ಮೈಸೂರು – `ಮಹಿಷ ದಸರಾ ಸಮಿತಿ’ಯ ವತಿಯಿಂದ ಈ ವರ್ಷ ಮಹಿಷ ದಸರಾ ಆಚರಿಸಲು ನಿರ್ಧರಿಸಲಾಗಿದೆಯೆಂದು ಮಾಜಿ ಮಹಾಪೌರ ಪುರುಷೋತ್ತಮ ಇವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪುರುಷೋತ್ತಮ ಇವರು ಮಾತನಾಡಿ, 2015 ರಿಂದಲೇ ಮಹಿಷ ದಸರಾ ಆಚರಿಸಲಾಗುತ್ತಿದೆ. ಕಳೆದ 5 ವರ್ಷಗಳಲ್ಲಿ ಭಾಜಪ ಸರಕಾರದ ವಿರೋಧದಿಂದ ಆಚರಿಸಿಲ್ಲ. ಈ ವರ್ಷದಿಂದ ಮಹಿಷ ದಸರಾ ಆಚರಿಸಲು ನಿರ್ಧರಿಸಲಾಗಿದೆ. ಮಹಿಷ ದಸರಾ ಆಚರಿಸುವ ವಿಷಯದಲ್ಲಿ ಸಮಿತಿಯ ವತಿಯಿಂದ ಇದುವರೆಗೂ ಅರ್ಜಿಯನ್ನು ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮಹಿಷ ದಸರಾ ಆಚರಣೆಗೆ ಅನುಮತಿಯನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
`ಮಹಿಷ ಸತ್ಯ, ಚಾಮುಂಡಿ ಮಿಥ್ಯೆ (ಸುಳ್ಳು)! ಅಂತೆ – ನಿವೃತ್ತ ಪ್ರಾ. ಮಹೇಶ ಚಂದ್ರಗುರು
ಮಹಿಷ ದಸರಾ ಆಚರಿಸುವುದು `ದಸರಾ’ ಹಬ್ಬವನ್ನು ವಿರೋಧಿಸಲಿಕ್ಕಾಗಿ ಅಲ್ಲ. ಅಸುರರು ರಾಕ್ಷಸರಾಗಿರಲಿಲ್ಲ, ಅವರು ರಕ್ಷಕರಾಗಿದ್ದರು (ಈ`ಆವಿಷ್ಕಾರ’ಕ್ಕಾಗಿ ಇಂತಹವರಿಗೆ ಪ್ರಶಸ್ತಿಯನ್ನು ನೀಡಬೇಕು ! – ಸಂಪಾದಕರು) ಮಹಿಷ ಸತ್ಯ, ಚಾಮುಂಡಿ ಮಿಥ್ಯೆ(ಸುಳ್ಳು) ನೀವು ಚಾಮುಂಡಿ ದೇವಿಯ ಪೂಜೆ ಮಾಡುತ್ತೀರಿ ಮಾಡಿರಿ. ನಾವು ಮಹಿಷ ದಸರಾ ಆಚರಿಸುತ್ತೇವೆ, ಅದನ್ನು ಏಕೆ ವಿರೋಧಿಸುತ್ತೀರಿ? ಎಂದು ನಿವೃತ್ತ ಪ್ರಾಧ್ಯಾಪಕ ಮಹೇಶ ಚಂದ್ರಗುರು ಇವರು ಈ ಸಂದರ್ಭದಲ್ಲಿ ಕೇಳಿದರು.
ಅವರು ಮಾತನ್ನು ಮುಂದುವರಿಸುತ್ತಾ,
1. ಮಹಿಷ ನಮ್ಮ ಚಾರಿತ್ರ್ಯ ಪುರುಷನಾಗಿದ್ದಾನೆ. (ಅಸುರರನ್ನು ಚಾರಿತ್ರ್ಯ ಪುರುಷನೆಂದು ಪರಿಗಣಿಸುವವರ ಚಾರಿತ್ರ್ಯದ ಮೇಲೆ ಯಾರಾದರೂ ಸಂಶಯವನ್ನು ವ್ಯಕ್ತಪಡಿಸಿದರೆ ಆಶ್ಚರ್ಯಪಡಬಾರದು ! – ಸಂಪಾದಕರು)
2. ಈ ಭೂಮಿಯ ಮೇಲಿನ ಮಹಾಪುರುಷರನ್ನು ಗೌರವಿಸುವುದು ಮತ್ತು ಅವರನ್ನು ಸ್ಮರಿಸುವುದು ನಮ್ಮ ಧಾರ್ಮಿಕ ಕರ್ತವ್ಯವಾಗಿದೆ. ಸಂವಿಧಾನ ನಮಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. (ಸಾಂವಿಧಾನಿಕ ಹಕ್ಕುಗಳ ಹೆಸರಿನಲ್ಲಿ ಏನು ಬೇಕಾದರೂ ಹೇಳುವವರನ್ನು ವಿರೋಧಿಸುವ ಹಕ್ಕನ್ನು ಸಂವಿಧಾನವೇ ಜನತೆಗೆ ನೀಡಿದೆ ! – ಸಂಪಾದಕರು)
3. ಕಳೆದ 5 ವರ್ಷಗಳಿಂದ ನಮಗೆ ಮಹಿಷ ದಸರಾ ಆಚರಿಸಲು ಅವಕಾಶ ನೀಡಿರಲಿಲ್ಲ. ಇತಿಹಾಸ ಮತ್ತು ನಮ್ಮ ಪರಂಪರೆಯನ್ನು ಮರೆಯಬಾರದು. ಚಾಮುಂಡಿ ತಾಯಿ ಪುರಾಣ ಪ್ರಸಿದ್ಧಳಾಗಿದ್ದಾಳೆ; ಆದರೆ ಮಹಿಷ ಇತಿಹಾಸ ಪುರುಷನಾಗಿದ್ದಾನೆ. ಪುರಾಣ ರಚಿಸಿರುವ ಕಥೆಯಾಗಿದ್ದರೆ, ಇತಿಹಾಸವೆಂದರೆ ಸತ್ಯಕಥೆಯಾಗಿದೆ. (ಈ ದೇಶದಲ್ಲಿ ಈ ರೀತಿ ಬೊಗಳೆ ಬಿಡುವವರ ಸಂಖ್ಯೆ ಕಡಿಮೆಯೇನಿಲ್ಲ. ಇಂತಹವರಿಗೆ ಎಷ್ಟು ಮಹತ್ವ ನೀಡಬೇಕು ಎಂದು ಹಿಂದೂಗಳಿಗೆ ತಿಳಿದಿದೆ ! – ಸಂಪಾದಕರು)
4. ಸತ್ಯ ಮತ್ತು ಅಸತ್ಯ ನಡುವೆ ಸಂಘರ್ಷವಿದೆ. ಮುಂದಿನ ಪೀಳಿಗೆಗೆ ನಾವು ಇತಿಹಾಸವನ್ನು ಹೇಳದಿದ್ದರೆ, ಯಾರು ಹೇಳುವರು? ನೀವು ಯಾವುದೇ ದಸರಾ ಆಚರಿಸಿರಿ, ನಾವು ವಿರೋಧಿಸುವುದಿಲ್ಲ. (ಹಿಂದೂಗಳ ದಸರಾ ಹಬ್ಬವನ್ನು ಯಾರು ವಿರೋಧಿಸಿದರೂ, ಅದಕ್ಕೆ ಹಿಂದೂಗಳು ಎಂದಿಗೂ ಹೆಚ್ಚು ಮಹತ್ವವನ್ನು ನೀಡುವುದಿಲ್ಲವೆಂದು ಇಂತಹ ಜನರು ಯಾವಾಗಲೂ ಗಮನದಲ್ಲಿಟ್ಟುಕೊಳ್ಳಬೇಕು ! – ಸಂಪಾದಕರು)
ಸಂಪಾದಕರ ನಿಲುವುಹಿಂದೂ ಧರ್ಮದ ವಿರುದ್ಧ ಕೃತಿಯನ್ನು ಮಾಡಿ ಅಸುರರನ್ನು ಆದರ್ಶವೆಂದು ಇಟ್ಟುಕೊಳ್ಳುವವರೂ ಕೂಡ ಇದೇ ಮಾನಸಿಕತೆಯಲ್ಲಿದ್ದಾರೆ, ಎಂದು ಯಾರಾದರೂ ಹೇಳಿದರೆ ಆಶ್ಚರ್ಯಪಡಬಾರದು ! |