ನವದೆಹಲಿ – ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಗಿಲ್ ಗಿಟ್- ಬಾಲ್ಟಿಸ್ತಾನ ಪ್ರದೇಶವನ್ನು ಟ್ವಿಟರ್ ನಲ್ಲಿ ಭಾರತದಲ್ಲಿ ತೋರಿಸಲಾಗಿದೆ. ಇಲ್ಲಿಯ ನಾಗರಿಕರು ಪಾಕಿಸ್ತಾನ ಸರಕಾರದ ಅಧಿಕೃತ ಟ್ವಿಟರ್ ಖಾತೆಯನ್ನು ವೀಕ್ಷಿಸಲು ಪ್ರಯತ್ನಿಸಿದಾಗ, ಅದನ್ನು ನಿರ್ಬಂಧಿಸಲಾಗಿರುವುದು ಅವರ ಗಮನಕ್ಕೆ ಬಂದಿತು. ಗಿಲಗಿಟ್-ಬಾಲ್ಟಿಸ್ತಾನವನ್ನು ಭಾರತದ ಕಾಶ್ಮೀರದಲ್ಲಿ ತೋರಿಸಿರುವುದನ್ನು ಅವರು ಗಮನಿಸಿದರು; ಕಾರಣ ಯಾವ ಸಮಯದಲ್ಲಿ ಈ ನಾಗರಿಕರು ಟ್ವೀಟ ಮಾಡಿದರೋ, ಆಗ ಅವರಿಗೆ ಅವರು ಭಾರತೀಯರು ಎಂದು ತೋರಿಸಲಾಯಿತು. ಅವರ ಲೊಕೇಶನ್ ಕಾಶ್ಮೀರದಲ್ಲಿ ತೋರಿಸಲಾಗಿದೆ.
1. ಈ ನಾಗರಿಕರು ಪಾಕಿಸ್ತಾನ ಸರಕಾರದ ಖಾತೆಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಿದಾಗ, `ಈ ಖಾತೆಗಳನ್ನು ಭಾರತ ಬ್ಲಾಕ್ ಮಾಡಿದೆ’, ಎಂದ ಸಂದೇಶ ಬರುತ್ತಿತ್ತು. ಮಾರ್ಚ 2023 ರಿಂದ ಭಾರತವು ಈ ಖಾತೆಗಳನ್ನು ನಿಷೇಧಿಸಿದೆ. ಈ ನಾಗರಿಕರಿಗೆ ಭಾರತದ ಕಾಶ್ಮೀರದಲ್ಲಿ ತೋರಿಸಿರುವುದರಿಂದ ಅವರಿಗೆ ಮೇಲಿನ ಸಂದೇಶ ಬರುತ್ತಿತ್ತು.
2. ಈ ನಾಗರಿಕರು ಟ್ವೀಟ ಮಾಡುವಾಗ ಅವರು ಎಲ್ಲಿದ್ದಾರೆ? ಎಂದು ಹುಡುಕಲು ಪ್ರಯತ್ನಿಸಿದಾಗ ಅವರಿಗೆ `ಜಮ್ಮೂ-ಕಾಶ್ಮೀರ’ ಎಂದು ಕಂಡು ಬಂದಿತ್ತು. ಈ ಪ್ರಕರಣದ ವಿಷಯದಲ್ಲಿ ಪಾಕಿಸ್ತಾನದಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
Twitter shows Gilgit Baltistan as a part of Union Territory of Jammu and Kashmir, blocks Pakistan govt handle complying with Indian lawhttps://t.co/XmBzeJf1rG
— OpIndia.com (@OpIndia_com) July 10, 2023