ಬುಲಂದಶಹರ (ಉತ್ತರಪ್ರದೇಶ) ಇಲ್ಲಿ ಕೂಲಿ ಕಾರ್ಮಿಕರ ಹುಡುಗಿಯರ ವಿವಾಹದ ಅನುದಾನ ಯೋಜನೆಯಲ್ಲಿ ಲಕ್ಷಾಂತರ ರೂಪಾಯಿಗಳ ಹಗರಣ !

  • ಸಮಾಜದ ನೈತಿಕತೆ ಕುಸಿದಿರುವ ಉದಾಹರಣೆ !

  • ೫೫೫ ದಂಪತಿಗಳಲ್ಲಿ ೨೦೦ ಜನರು ನಕಲಿ !

  • ಪ್ರತಿಯೊಂದು ದಂಪತಿಗಳಿಗೆ ೭೫ ಸಾವಿರ ರೂಪಾಯಿ ಸರಕಾರಿ ಅನುದಾನ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ರಾಜ್ಯ ಸರಕಾರದಿಂದ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ದೊಡ್ಡ ಹಗರಣದ ವಾರ್ತೆ ಬಹಿರಂಗವಾಗಿದೆ. ಬುಲಂದಶಹರದಲ್ಲಿನ ಕಾರ್ಮಿಕ ಇಲಾಖೆಯ ಕೂಲಿ ಕಾರ್ಮಿಕರ ಹುಡುಗಿಯರ ವಿವಾಹಕ್ಕೆ ಅನುದಾನ ಯೋಜನೆಯ ಅಡಿಯಲ್ಲಿ ಪ್ರತಿಯೊಂದು ವಿವಾಹಕ್ಕಾಗಿ ಅನುದಾನ ಸ್ವರೂಪದಲ್ಲಿ ೭೫ ಸಾವಿರ ರೂಪಾಯಿ ನೀಡಲಾಯಿತು. ಒಟ್ಟು ೫೫೫ ದಂಪತಿಗಳ ವಿವಾಹ ನಡೆಯಿತು. ಅದರಲ್ಲಿ ಕನಿಷ್ಠ ೨೦೦ ಜನರು ಸಂಪೂರ್ಣವಾಗಿ ಅಯೋಗ್ಯರಾಗಿದ್ದರು.

೧. ಅನೇಕ ಪ್ರಕರಣದಲ್ಲಿ, ವಿವಾಹಕ್ಕಾಗಿ ನೋಂದಣಿ ಮಾಡಿರುವ ವರನ ಮಾಹಿತಿ ಸುಳ್ಳಾಗಿದ್ದು ಅದರಲ್ಲಿ ಗ್ರಾಮದಲ್ಲಿ ಆ ಹೆಸರಿನ ಯಾವ ವ್ಯಕ್ತಿಯೂ ವಾಸಿಸುತ್ತಿಲ್ಲ, ಆದರೂ ಕೂಡ ಅದನ್ನು ಖಚಿತಪಡಿಸಿಕೊಳ್ಳದೆ ನೋಂದಣಿ ಮಾಡುವವರ ಬ್ಯಾಂಕ್ ಖಾತೆಗೆ ೭೫ ಸಾವಿರ ರೂಪಾಯಿ ಜಮಾ ಮಾಡಲಾಗಿದೆ. ಹಾಗೂ ಕೆಲವು ಪ್ರಕರಣದಲ್ಲಿ ಜನರು ಸ್ವಂತ ಸಂಬಂಧಿಕರ ವಿವಾಹ ಮಾಡಿಕೊಳ್ಳುವ ನೋಂದಣಿ ಮಾಡಿಸಿ ಸರಕಾರಿ ಅನುದಾನ ಲೂಟಿ ಮಾಡಿದ್ದಾರೆ.

೨. ಈ ರೀತಿಯ ನಕಲಿ ವರ ಸಿದ್ಧಪಡಿಸಿಕೊಂಡು ಸುಮಾರು ೧೨ ಲಕ್ಷ ರೂಪಾಯಿ ಲೂಟಿ ಮಾಡಲಾಗಿದೆ. ಇದರಲ್ಲಿ ಇಲ್ಲಿಯವರೆಗೆ ಒಟ್ಟು ೧೬ ದಂಪತಿಗಳು ಅಯೋಗ್ಯವೆಂದು ಖಚಿತಪಡಿಸಲಾಗಿದೆ. ಕೆಲವು ಪ್ರಕರಣದಲ್ಲಿ ಕೆಲವು ವರ ವಿವಾಹಿತ ಇರುವುದು ಕೂಡ ಬಹಿರಂಗವಾಗಿದೆ.

ಸಂಪಾದಕರ ನಿಲುವು

ಸರಕಾರಿ ಅನುದಾನ ನೀಡುವಾಗ ಸಂಬಂಧಿತ ಫಲಾನುಭವಿಗಳ ಯೋಗ್ಯತೆ ಪರಿಶೀಲಿಸಿ ನೀಡಬೇಕು. ಇಂತಹ ಸಾಮಾನ್ಯ ನಿಯಮ ಕೂಡ ಪಾಲಿಸದಿರುವ ಸಂಬಂಧಿತ ಭ್ರಷ್ಟ ಸರಕಾರಿ ಅಧಿಕಾರಿಗಳ ವಿಚಾರಣೆ ನಡೆಸಿ ಅವರಿಂದ ಈ ಹಣ ವಸೂಲಿ ಮಾಡಬೇಕು !