ಪೊಲೀಸ ಜಘೀನಾನನ್ನು ನ್ಯಾಯಾಲಯಕ್ಕೆ ಒಯ್ಯುತ್ತಿರುವಾಗ ದಾಳಿ !
ಜೈಪುರ (ರಾಜಸ್ಥಾನ) – ಬಂಧಿತ ಕುಖ್ಯಾತ ದರೋಡೆಕೋರ ಕುಲದೀಪ ಜಘೀನಾನನ್ನು ಕೆಲವು ಗೂಂಡಾಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಪೊಲೀಸರು ಜಘೀನಾನನ್ನು ಭರತಪುರದ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ಕೆಲವು ಗೂಂಡಾಗಳು ಅವನ ಮೇಲೆ ಹಲ್ಲೆ ನಡೆಸಿದರು. ಈ ಸಮಯದಲ್ಲಿ ಗೂಂಡಾಗಳು ಪೊಲೀಸರ ಕಣ್ಣಿಗೆ ಮೆಣಸಿನಪುಡಿ ಎರಚಿದರು ಮತ್ತು ಕುಲದೀಪ ಜಘೀನಾ ಮೇಲೆ ಗುಂಡು ಹಾರಿಸಿದರು. ಇದರಿಂದ ಜಘೀನಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕುಲದೀಪ ಜಘೀನಾನನ್ನು ಭಾಜಪದ ನಾಯಕ ಕೃಪಾಲ ಸಿಂಹ ಜಘೀನಾ ಇವರ ಹತ್ಯೆಯ ಪ್ರಕರಣದಲ್ಲಿ ಬಂಧಿಸಲಾಗಿತ್ತು.
ಭರತಪುರದ ಒಂದು ದೊಡ್ಡ ಜಮೀನಿನ ಕುರಿತು ವಿವಾದ ನಡೆದಿತ್ತು. ಕುಲದೀಪ ಜಘೀನಾನಿಗೆ ಈ ಭೂಮಿ ಬೇಕಾಗಿತ್ತು. ಈ ಭೂಮಿಯ ವ್ಯವಹಾರದ ಕುರಿತು ಕೃಪಾಲ ಸಿಂಹ ಜಘೀನಾ ಇವರು ತಡೆ ತಂದಿದ್ದರು. ಈ ಕೋಪದಿಂದಾಗಿ ಕುಲದೀಪ ಜಘೀನಾ ಮತ್ತು ಅವನ ಸಹಚರರು ಕೃಪಾಲ ಸಿಂಹನನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು.
#Rajasthan murder accused being taken to court by 6 cops shot dead in Bharatpurhttps://t.co/pSHsc5lsRT pic.twitter.com/HFV4eQFCHG
— Hindustan Times (@htTweets) July 12, 2023
ಸಂಪಾದಕರ ನಿಲುವುಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದರಿಂದ ಅಲ್ಲಿ ಇನ್ನೇನು ಅಪೇಕ್ಷಿಸಬಹುದು ? |