|
ಚೆನ್ನೈ (ತಮಿಳುನಾಡು) – ಸಾಮಾಜಿಕ ಜಾಲತಾಣದಲ್ಲಿ ಒಬ್ಬ ಪಾದ್ರಿಯು ತನಗಿಂತ ಚಿಕ್ಕವಳಾಗಿರುವ ಮತ್ತು ತುಂಡು ಬಟ್ಟೆ ಧರಿಸಿರುವ ಯುವತಿಯ ಜೊತೆಗೆ ನೃತ್ಯ ಮಾಡುತ್ತಿರುವ ವಿಡಿಯೊ ಪ್ರಸಾರ ಮಾಡಿದ್ದರಿಂದ ಕನಾಲ್ ಕನ್ನನ ಇವರನ್ನು ಬಂಧಿಸಲಾಗಿದೆ. ಆಡಳಿತರೂಢ ದ್ರಮುಕ (ದ್ರಾವಿಡ ಮುನ್ನೆತ್ರಿ ಕಳಘಂ – ದ್ರಾವಿಡ ಪ್ರಗತಿ ಸಂಘ) ಆಸ್ಟಿನ್ ಬೆನೆಟ್ ಈ ಮುಖಂಡನು ನೀಡಿರುವ ದೂರಿನ ನಂತರ ಕ್ರಮ ಕೈಗೊಳ್ಳಲಾಗಿದೆ. ಕನ್ನನ ಇವರು ದಕ್ಷಿಣ ಭಾರತದ ಚಲನಚಿತ್ರದಲ್ಲಿ ಸಾಹಸಿ ದೃಶ್ಯಗಳ ತಜ್ಞರಾಗಿದ್ದಾರೆ. ಈ ವಿಡಿಯೋ ಜೊತೆಗೆ ಕನ್ನನ ಇವರು, ‘ವಿದೇಶಿ ಧರ್ಮದ ಇದು ವಸ್ತುಸ್ಥಿತಿಯಾಗಿದೆ. ಮತಾಂತರವಾಗಿರುವ ಹಿಂದುಗಳು ಇದರ ಬಗ್ಗೆ ಯೋಚನೆ ಮಾಡಬೇಕು ಮತ್ತು ಅವರಿಗೆ ಪಶ್ಚಾತಾಪವಾಗಬೇಕು.’ ಎಂದು ಬರೆದಿದ್ದರು.
Tamil Nadu: Police arrest stunt master Kanal Kannan over social media post of a Christian priest dancing with a girlhttps://t.co/Djdsx4KSWV
— OpIndia.com (@OpIndia_com) July 11, 2023
೧. ಕನ್ನನ್ ಇವರ ಬಂಧನದ ವಿರುದ್ಧ ಹಿಂದೂ ಮುನ್ನಾನಿ ಸಂಘಟನೆಯು ವಿರೋಧ ವ್ಯಕ್ತಪಡಿಸಿದೆ. ಈ ಸಂಘಟನೆಯು ಪೊಲೀಸ ಠಾಣೆ ಎದುರು ಪ್ರತಿಭಟನೆ ನಡೆಸಿತು. ಈ ಸಂಘಟನೆಯ ರಾಜ್ಯ ವಕ್ತಾರ ಎಲಂಗೋವನ್ ಇವರು, ಯಾವ ವಿಡಿಯೋದಿಂದ ಕನ್ನನ್ ಇವರನ್ನು ಬಂಧಿಸಲಾಗಿದೆಯೋ ಆ ವಿಡಿಯೋ ಈ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಅವರ ಬಂಧನ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಆಗಿದೆ. ದ್ರಮುಕ ರಾಜಕಾರಣ ಮಾಡುತ್ತಿದೆ. ತನ್ನ ವಿಚಾರಧಾರೆಕ್ಕಿಂತ ಬೇರೆಯವರ ವಿಚಾರ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ ಕಿರುಕುಳ ನೀಡಲಾಗುತ್ತಿದೆ.
೨. ವಿಶೇಷ ಎಂದರೆ ಕನ್ನನ್ ಇವರು ಕಳೆದ ವರ್ಷ ಪೆರಿಯಾರ್ ಇವರ ವಿರುದ್ಧ ಹೇಳಿಕೆ ನೀಡಿದ್ದರಿಂದಲೂ ಅವರನ್ನು ಬಂಧಿಸಲಾಗಿತ್ತು. ತದ ನಂತರ ಮದ್ರಾಸ್ ಉಚ್ಚ ನ್ಯಾಯಾಲಯವು ಕನ್ನನ್ ಇವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಸಂಪಾದಕೀಯ ನಿಲುವು
|