(ರಝಾಕರ – ದ ಸೈಲೆಂಟ್ ಜೇನೋಸೈಡ್ ಆಫ್ ಹೈದರಾಬಾದ್ ಎಂದರೆ ರಝಾಕರರು (ನಿಜಾಮರ ಕಟ್ಟರ ಮುಸಲ್ಮಾನ ಸೈನಿಕರು) ಹೈದ್ರಾಬಾದದಲ್ಲಿ ನಡೆಸಿರುವ ನರಸಂಹಾರ !)
ಭಾಗ್ಯನಗರ (ತೆಲಂಗಾಣ) – ‘ರಝಾಕರ – ದ ಸೈಲೆಂಟ್ ಜೇನೋಸೈಡ್ ಆಫ್ ಹೈದರಾಬಾದ್’ ಈ ಮುಂಬರುವ ಚಲನಚಿತ್ರದ ಪೋಸ್ಟರ ಪ್ರಸಾರ ಮಾಡಿದೆ. ಈ ಚಲನಚಿತ್ರದ ಮೂಲಕ ನಿಜಾಮರ ಕಾಲದಲ್ಲಿ ರಝಾಕರರಿಂದ ಹಿಂದುಗಳ ವಿರೋಧದಲ್ಲಿ ನಡೆದಿರುವ ನರಸಂಹಾರದ ಚಿತ್ರಿಸಲಾಗಿದೆ.
ಜುಲೈ ೧೫ ರಂದು ಈ ಪೋಸ್ಟರಗಳು ಭಾಜಪದ ಮಾಜಿ ತೆಲಂಗಾಣ ಅಧ್ಯಕ್ಷ ಮತ್ತು ಸಂಸದ ಬಂದಿ ಸಂಜಯ ಕುಮಾರ ಇವರಿಂದ ಅನಾವರಣಗೊಳಿಸಲಾಯಿತು. ಆ ಸಮಯದಲ್ಲಿ ಭಾಜಪದ ಇತರ ನಾಯಕರು ಮತ್ತು ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಸಿ. ವಿದ್ಯಾಸಾಗರ ರಾವ ಇವರು ಕೂಡ ಉಪಸ್ಥಿತರಿದ್ದರು.
ಈ ಪೋಸ್ಟರನಲ್ಲಿ ‘ಓರ್ವ ಬ್ರಾಹ್ಮಣ ಹಿಂದುಗೆ ನಿಲ್ಲಿಸಿ ಬಂದೂಕಿನ ಮುಂದೆ ಇರುವ ಚಾಕುವಿನ ಮೇಲೆ ತೂಗಾಡಿಸುವುದು ತೋರಿಸಲಾಗಿದೆ. ಚಾಕು ಬೆನ್ನಿನಲ್ಲಿ ನುಗ್ಗಿ ಹೊಟ್ಟೆಯಿಂದ ಹೊರ ಬಂದಿರುವುದು ಮತ್ತು ಎಲ್ಲಾ ಕಡೆ ರಕ್ತ ಸಿಡಿದಿರುವುದು ಈ ಪೋಸ್ಟರನಲ್ಲಿ ಕಾಣುತ್ತಿದೆ. ಹಾಗೂ ಎರಡು ಬದಿಯಲ್ಲಿ ಕೆಲವು ಕುದುರೆಗಳಿದ್ದು ಕೆಲವು ಜನರು ಅಲ್ಲೇ ನಿಂತಿರುವುದು ಕಾಣುತ್ತಿದೆ. ಇದು ಬಹುಶಹ ರಝಾಕರರ ಸೈನಿಕರು ಇರುವುದು ಎಂದು ಹೇಳಲಾಗುತ್ತಿದೆ.
೧. ಈ ಚಲನಚಿತ್ರದ ನಿರ್ದೇಶಕರು ಭಾಜಪದ ನಾಯಕ ಗೂಡೂರ ನಾರಾಯಣ ರೆಡ್ಡಿಯಾಗಿದ್ದಾರೆ. ಈ ಚಲನಚಿತ್ರದ ಸಂದರ್ಭದಲ್ಲಿ ಅವರು, ಈ ಚಲನಚಿತ್ರ ಧಾರ್ಮಿಕ ಸಂಘರ್ಷದ ಆಧಾರದಲ್ಲಿ ಇಲ್ಲ ಹಾಗೂ ಯಾರಲ್ಲಿ ಅಸಮಾಧಾನ ನಿರ್ಮಾಣ ಮಾಡುವುದಕ್ಕಾಗಿ ನಿರ್ಮಿಸಿಲ್ಲ ಎಂದು ಹೇಳಿದರು.
೨. ಚಲನಚಿತ್ರದ ಲೇಖಕ ಮತ್ತು ನಿರ್ದೇಶಕರು ಯತಾ ಸತ್ಯನಾರಾಯಣ ಇವರು, ಮುಕ್ತಿಯ ಸಂಘರ್ಷದಿಂದ ಪ್ರೇರಿಪಿತವಾಗಿರುವ ೮೦೦ ವೀರರ ಕಥೆ ಈ ಚಲನಚಿತ್ರದಲ್ಲಿದೆ. ಈ ಚಲನಚಿತ್ರದಿಂದ ಹೈದರಾಬಾದ ಮುಕ್ತಿಯ ಬಗ್ಗೆ ಚಿತ್ರಿಕರಿಸಲಾಗಿದೆ. ನೀವು ರಝಾಕರಾರ ಆಧಾರಿತ ಚಲನಚಿತ್ರ ನೋಡದೆ ಇದ್ದರೆ ನಿಮ್ಮ ಜೀವನಕ್ಕೆ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.
Ay the poster launch of ‘Razakar – The Silent Genocide of Hyderabad’ produced by @GudurNarayana garu
Congratulations 🪷💐#Razakar pic.twitter.com/i7KZPHvg6e— 🪷🪷హైందవి 🪷🪷 (@Hyndavitreddy) July 14, 2023
ಮುಂಬರುವ ಪೀಳಿಗೆಗೆ ರಝಾಕರರ ಇತಿಹಾಸ ತಿಳಿಯುವುದು ಅವಶ್ಯಕ ! – ಸಿ. ವಿದ್ಯಾಸಾಗರ ರಾವ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲರು
ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಸಿ. ವಿದ್ಯಾಸಾಗರ ರಾವ ಇವರು ಈ ಸಂದರ್ಭದಲ್ಲಿ, ನಿಜಾಮರ ಆಡಳಿತದಲ್ಲಿ ಇರುವ ಆಗಿನ ಹೈದರಾಬಾದ್ ಪ್ರಾಂತದಲ್ಲಿನ ಭೂಭಾಗದಲ್ಲಿ ಇಂದು ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರ ಈ ಮೂರು ರಾಜ್ಯಗಳ ಜಿಲ್ಲೆಗಳ ಸೇರಿವೆ. ಬ್ರಿಟಿಷ ಸರಕಾರ ಎಲ್ಲರನ್ನು ಸೇರಿಸಿ ಒಂದು ದೇಶ ನಿರ್ಮಾಣ ಮಾಡುವ ನಿರ್ಣಯ ತೆಗೆದುಕೊಂಡಿತ್ತು. ಆದರೆ ನಿಜಾಮನು ಒಂದು ಸ್ವತಂತ್ರ ರಾಜ್ಯದ ಘೋಷಣೆ ಮಾಡಿದ್ದನು. ಅದಕ್ಕಾಗಿ ನಿಜಾಮನು 2 ಲಕ್ಷ ಮುಸಲ್ಮಾನರ ಒಂದು ಸಕ್ಷಮ ರಝಾಕಾರಿ ಸೈನ್ಯ ಸಿದ್ಧಗೊಳಿಸಿದ್ದನು. ಆ ಸಮಯದಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ನಡೆಯಿತು. ನಮ್ಮ ದೇಶಕ್ಕೆ ದೊರೆತಿರುವ ಸ್ವಾತಂತ್ರ್ಯದ ನಂತರ ೧೭ ತಿಂಗಳ ನಂತರ ಹೈದರಾಬಾದಕ್ಕೆ ಸ್ವಾತಂತ್ರ್ಯ ದೊರೆಯಿತು. ಇಸ್ಲಾಂ ಮತ್ತು ರಝಾಕರ ಬೇರೆ ಬೇರೆಯಾಗಿದ್ದಾರೆ. ಮುಂದೆ ಬರುವ ಪೀಳಿಗೆಗೆ ಈ ಇತಿಹಾಸದ ಮಾಹಿತಿ ಇರುವುದು ಅವಶ್ಯಕವಾಗಿದೆ ಎಂದು ಹೇಳಿದರು.
ರಝಾಕರರ ಹಿಂದುದ್ವೇಷಿ ಇತಿಹಾಸವನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳಿ !
ಭಾರತದ ಸ್ವಾತಂತ್ರ್ಯದ ಸಮಯದಲ್ಲಿ ಹೈದರಾಬಾದ್ ಪ್ರಾಂತವು ಸ್ವತಂತ್ರ ಇಸ್ಲಾಮಿ ರಾಷ್ಟ್ರ ಆಗುವುದಕ್ಕಾಗಿ ರಝಾಕರರ ಸೈನ್ಯ ಸಿದ್ಧಗೊಳಿಸಲಾಗಿತ್ತು. ರಝಾಕಾರರು ಬಹುಸಂಖ್ಯಾತ ಹಿಂದುಗಳನ್ನು ಗುರಿ ಮಾಡಲು ಆರಂಭಿಸಿದರು. ಅನೇಕ ಹಿಂದುಗಳ ಹತ್ಯೆ ಮಾಡಲಾಯಿತು. ಸಾವಿರಾರು ಮಹಿಳೆಯರ ಮೇಲೆ ಬಲಾತ್ಕಾರ ಮಾಡಲಾಯಿತು. ಹೈದರಾಬಾದ್ ಭಾರತದಲ್ಲಿ ವಿಲೀನವಾಗುವುದಕ್ಕಾಗಿ ಯಾರು ಬೇಡಿಕೆ ಸಲ್ಲಿಸುತ್ತಿದ್ದರು ಅವರ ಮೇಲೆ ದಾಳಿ ಮಾಡಲಾಗುತ್ತಿತ್ತು. ಆದ್ದರಿಂದ ಕಟ್ಟರ ಮುಸಲ್ಮಾನ ರಝಾಕರ್ ಮತ್ತು ಹಿಂದುಗಳಲ್ಲಿ ಸಂಘರ್ಷ ನಡೆಯಿತು. ಹೈದರಾಬಾದದಲ್ಲಿ ಹಿಂದುಗಳಿಗೆ ವಾಸಿಸುವುದು ಕಷ್ಟ ಸಾಧ್ಯವಾಯಿತು. ಕೊನೆಗೆ ಸಪ್ಟೆಂಬರ್ ೧೩, ೧೯೪೮ ರಲ್ಲಿ ಆಗಿನ ಕೇಂದ್ರ ಗೃಹ ಸಚಿವರು ವಲ್ಲಭಾಯಿ ಪಟೇಲ್ ಇವರ ಆದೇಶದ ಮೇರೆಗೆ ‘ಆಪರೇಷನ್ ಪೋಲೋ’ ಗೆ ಅನುಮತಿ ನೀಡಲಾಯಿತು. ಇದರ ಅಂತರ್ಗತ ಹೈದರಾಬಾದ್ ಪ್ರಾಂತದಲ್ಲಿ ೫ ದಿನ ಸೈನ್ಯದ ಕಾರ್ಯಾಚರಣೆ ನಡೆಯಿತು. ಇದರಲ್ಲಿ ೧ ಸಾವಿರ ೩೭೩ ರಝಾಕರಿ ಮತ್ತು ನಿಜಾಮರ ೮೦೭ ಸೈನಿಕರು ಹತರಾದರು. ಇದರಲ್ಲಿ ಭಾರತೀಯ ಸೈನ್ಯದ ೬೬ ಸೈನಿಕರು ಹುತಾತ್ಮರಾದರು. ಕೊನೆಗೆ ಹೈದರಾಬಾದ್ ಭಾರತದಲ್ಲಿ ವಿಲೀನಗೊಳಿಸಲಾಯಿತು.
(ಸೌಜನ್ಯ – VibesNews)