ಅಪ್ರಾಪ್ತ ಹಿಂದೂ ಹುಡುಗಿಯ ಮತಾಂತರ ಮತ್ತು ಬಲಾತ್ಕಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಫ್ ಅಲಿ ಬಂಧನ

ಫತೇಹಪುರ (ಉತ್ತರಪ್ರದೇಶ) – 16 ವರ್ಷದ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿ ಮತಾಂತರಗೊಳಿಸಿ ಅವಳ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಸೈಫ ಅಲಿ ಹೆಸರಿನ ಓರ್ವ ವಿವಾಹಿತ ಮುಸಲ್ಮಾನನನ್ನು ಉತ್ತರಪ್ರದೇಶದ ಫತೇಹಪುರ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.

ಪ್ರಸಾರ ಮಾಧ್ಯಮಗಳು ನೀಡಿರುವ ವರದಿಯನುಸಾರ, ಜುಲೈ 7 ರಂದು ಓರ್ವ ಹಿಂದೂ ಮಹಿಳೆಯು ತನ್ನ 16 ವರ್ಷದ ಮಗಳು ಕಾಣೆಯಾಗಿರುವ ಬಗ್ಗೆ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದರು. ದೂರಿನಲ್ಲಿ ಸೈಫ್ ಅಲಿಯ ಮೇಲೆ ಸಂಶಯ ವ್ಯಕ್ತಪಡಿಸಿ ಮಗಳಿಗೆ ಆಮಿಷವೊಡ್ಡಿರುವ ಬಗ್ಗೆ ಆರೋಪಿಸಿದ್ದಳು. ಪೊಲೀಸರು ಆರೋಪಿಯ ವಿರುದ್ಧ ಅಪಹರಣದ ದೂರನ್ನು ದಾಖಲಿಸಿಕೊಂಡಿದ್ದರು. ಜುಲೈ 11 ರಂದು ಹುಡುಗಿ ಪತ್ತೆಯಾಗಿದ್ದು, ಅವಳನ್ನು ಅವಳ ಕುಟುಂಬದವರ ವಶಕ್ಕೆ ಒಪ್ಪಿಸಲಾಗಿದೆ.

ಸಂತ್ರಸ್ತ ಹುಡುಗಿಯು ತನ್ನ ಹೇಳಿಕೆಯಲ್ಲಿ, ಸೈಫ್ ನನ್ನನ್ನು ಅಪಹರಿಸಿದ ಬಳಿಕ ಬಂಧನದಲ್ಲಿಟ್ಟು ಬಲಾತ್ಕಾರ ಮಾಡಿದನು. ಬಳಿಕ ಮೌಲವಿಯನ್ನು (ಇಸ್ಲಾಮಿನ ಧಾರ್ಮಿಕ ಮುಖಂಡ) ಕರೆಸಿ ಅವಳನ್ನು ಮತಾಂತರಗೊಳಿಸಿ, ಅವಳಿಗೆ ರುಬೀನಾ ಎಂದು ಹೆಸರಿಟ್ಟನು ಎಂದು ತಿಳಿಸಿದ್ದಾಳೆ. ಹುಡುಗಿಯು ಸೈಫ್ ಹಿಡಿತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿರುವುದಾಗಿಯೂ ತಿಳಿಸಿದ್ದಾಳೆ. ಸಂತ್ರಸ್ತ ಹುಡುಗಿಯ ದೂರಿನ ಆಧಾರದಲ್ಲಿ ಪೊಲೀಸರು ಸೈಫ್ ನ ವಿರುದ್ಧ `ಪೊಕ್ಸೊ’ ಕಾನೂನಿನ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ.

ಸಂಪಾದಕರ ನಿಲುವು

ಇಂತಹ ಪ್ರಕಾರಗಳನ್ನು ನಿಲ್ಲಿಸಲು ಲವ್ ಜಿಹಾಧಿಗಳನ್ನು ನಡುರಸ್ತೆಯಲ್ಲಿ ಗಲ್ಲು ಶಿಕ್ಷೆ ನೀಡಬೇಕು !