- 2 ಪೊಲೀಸ್ ಅಧಿಕಾರಿ ಮತ್ತು ಒಬ್ಬ ಹವಾಲದಾರ ಅಮಾನತು
ನರಸಿಂಗಪುರ (ಮಧ್ಯಪ್ರದೇಶ) – ಇಲ್ಲಿಯ ಪೊಲೀಸರು ಓರ್ವ ಮಹಿಳೆಗೆ ವಾಹನದ ಮುಂದಿನ ಬೋನಟ್ ಮೂಲಕ ಅರ್ಧ ಕಿಲೋಮೀಟರ್ ಎಳೆದುಕೊಂಡು ಹೋದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಅದರ ನಂತರ ಪೊಲೀಸ ಅಧಿಕಾರಿಗಳು ಪೊಲೀಸ ಸಬ್ ಇನ್ಸ್ಪೆಕ್ಟರ್ ಅನಿಲ ಅಜಮೇರಿಯಾ, ಸಬ್ ಇನ್ಸ್ಪೆಕ್ಟರ್ ಸಂಜಯ ಸೂರ್ಯವಂಶಿ ಮತ್ತು ಹವಾಲದಾರ ನೀರಜ ದೆಹರಿಯಾ ಇವರನ್ನು ತಕ್ಷಣ ಅಮಾನತುಗೊಳಿಸಿ ಅವರ ವಿಚಾರಣೆಯ ಆದೇಶ ನೀಡಿದೆ.
Narsinghpur News : पुलिस के चलते वाहन पर लटकी महिला, दो एसआइ, एक आरक्षक निलंबित#NarsinghpurNews #MadhyapradeshNews #Campaignagainstdrugabusein #Gotegaon #Nayabazarhttps://t.co/NhoHoG6idH pic.twitter.com/JCMc2p1z2b
— NaiDunia (@Nai_Dunia) July 4, 2023
ಪೊಲೀಸರು ಮಾದಕ ಪದಾರ್ಥಗಳ ಸಾಗಾಣಿಕೆ ಪ್ರಕರಣದಲ್ಲಿನ ಒಬ್ಬ ಆರೋಪಿಯನ್ನು ಕರೆದುಕೊಂಡು ಹೋಗುವಾಗ ಆ ಆರೋಪಿಯ ತಾಯಿ ಪೊಲೀಸರಿಗೆ ವಾಹನ ನಿಲ್ಲಿಸುವುದಕ್ಕಾಗಿ ಮುಂದೆ ಬಂದಿದ್ದಳು; ಆದರೆ ಪೊಲೀಸರು ಆಕೆಗೆ ದುರ್ಲಕ್ಷಿಸಿದರು ಆಕೆ ವಾಹನದ ಮುಂದಿನ ಬೋನಟ್ ಮೇಲೆ ಏರಿದಾಗ ಪೊಲೀಸರು ಅದೇ ಸ್ಥಿತಿಯಲ್ಲಿ ವಾಹನ ನಡೆಸುತ್ತಾ ಆಕೆಯನ್ನು ಪೊಲೀಸ ಠಾಣೆಗೆ ಕರೆತಂದರು. ಆ ಸಮಯದಲ್ಲಿ ಅಪಘಾತವಾಗಿ ಜೀವಹಾನಿ ಆಗುವ ಸಾಧ್ಯತೆ ಇತ್ತು.
ಸಂಪಾದಕೀಯ ನಿಲುವುಇಂಥವರಿಗೆ ಕಠಿಣ ಶಿಕ್ಷೆ ನೀಡಿ ! |