ವಿಐಪಿ ದರ್ಶನಕ್ಕೂ 200 ರೂಪಾಯಿಗಳನ್ನು ತೆರಬೇಕಾಗುತ್ತದೆ !
ತುಳಜಾಪುರ (ಧಾರಾಶಿವ ಜಿಲ್ಲೆ) – ಶ್ರೀ ತುಳಜಾಭವಾನಿಮಾತೆಯ ಅಭಿಷೇಕ ಪೂಜೆಯ ಶುಲ್ಕವನ್ನು 10 ಪಟ್ಟು ಹೆಚ್ಚಿಸಲಾಗಿದೆ. ಈ ಹಿಂದೆ ಅಭಿಷೇಕ ಪೂಜೆಗಾಗಿ 50 ರೂಪಾಯಿ ಶುಲ್ಕವನ್ನು ತುಂಬಿಸಬೇಕಾಗುತ್ತಿತ್ತು. ಈಗ 500 ರೂಪಾಯಿಗೆ ಏರಿಕೆ ಮಾಡಲಾಗಿದ್ದು, ಹಾಗೆಯೇ ಟ್ರಸ್ಟ ಕೋಟಾದ ವಿಐಪಿ ದರ್ಶನಕ್ಕೆ ತಲಾ 200 ರೂಪಾಯಿ ಶುಲ್ಕವನ್ನು ವಿಧಿಸಲು ನಿರ್ಣಯಿಸಲಾಗಿದೆ. ಈ ಹಿಂದೆ ಟ್ರಸ್ಟ ಕೋಟಾದಡಿಯಲ್ಲಿ ಗಣ್ಯವ್ಯಕ್ತಿಗಳಿಗೆ ಉಚಿತ ಪ್ರವೇಶ ನೀಡಲಾಗುತ್ತಿತ್ತು. ಈ ನಿರ್ಣಯವನ್ನು ದೇವಸ್ಥಾನ ಸಂಸ್ಥಾನದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಡಾ. ಸಚಿನ್ ಅಂಬೋಸೆ ಇವರು ಜುಲೈ 10, 2023 ರಿಂದ ಜಾರಿಗೆ ತರುವಂತೆ ದೇವಸ್ಥಾನ ಸಂಸ್ಥೆಯ ವ್ಯವಸ್ಥಾಪಕರು, ತಹಶೀಲ್ದಾರ್ ಇವರಿಗೆ ಆದೇಶಿಸಿದ್ದಾರೆ.
ಈ ನಿರ್ಣಯದಿಂದ ಸಂಸ್ಥಾನವು ಕೂಡಲೇ ದೇವಸ್ಥಾನದ ಜಾಲತಾಣದಲ್ಲಿ ಮುಂದಿನ ಅಭಿಷೇಕ ಪೂಜೆಯ `ಆನ್ ಲೈನ್ ಬುಕಿಂಗ್’ ಸ್ಥಗಿತಗೊಳಿಸಿದೆ. ಈ ನಿರ್ಣಯದಿಂದ ಅರ್ಚಕರ ಮಂಡಳಿಯವರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಅವರು ಈ ನಿರ್ಣಯವನ್ನು ಹಿಂಪಡೆಯುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅರ್ಚಕ ಮಂಡಳಿಯ ಉಪಾಧ್ಯಕ್ಷ ವಿಪಿನ ಶಿಂದೆ, ಮಾಜಿ ನಗರಾಧ್ಯಕ್ಷ ಸಚಿನ ರೋಚಕರಿ, ಧನಂಜಯ ಲೊಂಢೆ, ಅವಿನಾಶ ಗಂಗಣೆ, ಕಿಶೋರ ಗಂಗಣೆ, ಕುಮಾರ ಇಂಗಳೆ ಮುಂತಾದವರು ಉಪಸ್ಥಿತರಿದ್ದರು. ದೇವಸ್ಥಾನ ಸಂಸ್ಥಾನದ ಟ್ರಸ್ಟಿಗಳ ಸಭೆ ಮೇ 19, 2023 ರಂದು ನಡೆದಿತ್ತು. ಈ ಸಭೆಯ ಠರಾವು ಸಂ. 7 ರ ಅನ್ವಯ ಅಭಿಷೇಕ ಪೂಜೆಯ ಶುಲ್ಕದಲ್ಲಿ ಹತ್ತುಪಟ್ಟು ಹೆಚ್ಚಳ ಮಾಡಲು ನಿರ್ಣಯಿಸಲಾಗಿದೆ. ದರ ಹೆಚ್ಚಳದ ನಿರ್ಣಯವನ್ನು ಒಂದೂವರೆ ತಿಂಗಳ ಹಿಂದೆಯೇ ತೆಗೆದುಕೊಳ್ಳಲಾಗಿತ್ತು; ಆದರೆ ದೇವಸ್ಥಾನದ ಪೂಜಾರಿ ಮತ್ತು ಪೂಜಾರಿಗಳ ಪ್ರತಿನಿಧಿಗಳಿಗೆ ಈ ವಿಷಯದಲ್ಲಿ ಯಾವುದೇ ಮಾಹಿತಿಯಿರಲಿಲ್ಲ.
आई तुळजाभवानीच्या अभिषेकासाठी आता 50 रुपयांऐवजी 500 रुपये शुल्क, तुळजाभवानी मंदिर समितीचा निर्णयhttps://t.co/lXUzGJVeg7 #tuljapur
— ABP माझा (@abpmajhatv) July 8, 2023
ಸಂಪಾದಕರ ನಿಲುವುಇದು ದೇವಸ್ಥಾನದ ಸರಕಾರೀಕರಣದ ದುಷ್ಪರಿಣಾಮವಾಗಿದೆ. ದೇವಸ್ಥಾನಕ್ಕೆ ಸಂಬಂಧಿಸಿದಂತೆ, ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ದೇವಸ್ಥಾನವು ಭಕ್ತರ ವಶದಲ್ಲಿರಬೇಕು ! |