ನವದೆಹಲಿ – ಸಾಧು-ಸಂತರು ರಾಜಕಾರಣವನ್ನು ನೋಡಲೂ ಬಾರದು. ಸಾಧು-ಸಂತರು ರಾಜಕಾರಣದಿಂದ ಯಾವಾಗಲೂ ದೂರವಿರಬೇಕು. ರಾಜಕಾರಣಕ್ಕೆ ಬರುವುದರಿಂದ ಇತಿಮಿತಿಗಳು ಬರುತ್ತವೆ. ಸಾಧುಗಳಿಗೆ ಅವರ ಪ್ರವಾಸವನ್ನು ಯಾವಾಗಲೂ ನಿರಂತರವಾಗಿಟ್ಟುಕೊಳ್ಳುವ ಆವಶ್ಯಕತೆಯಿದೆ, ಎಂದು ಬಾಗೇಶ್ವರ ಧಾಮ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು `ಝೀ ನ್ಯೂಸ್’ ಈ ವಾರ್ತಾವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. `ನೀವು ರಾಜಕಾರಣಕ್ಕೆ ಬರುತ್ತೀರಾ?’ ಎಂದು ಅವರನ್ನು ಪ್ರಶ್ನಿಸಲಾಗಿತ್ತು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಏಕರೂಪ ನಾಗರಿಕ ಕಾನೂನು ಬೇಕೇ ಬೇಕು !
ಏಕರೂಪ ನಾಗರಿಕ ಕಾನೂನಿನ ವಿಷಯದಲ್ಲಿ ಕೇಳಿದಾಗ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು, ನಾನು ಈ ಕಾನೂನನ್ನು ಬೆಂಬಲಿಸುತ್ತೇನೆ’. ದೇಶಕ್ಕೆ ಏಕರೂಪ ನಾಗರಿಕ ಕಾನೂನು ಅತ್ಯಂತ ಆವಶ್ಯಕವಾಗಿದೆ. ಒಂದು ದೇಶದಲ್ಲಿ 2 ಕಾನೂನು ಹೇಗೆ ಇರಲು ಸಾಧ್ಯ ? ಒಬ್ಬ ತಂದೆಗೆ 2 ಮಕ್ಕಳು ಇದ್ದರೆ, ಅವರಿಗೆ ಬೇರೆ ಬೇರೆ ಸೌಲಭ್ಯಗಳನ್ನು ಹೇಗೆ ನೀಡಲು ಸಾಧ್ಯ? ಎಂದು ಮರುಪ್ರಶ್ನಿಸಿದರು. ಸಮಾನ ನಾಗರಿಕ ಕಾಯಿದೆಯನ್ವಯ ಯಾವುದೇ ಧರ್ಮದ ಪರಂಪರೆಯ ಮೇಲೆ ಆಘಾತ ಮಾಡಲಾಗುವುದಿಲ್ಲ.
100 ಕೋಟಿ ಹಿಂದೂಗಳಲ್ಲಿ ಮೂರನೇ ಎರಡರಷ್ಟು ಹಿಂದೂಗಳು ಎಚ್ಚೆತ್ತುಕೊಂಡರೂ, ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದು !
ಹಿಂದೂ ರಾಷ್ಟ್ರದ ವಿಷಯದಲ್ಲಿ ಧೀರೇಂದ್ರಕೃಷ್ಣ ಶಾಸ್ತ್ರಿಯವರು, ಹಿಂದೂಗಳು ಕುಂಭಕರ್ಣ ನಿದ್ದೆಯಲ್ಲಿದ್ದಾರೆ. ಅವರನ್ನು ಎಬ್ಬಿಸಬೇಕಾಗಿದೆ. ನಾನು ಯಾರನ್ನೂ ಪ್ರಚೋದಿಸುವುದಿಲ್ಲ. ನಾನು ಹಿಂದೂಗಳಿಗೆ ಅವರ ನೈಜ ಗುರುತನ್ನು ತಿಳಿದುಕೊಳ್ಳಲು ಮತ್ತು ಸನಾತನ ಪರಂಪರೆ ಮತ್ತು ಸಂಸ್ಕೃತಿಯ ವಿಷಯದಲ್ಲಿ ಜಾಗರೂಕರಾಗಿರುವಂತೆ ಹೇಳುತ್ತಿದ್ದೇನೆ. ದೇಶದ 100 ಕೋಟಿ ಹಿಂದೂಗಳಲ್ಲಿ ಮೂರನೇ ಎರಡರಷ್ಟು ಹಿಂದೂಗಳು ಜಾಗೃತರಾದರೂ ಭಾರತವನ್ನು ಹಿಂದೂರಾಷ್ಟ್ರವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇಷ್ಟು ಹಿಂದೂಗಳು ಎಚ್ಚೆತ್ತುಕೊಂಡು ಹಿಂದೂರಾಷ್ಟ್ರಕ್ಕಾಗಿ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದರು.