ಇಂದೂರ (ಮಧ್ಯಪ್ರದೇಶ) ಇಲ್ಲಿ ಹಣೆಗೆ ತಿಲಕವನ್ನು ಹಚ್ಚಿಕೊಂಡಿದ್ದ ವಿದ್ಯಾರ್ಥಿಗಳಿಗೆ ಶಿಕ್ಷಕಿಯಿಂದ ಥಳಿತ

  • ಪೋಷಕರಿಂದ ಶಾಲೆಯ ಮುಖ್ಯಾಧ್ಯಾಪಕರಲ್ಲಿ ದೂರು

  • ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲಿಸುತ್ತೇವೆ ! – ಶಾಲೆಯ ಹೇಳಿಕೆ

ಇಂದೂರ (ಮಧ್ಯಪ್ರದೇಶ) – ಇಲ್ಲಿಯ ಧಾರ ರಸ್ತೆಯಲ್ಲಿರುವ ಬಾಲ ವಿಜ್ಞಾನ ಶಿಶುವಿಹಾರ ಉಚ್ಚ ಮಾಧ್ಯಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಹಣೆಗೆ ತಿಲಕವನ್ನು ಹಚ್ಚಿದ್ದರಿಂದ ಶಿಕ್ಷಕಿಯು ಕೆಲವು ವಿದ್ಯಾರ್ಥಿಗಳಿಗೆ ಥಳಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಶಾಲೆಯ ಮುಖ್ಯಾಧ್ಯಾಪಕರಲ್ಲಿ ದೂರು ಸಲ್ಲಿಸಿದ್ದಾರೆ.

ಮುಖ್ಯಾಧ್ಯಾಪಕರು, ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲಿಸಲಾಗುವುದು ಎಂದು ಹೇಳಿದ್ದಾರೆ.

ಶಿಕ್ಷಕಿ ಪದ್ಮಾ ಸಿಸೊಡಿಯಾ ಇವರು ಶಾಲೆಯಲ್ಲಿ ತಿಲಕ ಹಚ್ಚಿಕೊಂಡು ಬಂದಿದ್ದ 6-7 ವಿದ್ಯಾರ್ಥಿಗಳಿಗೆ ಥಳಿಸಿ ಶಾಲೆಯಿಂದ ಹೊರಗೆ ಕಳಿಸಿದ್ದರು. ಪೋಷಕರಿಗೆ ಈ ಮಾಹಿತಿ ತಿಳಿದಾಗ ಅವರು ಶಾಲೆಗೆ ಬಂದರು. ಮುಖ್ಯಾಧ್ಯಾಪಕ ಓಂ ಪ್ರಕಾಶ ಸಿಂಹ ಮತ್ತು ಶಿಕ್ಷಕಿ ಸಿಸೋಡಿಯಾ ಇವರು ಪೋಷಕರ ಮಾತನ್ನು ಕೇಳಿಸಿಕೊಳ್ಳಲು ಸಿದ್ಧರಿರಲಿಲ್ಲ. ಅವರ ಹೇಳಿಕೆಯಂತೆ, `ತಿಲಕ ಹಚ್ಚಿಕೊಳ್ಳಲು ಯಾವುದೇ ನಿರ್ಬಂಧವಿಲ್ಲ; ಆದರೆ ನಾವು ಶಾಲೆಯಲ್ಲಿ ಧರ್ಮವನ್ನು ಪ್ರೋತ್ಸಾಹಿಸುವುದಿಲ್ಲ.’ (ಧಾರ್ಮಿಕತೆ ಮತ್ತು ಮತಾಂಧತೆಯ ನಡುವಿನ ವ್ಯತ್ಯಾಸವನ್ನು ತಿಳಿಯದ ಮುಖ್ಯಾಧ್ಯಾಪಕ ಮತ್ತು ಶಿಕ್ಷಕಿ ! ತಿಲಕ ಹಚ್ಚುವುದರಿಂದ ಆಗುವ ಆಧ್ಯಾತ್ಮಿಕ ಲಾಭ ಈ ಇಬ್ಬರಿಗೆ ತಿಳಿದಿದ್ದರೆ, ಅವರು ಈ ರೀತಿ ನಡೆದುಕೊಳ್ಳುತ್ತಿರಲಿಲ್ಲ ! – ಸಂಪಾದಕರು) ಪೋಷಕರು, ಮಕ್ಕಳು ಶಾಲೆಗೆ ಹೋಗುವ ಮೊದಲು ದೇವಸ್ಥಾನಕ್ಕೆ ಹೋಗುತ್ತಾರೆ ಮತ್ತು ಅಲ್ಲಿ ತಿಲಕ ಹಚ್ಚುತ್ತಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಶಾಲೆಯಲ್ಲಿ ವಿದ್ಯಾರ್ಥಿನಿ ಬುರ್ಖಾ ಹಾಕಿ ಬಂದರೆ, ಅವರಿಗೆ ಥಳಿಸುವ ಧೈರ್ಯವನ್ನು ಶಿಕ್ಷಕಿ ತೋರಿಸುತ್ತಿದ್ದರೆ ? ಥಳಿಸಿದ್ದರೆ, ಇಷ್ಟೊತ್ತಿಗೆ ಅವರ ಶಿರಚ್ಛೇದಗೊಳಿಸುವುದಾಗಿ ಬೆದರಿಕೆಯ ಕರೆ ಬಂದಿರುತ್ತಿತ್ತು !