ಬಂಗಾಳದಲ್ಲಿ ನಡೆದ ಗ್ರಾಮಪಂಚಾಯತ, ಪಂಚಾಯತ ಸಮಿತಿ ಮತ್ತು ಜಿಲ್ಲಾ ಪರಿಷತ್ತಿನ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಹೆಚ್ಚಿನ ಸ್ಥಾನ !

ಕೊಲಕಾತಾ (ಬಂಗಾಳ) – ಬಂಗಾಳದಲ್ಲಿನ ಗ್ರಾಮ ಪಂಚಾಯತ, ಪಂಚಾಯತ ಸಮಿತಿ ಮತ್ತು ಜಿಲ್ಲಾ ಪರಿಷತ್ತಿನ ಚುನಾವಣೆಯ ಫಲಿತಾಂಶವು ಪ್ರಕಟವಾಗಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಿದೆ. ಭಾಜಪವು ಎರಡನೇ ಸ್ಥಾನದಲ್ಲಿದೆ; ಆದರೆ ಈ ಇಬ್ಬರಿಗೂ ದೊರೆತ ಸ್ಥಾನಗಳಲ್ಲಿ ಅಪಾರ ಅಂತರವಿದೆ. ಸಾಮ್ಯವಾದಿ ಮತ್ತು ಕಾಂಗ್ರೆಸ್ ಮೈತ್ರಿಕೂಟವು ಮೂರನೇ ಸ್ಥಾನದಲ್ಲಿದೆ. ಗ್ರಾಮ ಪಂಚಾಯಿತಿಯಲ್ಲಿ ತೃಣಮೂಲ ಕಾಂಗ್ರೆಸ್ 21 ಸಾವಿರದ 665 ಸ್ಥಾನಗಳನ್ನು ಗೆದ್ದಿದೆ. ಭಾಜಪವು 8 ಸಾವಿರದ 21 ಸ್ಥಾನ, ಮಾಕಪವು 2 ಸಾವಿರದ 472 ಮತ್ತು ಕಾಂಗ್ರೆಸ್ 2 ಸಾವಿರದ 94 ಸ್ಥಾನಗಳನ್ನು ಗೆದ್ದಿದೆ.

ಗ್ರಾಮ ಪಂಚಾಯಿತಿಯ 73 ಸಾವಿರದ 887 ಸ್ಥಾನಗಳ ಪೈಕಿ 64 ಸಾವಿರದ 874 ಸ್ಥಾನಗಳಲ್ಲಿ ಮತದಾನದ ಪ್ರಕ್ರಿಯೆ ನಡೆದಿದೆ. ಉಳಿದ 9 ಸಾವಿರ 12 ಸ್ಥಾನಗಳಲ್ಲಿ ಚುನಾವಣೆಯು ಅವಿರೋಧವಾಗಿ ನಡೆದಿದೆ. ಈ ಅವಿರೋಧ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅತ್ಯಂತ ಹೆಚ್ಚಿನ ಅಂದರೆ 8 ಸಾವಿರದ 874 ಸ್ಥಾನಗಳನ್ನು ಗಳಿಸಿದೆ. ಅಲ್ಲದೆ, ಜಿಲ್ಲಾ ಪರಿಷತ್ತಿನ 928 ಸ್ಥಾನಗಳಲ್ಲಿ ತೃಣಮೂಲವು 77 ಸ್ಥಾನಗಳನ್ನು ಗೆದ್ದಿದೆ. ಭಾಜಪವು 10 ಸ್ಥಾನಗಳಲ್ಲಿ ಮುಂಚೂಣಿಯಲ್ಲಿದೆ, ಮಾಕಪವು 5 ಸ್ಥಾನಗಳಲ್ಲಿ ಜಯಗಳಿಸಿದ್ದು, ಇನ್ನು ಕೆಲವು ಸ್ಥಾನಗಳ ಫಲಿತಾಂಶವು ಬರಬೇಕಾಗಿದೆ.