|
ಪನವೆಲ , ಜುಲೈ ೮ (ವಾರ್ತೆ) – ಪನವೆಲ ರೈಲು ನಿಲ್ದಾಣದ ಬಳಿ ಪ್ರಯಾಣಿಕರ ಹೋಗು ಬರುವುವ ಮಾರ್ಗದಲ್ಲಿ ೫ ಮುಸಲ್ಮಾನರು ನಮಾಜ ಮಾಡಿದರು. ಈ ಸಂದರ್ಭದಲ್ಲಿನ ಒಂದು ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ಈ ಪ್ರಕರಣದಲ್ಲಿ ಪ್ರಯಾಣಿಕರು ಅಸಮಾಧಾನಗೊಂಡಿದ್ದಾರೆ. ಮಹಾರಾಷ್ಟ್ರ. ಮಹಾರಾಷ್ಟ್ರ ನವನಿರ್ಮಾಣ ಸೇನೆಯ ವಕ್ತಾರರು ಹಾಗೂ ಪನವೇಲ ಮಹಾನಗರದ ನಗರಾಧ್ಯಕ್ಷ ಯೋಗೇಶ್ ಚೀಲೆ ಇವರು ಇದನ್ನು ಗಂಭೀರವಾಗಿದೆ ಪರಿಗಣಿಸಿದ್ದಾರೆ. ಚೀಲೆ. ಇವರು ಜುಲೈ ೭ ರಂದು ಮಧ್ಯಾಹ್ನ ಒಂದು ವಿಡಿಯೋ ಪ್ರಸಾರ ಮಾಡಿ ಅದರಲ್ಲಿ ಅವರು, ‘ಈ ದೇಶದಲ್ಲಿ ಸರ್ವಧರ್ಮ ಸಮಭಾವವಿದೆ ಇದನ್ನು ಸಿದ್ಧಗೊಳಿಸುವುದಕ್ಕಾಗಿ ಪನವೇಲ ರೈಲು ನಿಲ್ದಾಣಕ್ಕೆ ಬನ್ನಿರಿ. ರೈಲು ನಿಲ್ದಾಣದಲ್ಲಿ ನಮಾಜ ನಡೆಯುತ್ತದೆ, ಹಾಗಾದರೆ ಮಹಾಆರತಿ ಕೂಡ ಖಂಡಿತವಾಗಿ ನಡೆಯುವುದು. ಎಲ್ಲ ಭಕ್ತರು ಪನವೇಲ ರೈಲು ನಿಲ್ದಾಣದಲ್ಲಿ ಮಹಾಆರತಿಗೆ ಉಪಸ್ಥಿತ ಇರೋಣ.” ಎಂದು ಹೇಳಿದರು.
ಇದರ ನಂತರ ಪೊಲೀಸ್ ಮತ್ತು ರೈಲು ಅಧಿಕಾರಿ ಇವರು ಮಹಾರಾಷ್ಟ್ರ ನವನಿರ್ಮಾಣ ಸೇನೆ ಹಾಗೂ ಇತರ ಹಿಂದುತ್ವನಿಷ್ಠ ಸಂಘಟನೆಯ ಪದಾಧಿಕಾರಿಗಳ ಸಹಿತ ಸಭೆ ನಡೆಸಿದರು. ಇದರಲ್ಲಿ ಸರಕಾರವು, ‘ಈ ರೀತಿಯ ಘಟನೆ ನಡೆಯದಿರುವ ಆಶ್ವಾಸನೆ ನೀಡಿದರು’. ‘ನಿಲ್ದಾಣದಲ್ಲಿ ಹೆಚ್ಚುವರಿ ಪೊಲೀಸ ಬಂದೋಬಸ್ತ್ ಮಾಡಲಾಗಿದೆ’. ಎಂದು ರೈಲು ಅಧಿಕಾರಿಗಳು ಸ್ಪಷ್ಟಪಡಿಸಿದರು. ಅದರ ನಂತರ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರಿಂದ ಮಹಾಆರತಿಯ ಆಯೋಜನೆ ರದ್ದು ಪಡಿಸಲಾಯಿತು. ಇನ್ನು ಮುಂದೆ ಈ ರೀತಿ ಯಾವುದೇ ಘಟನೆ ಸಹಿಸಲಾಗುವುದಿಲ್ಲ ಮತ್ತು ಹಾಗೆಯೇ ಪ್ರತಿಕ್ರಿಯೆ ವ್ಯಕ್ತಪಡಿಸಲಾಗುವುದು’, ಎಂದು ಮಹಾರಾಷ್ಟ್ರ. ನವನಿರ್ಮಾಣ ಸೇನೆಯಿಂದ ಹೇಳಲಾಗಿದೆ.
Maharashtra: Viral video shows Muslims offering namaz at Panvel railway station, MNS demands permission to perform Maha Aarti but deniedhttps://t.co/vcVFzlGwaV
— OpIndia.com (@OpIndia_com) July 8, 2023
ಸಂಪಾದಕರ ನಿಲುವು
|