‘ಇಸ್ರೊ’ದ ವಿಜ್ಞಾನಿಗಳು ತಿರುಪತಿಗೆ ತೆರಳಿ ಬಾಲಾಜಿಯ ದರ್ಶನ ಪಡೆದರು !
ತಿರುಪತಿ (ಆಂಧ್ರ ಪ್ರದೇಶ) – ‘ಭಾರತೀಯ ಭಾಹ್ಯಾಕಾಶ ಸಂಸ್ಥೆ’ಯು (ಇಸ್ರೋ) ಜುಲೈ ೧೩ ಮಧ್ಯಾಹ್ನ ೨ ೩೫ ಕ್ಕೆ ಶ್ರೀಹರಿಕೋಟದ ಸತೀಶ ಧವನ ಬಾಹ್ಯಾಕಾಶ ಕೇಂದ್ರದಿಂದ ‘ಚಂದ್ರಯಾನ ೩’ ಉಡಾವಣೆ ಮಾಡಲಿದೆ. ಇದು ‘ಇಸ್ರೋ’ದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇಸ್ರೋದ ವಿಜ್ಞಾನಿಗಳು ಈ ಯೋಜನೆಗಾಗಿ ದೇವರ ಆಶೀರ್ವಾದ ಪಡೆಯಲು ಇಲ್ಲಿನ ಬಾಲಾಜಿ ದರ್ಶನಕ್ಕಾಗಿ ದೇವಸ್ಥಾನಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ವಿಜ್ಞಾನಿಗಳು ಅವರ ಜೊತೆ ಚಂದ್ರಯಾನ-೩ ರ ಸಣ್ಣ ಪ್ರತಿಕೃತಿಯನ್ನು ತೆಗೆದುಕೊಂಡು ಹೋಗಿದ್ದರು. ‘ಚಂದ್ರಯಾನ-೩’ ಇದು ೨೪ ಅಥವಾ ೨೫ ಆಗಸ್ಟ್ ೨೦೨೩ರಂದು ಚಂದ್ರ ನ ಮೇಲೆ ಇಳಿಯಲಿದೆ. ಆ ನಂತರ ಮುಂದಿನ ೧೪ ದಿನ ಚಂದ್ರನ ಮೇಲ್ಮೈ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಿದೆ.
#WATCH | Andhra Pradesh | A team of ISRO scientists team arrive at Tirupati Venkatachalapathy Temple, with a miniature model of Chandrayaan-3 to offer prayers.
Chandrayaan-3 will be launched on July 14, at 2:35 pm IST from Satish Dhawan Space Centre, Sriharikota, ISRO had… pic.twitter.com/2ZRefjrzA5
— ANI (@ANI) July 13, 2023
ಭಾರತವು ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸುವ ನಾಲ್ಕನೇ ದೇಶವಾಗಿದ್ದೂ ಚಂದ್ರನ ದಕ್ಷಿಣ ಧೃವದ ಹತ್ತಿರ ತಲುಪುವ ಮೊದಲ ದೇಶ ಆಗಲಿದೆ. ಇದೇ ಜಾಗದಲ್ಲಿ ‘ಚಂದ್ರಯಾನ-೧’ ರ ಸಂದರ್ಭದಲ್ಲಿ “ಚಂದ್ರ ಇಂಪ್ಯಾಕ್ಟ್ ಪ್ರೊಬ್” ಬಿಡಲಾಗಿತ್ತು ಮತ್ತು ಆ ಮೂಲಕ ಚಂದ್ರನ ಮೇಲೆ ನೀರಿರುವುದನ್ನು ಕಂಡು ಹಿಡಿಯಲಾಗಿತ್ತು. “ಚಂದ್ರಯಾನ-೨’ ಚಂದ್ರನ ಮೇಲ್ಮೈ ಭಾಗಕ್ಕೆ ಅಪ್ಪಳಿಸಿತ್ತು.
(ಸೌಜನ್ಯ – ANI News)