(ಡ್ರಸ್ ಕೋಡ್ ಎಂದರೆ ದೇವಸ್ಥಾನದಲ್ಲಿ ಪ್ರವೇಶ ಮಾಡುವಾಗ ಧರಿಸುವ ಬಟ್ಟೆಗಳ ಸಂದರ್ಭದಲ್ಲಿನ ನಿಯಮಗಳು)
ದ್ವಾರಕ (ಗುಜರಾತ) – ಮಹಾರಾಷ್ಟ್ರ ಸಹಿತ ದೇಶದಲ್ಲಿನ ಅನೇಕ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾದ ನಂತರ ಈಗ ಪ್ರಸಿದ್ಧ ದ್ವಾರಕಾಧಿಶದಲ್ಲಿಯೂ ಕೂಡ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ. ದೇವಸ್ಥಾನದ ವ್ಯವಸ್ಥಾಪಕರಿಂದ ನೀಡಲಾದ ಮಾಹಿತಿಯ ಪ್ರಕಾರ ಜಗತ್ಪ್ರಸಿದ್ಧ ದೇವಸ್ಥಾನ ದ್ವಾರಕೆಯ ಘನತೆ ಕಾಪಾಡುವುದಕ್ಕಾಗಿ ಭಾರತೀಯ ಸಂಸ್ಕೃತಿಯ ಪ್ರಕಾರ ಉಡುಪು ಧರಿಸಬೇಕಾಗುತ್ತದೆ. ದೇವಸ್ಥಾನದ ಹೊರಗೆ ಡ್ರೆಸ್ ಕೋಡ್ ಬಗ್ಗೆ ಗುಜರಾತಿ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಫಲಕಗಳು ಬರೆಯಲಾಗಿದೆ.
೧. ದೇವಸ್ಥಾನದ ಹೊರಗಿನ ಫಲಕದ ಮೇಲೆ, ದೇವಸ್ಥಾನ ಇದು ದರ್ಶನದ ಸ್ಥಾನವಾಗಿದೆ. ಸ್ವಂತದ ಪ್ರದರ್ಶನ ಅಲ್ಲ. ದೇವಸ್ಥಾನದಲ್ಲಿ ಬರುವ ಎಲ್ಲಾ ಭಕ್ತರು ಸಾಮಾನ್ಯ ಉಡುಪು ಧರಿಸಿ ದೇವಸ್ಥಾನದಲ್ಲಿ ಪ್ರವೇಶ ಮಾಡಬೇಕು. ತುಂಡು ಬಟ್ಟೆ, ಹಾಫ್ ಪ್ಯಾಂಟ್, ಬರ್ಮುಡಾ, ಮಿನಿ ಟಾಪ್, ಮಿನಿ ಸ್ಕರ್ಟ್, ನೈಟ್ ಸೂಟ್, ಫ್ರಾಕ್ ಮತ್ತು ಹರಿದಿರುವ ಜೀನ್ಸ್ ಧರಿಸಿರುವ ಜನರಿಗೆ ದೇವಸ್ಥಾನದಲ್ಲಿ ಪ್ರವೇಶ ನೀಡಲಾಗದು.
೨. ದೇವಸ್ಥಾನದ ವ್ಯವಸ್ಥಾಪಕ ಪಾರ್ಥ ತಲಸಾನಿಯಾ ಇವರು, ದೇವಸ್ಥಾನಕ್ಕೆ ಬರುವ ಅನೇಕ ಭಕ್ತರ ದೂರಿನ ನಂತರ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಇಂತಹ ಉಡುಪು ಧರಿಸಿ ಬರುವುದರಿಂದ ಇತರ ಭಕ್ತರ ಮನಸ್ಸು ವಿಚಲಿತವಾಗುತ್ತದೆ ಎಂದು ದೇಶದಲ್ಲಿನ ಅನೇಕ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ ಎಂದು ಹೇಳಿದರು.
ಮಥುರಾದ ರಾಧಾ ರಾಣಿ ದೇವಸ್ಥಾನದಲ್ಲಿ ಕೂಡ ಡ್ರೆಸ್ ಕೋಡ್ ಜಾರಿ !
ಇತ್ತೀಚಿಗೆ ಮಥುರಾದ ರಾಧಾ ರಾಣಿ ದೇವಸ್ಥಾನದಲ್ಲಿ ಕೂಡ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ. ಇದರ ಜೊತೆಗೆ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯದಲ್ಲಿನ ಅನೇಕ ದೇವಸ್ಥಾನಗಳಲ್ಲಿ ಇದೇ ನಿಯಮ ಜಾರಿ ಮಾಡಲಾಗಿದೆ.