ಭಯೋತ್ಪಾದಕ ಸಂಘಟನೆ ಧರ್ಮದ ಘನತೆಯನ್ನು ಕಲಂಕಿತ ಗೊಳಿಸುತ್ತವೆ ! – ‘ವರ್ಲ್ಡ್ ಮುಸ್ಲಿಂ ಲೀಗ’ ನ ಮುಖ್ಯಸ್ಥ ಅಲ್ ಇಸಾ

ಮಹಮ್ಮದ್ ಬಿನ್ ಅಬ್ದುಲ್ ಕರೀಂ ಅಲ್ ಇಸಾ

ನವದೆಹಲಿ – ಭಯೋತ್ಪಾದಕ ಸಂಘಟನೆ ಧರ್ಮದ ಪ್ರತಿಮೆ ಕಳಂಕಿತಗೊಳಿಸುವ ಕಾರ್ಯ ಮಾಡುತ್ತದೆ, ಎಂದು ‘ವರ್ಲ್ಡ್ ಮುಸ್ಲಿಂ ಲೀಗ್’ನ ಮುಖ್ಯಸ್ಥ ಮಹಮ್ಮದ್ ಬಿನ್ ಅಬ್ದುಲ್ ಕರೀಂ ಅಲ್ ಇಸಾ ಇವರು ಭಯೋತ್ಪಾದಕ ಸಂಘಟನೆಯನ್ನು ಟೀಕಿಸಿದರು. ಅವರು ಪ್ರಸ್ತುತ ೫ ದಿನದ ಭಾರತದ ಪ್ರವಾಸದಲ್ಲಿದ್ದು ‘ಧರ್ಮದಲ್ಲಿನ ಸಾಮರಸಕ್ಕಾಗಿ ಸಂವಾದ’ ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಅಲ್ ಇಸಾ ಇವರು ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ಸಂಘಟನೆಗಳನ್ನು ಟೀಕಿಸುತ್ತಾ ಜಗತ್ತಿನಾದ್ಯಂತ ಹೆಚ್ಚುತ್ತಿರುವ ಸಂಘರ್ಷದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

‘ಭಯೋತ್ಪಾದಕ ಸಂಘಟನೆಗಳಿಗೆ ಧರ್ಮ ಅಥವಾ ದೇಶ ಇರುವುದಿಲ್ಲವಂತೆ !’

ಒಂದು ಕಡೆ ಅಲ್ ಇಸಾ ಇವರು ಭಯೋತ್ಪಾದಕ ಸಂಘಟನೆ ಧರ್ಮದ ಪ್ರತಿಮೆ ಕಳಂಕಿತಗೊಳಿಸುತ್ತಿರುವ ಹೇಳಿಕೆ ನೀಡುತ್ತಾರೆ ಮತ್ತು ಇನ್ನೊಂದು ಕಡೆಗೆ ಭಯೋತ್ಪಾದಕ ಸಂಘಟನೆಗಳಿಗೆ ಧರ್ಮ ಅಥವಾ ದೇಶ ಇರುವುದಿಲ್ಲ ಎಂದೂ ಕೂಡ ಹೇಳುತ್ತಾರೆ ! ಈ ಪರಸ್ಪರ ವಿರೋಧಾಭಾಸದ ಹೇಳಿಕೆಯಿಂದ ಅಲ್ ಇಸಾ ಇವರ ದ್ವಿಮುಖ ಸ್ಪಷ್ಟವಾಗುತ್ತದೆ !

ಜಗತ್ತಿನಲ್ಲಿ ಮಾನವೀಯತೆ, ಸ್ಥಿರತೆ ಮತ್ತು ಶಾಂತಿಗಾಗಿ ಅಪಾಯ ನಿರ್ಮಾಣ ಮಾಡಿರುವ ‘ಐಸಿಸ್’, ಅಲ್ ಕಾಯ್ದಾ, ತಾಲಿಬಾನ್, ಬೋಕೊ ಹರಾಮ್ ಇಂತಹ ಭಯೋತ್ಪಾದಕ ಸಂಘಟನೆಯ ಬಗ್ಗೆ ಕೇಳಿದಾಗ ಅಲ್ ಇಸಾ ಇವರು, ”ಈ ಭಯೋತ್ಪಾದಕ ಸಂಘಟನೆಗಳು ಮುಸಲ್ಮಾನರ ಪ್ರತಿನಿಧಿತ್ವ ಮಾಡುವುದಿಲ್ಲ, ಅದು ಕೇವಲ ಸ್ವಂತ ಸಂಘಟನೆಯಗಳಿಗಷ್ಟೇ ಸೀಮಿತವಾಗಿದೆ. ಅವುಗಳಿಗೆ ಯಾವುದೇ ಧರ್ಮ ಅಥವಾ ದೇಶವಿಲ್ಲ.” ಎಂದು ಹೇಳಿದರು.

ಸಂಪಾದಕರ ನಿಲುವು

ಬರಿ ಮಾತನಾಡಿದರೆ ಏನು ಉಪಯೋಗ ? ಇಂದು ಜಗತ್ತು ಇಸ್ಲಾಮಿ ಭಯೋತ್ಪಾದಕರಿಂದ ಪಿಡಿತವಾಗಿರುವಾಗ ಮುಸಲ್ಮಾನ ಧರ್ಮಗುರು ಮತ್ತು ಮುಖಂಡರು ಭಯೋತ್ಪಾದನೆಯ ವಿರುದ್ಧ ಎಂದಾದರೂ ಫತ್ವಾ ತೆಗೆದಿದ್ದಾರಯೇ ? ‘ಜಿಹಾದಿ ಭಯೋತ್ಪಾದನೆ’ ಎಂದು ಉಚ್ಚರಿಸದೆ ಇರುವುದು ಕೂಡ ಜಿಹಾದ್ ಗೆ ಬೆಂಬಲವಾಗಿದೆ, ಹೀಗೆ ಯಾರಿಗೆ ಅನಿಸಿದರೆ ಅದರಲ್ಲಿ ತಪ್ಪೇನೂ ಇಲ್ಲ ?