ಮೆರಠನಲ್ಲಿ ವಿದ್ಯುತ್ ತಂತಿ ತಗುಲಿ ೫ ಕಾವಡ ಯಾತ್ರಿಕರ ಸಾವು ಹಾಗೂ ೧೬ ಜನರಿಗೆ ಗಾಯ

ವಿದ್ಯುತ್ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ಆರೋಪ

ಮೆರಠ (ಉತ್ತರ ಪ್ರದೇಶ) – ಇಲ್ಲಿ ಕಾವಡ ಯಾತ್ರಿಕರಿಗೆ ಹೈ ವೋಲ್ಟೇಜ್ ವಿದ್ಯುತ್ ತಂತಿಯ ತಗಲಿ ೫ ಕಾವಡ ಯಾತ್ರಿಕರು ಸಾವನ್ನಪ್ಪಿದ್ದರಾಎ ಹಾಗೂ ೧೬ ಜನರು ಗಾಯಗೊಂಡಿದ್ದಾರೆ. ಈ ಅಪಘಾತದ ನಂತರ ವಿದ್ಯುತ್ ಇಲಾಖೆಯ ಆಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಘಟನೆಯ ನಂತರ ಆಕ್ರೋಶಗೊಂಡ ಕಾವಾಡಿಗಳು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಭಾವನಪುರ ಪೋಲೀಸ ಠಾಣೆಯ ಚೌಹಾಣ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಕಾವಡ ಯಾತ್ರಿಕರು ಡಿಜೆ (ದೊಡ್ಡ ಸಂಗೀತ ಯಂತ್ರ) ನುಡಿಸುತ್ತಾ ಹರಿದ್ವಾರದಿಂದ ಗಂಗಾ ಜಲವನ್ನು ತರುತ್ತಿದ್ದರು. ಈ ಗ್ರಾಮವನ್ನು ಪ್ರವೇಶಿಸುವ ಮೊದಲು, ಅವರು ಹೈ ವೋಲ್ಟೇಜ್ ವಿದ್ಯುತ್ ಪ್ರವಾಹ ನಿಲ್ಲಿಸಲು ಹೇಳಿದ್ದರು. ಆದರೆ ಅಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಡಿಜೆಗೆ ವಿದ್ಯುತ್ ತಂತಿ ತಗುಲಿ ೫ ಕಾವಡ ಯಾತ್ರಿಕರು ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಅಧಿಕಾರಿಗಳನ್ನು ತಪ್ಪಿತಸ್ಥ ನರಹತ್ಯೆ ಪ್ರಕರಣ ದಾಖಲಿಸಿ ಜೈಲಿಗೆ ಹಾಕಬೇಕು !