ಯಕತೆಯೂ ಇಲ್ಲದ ರೀತಿಯಲ್ಲಿ ನಾವು ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಚಂಪತರಾಯ್ ಇವರು ಜುಲೈ 16 ರಂದು ಮಾಹಿತಿ ನೀಡಿದರು.

ರಾಯ್ ತಮ್ಮ ಮಾತನ್ನು ಮುಂದುವರಿಸುತ್ತಾ,

1. ಶ್ರೀರಾಮ ಪಂಚಾಯತನವನ್ನು ಕೆಳ ಮಹಡಿಯಲ್ಲಿ ಸ್ಥಾಪಿಸಲಾಗುವುದು.

2. ದೇವಾಲಯದ ನಿರ್ಮಾಣದಲ್ಲಿ ಸಧ್ಯಕ್ಕೆ 21 ಲಕ್ಷ ಘನ ಅಡಿಗಳಷ್ಟು ಗ್ರಾನೈಟ್, ಮಾರ್ಬಲ್ ಇತ್ಯಾದಿಗಳನ್ನು ಬಳಸಲಾಗುತ್ತಿದೆ.

3. ಶ್ರೀರಾಮಮಂದಿರದ ಚೌಕಟ್ಟು ಅಮೃತಶಿಲೆಯಿಂದ ಮಾಡಲಾಗಿದೆ. ಬಾಗಿಲುಗಳು ಮಹಾರಾಷ್ಟ್ರದ ತೇಗದ ಮರದಿಂದ ಮಾಡಲಾಗಿದೆ. ಅದರ ಮೇಲೆ ಕೆತ್ತನೆಯ ಕೆಲಸವೂ ಪ್ರಾರಂಭವಾಗಿದೆ.

4. ದೇವಾಲಯದ ಕೆಳ ಮಹಡಿಯಲ್ಲಿ 162 ಕಂಬಗಳನ್ನು ನಿರ್ಮಿಸಲಾಗಿದ್ದು, ಅಲ್ಲಿ 4 ಸಾವಿರ 500 ಕ್ಕಿಂತ ಹೆಚ್ಚು ಮೂರ್ತಿಗಳನ್ನು ಕೆತ್ತಲಾಗುತ್ತಿದೆ. ಇದರಲ್ಲಿ ತ್ರೈತಾಯುಗದ ಒಂದು ನೋಟವನ್ನು ನೋಡಬಹುದಾಗಿದೆ. ಇದಕ್ಕಾಗಿ ಕೇರಳ ಮತ್ತು ರಾಜಸ್ಥಾನ ರಾಜ್ಯಗಳಿಂದ 40 ಕುಶಲಕರ್ಮಿಗಳನ್ನು ಕರೆಸಲಾಗಿದೆ. ಒಬ್ಬ ಕುಶಲಕರ್ಮಿಗೆ ಒಂದು ಸ್ತಂಭದ ಮೇಲೆ ಮೂರ್ತಿಯ ಕೆತ್ತನೆ ಕೆಲಸ ಮಾಡಲು ಸುಮಾರು 200 ದಿನಗಳು ಬೇಕಾಗುತ್ತದೆ, ಎಂದು ಹೇಳಿದರು.

ಸಂಪಾದಕರ ನಿಲುವು

ದೇವಸ್ಥಾನ ನಿರ್ಮಾಣದ ನಂತರ ಅದರ ರಕ್ಷಣೆಗೆ ಸಮರ್ಥ ವ್ಯವಸ್ಥೆ ಇರುವುದು ಅಷ್ಟೇ ಆವಶ್ಯಕ !