ಕೇರಳದ ಪ್ರಾಧ್ಯಾಪಕರ ಕೈಕತ್ತರಿಸಿದ್ದ ೬ ಜನರಲ್ಲಿ ೩ ಮತಾಂಧ ಮುಸಲ್ಮಾನರಿಗೆ ಜೀವಾವಧಿ ಶಿಕ್ಷೆ !

ಪ್ರಾಧ್ಯಾಪಕ ಟಿ.ಜೆ. ಜೋಸೆಫ್

ಎರ್ನಾಕುಲಂ (ಕೇರಳ) – ಇಲ್ಲಿಯ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು ೨೦೧೦ ರಲ್ಲಿ ಪ್ರಾಧ್ಯಾಪಕ ಟಿ.ಜೆ. ಜೋಸೆಫ್ ಇವರ ಕೈತುಂಡರಿಸಿರುವ ಪ್ರಕರಣದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ೩ ಜಿಹಾದಿ ಕಾರ್ಯಕರ್ತರಿಗೆ ಜೀವಾವಧಿ ಹಾಗೂ ಇತರ ೩ ಜನರಿಗೆ ೩ ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಜೀವಾವಧಿ ಶಿಕ್ಷೆಯಾಗಿರುವ ಸಾಜಿಲ್, ನಜೀಬ್ ಮತ್ತು ಎಂ.ಕೆ. ನಜರ್ ಇವರಿಗೆ ೫೦ ಸಾವಿರ ರೂಪಾಯಿ ದಂಡ ಕೂಡ ವಿಧಿಸಲಾಗಿದೆ. ಎಂ.ಕೆ. ನೌಶಾ, ಪಿ.ಪಿ. ಮೋಹಿದೀನಕುನು ಮತ್ತು ಪಿ.ಎಂ. ಅಯುಬ್ ಎಂದು ಇತರ ಮೂವರ ಹೆಸರುಗಳಾಗಿವೆ. ನ್ಯಾಯಾಲಯವು ಸಂತ್ರಸ್ತ ಜೋಸೆಫ್ ಇವರಿಗೆ ೪ ಲಕ್ಷ ರೂಪಾಯಿ ಪರಿಹಾರ ನೀಡುವ ಆದೇಶ ಕೂಡ ನೀಡಿದೆ. ಕುರಾನ್ ನ ಅವಮಾನ ಮಾಡಿದ್ದಾರೆ ಎಂದು ಸಿಟ್ಟಿನಲ್ಲಿ ಅಪರಾಧಿಗಳು ಜೋಸೆಫ್ ಇವರ ಮೇಲೆ ದಾಳಿ ನಡೆಸಿ ಅವರ ಕೈಯನ್ನು ತುಂಡರಿಸಿದ್ದರು.

ಸಂಪಾದಕರ ನಿಲುವು

೨೦೧೦ ರ ಪ್ರಕರಣ, ೧೩ ವರ್ಷಗಳ ನಂತರ ಶಿಕ್ಷೆ ವಿಧಿಸುವುದು ಇದು ಸಂತ್ರಸ್ತ ವ್ಯಕ್ತಿಗೆ ದೊರೆಯುವ ನ್ಯಾಯವಲ್ಲ, ಅನ್ಯಾಯವೇ ಆಗಿದೆ !