`ಭಾರತದಲ್ಲಿ ಶರೀಯತ್ ನಿಯಮ ಜಾರಿಯಾಗಲಿದೆಯಂತೆ !’ – `ತಬ್ಲಿಗಿ ಜಮಾತ್’ನ ಮೌಲಾನಾ ತೌಕೀರ್ ಅಹ್ಮದ್

  • ವಿಷಕಕ್ಕಿದ `ತಬ್ಲಿಗಿ ಜಮಾತ್’ನ ಮೌಲಾನಾ ತೌಕೀರ್ ಅಹ್ಮದ್ !

  • ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಇಸ್ಲಾಂ ಸ್ವೀಕರಿಸುವಂತೆ ಕರೆ !

(ಮೌಲಾನಾ ಎಂದರೆ ಇಸ್ಲಾಮಿಕ್ ಅಧ್ಯಯನಕಾರ)

ನವದೆಹಲಿ – ಭಾರತದಲ್ಲಿ ಶರಿಯತ್ ಆಡಳಿತ ಜಾರಿಗೊಳ್ಳಲಿದೆಯೆಂದು ತಬ್ಲಿಗಿ ಜಮಾತ್ ನ ಮೌಲಾನಾ ತೌಕೀರ ಅಹ್ಮದ್ ಹೇಳಿಕೆ ನೀಡಿದ್ದಾರೆ. ವಾರ್ತಾ ವಾಹನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಂದರ್ಶನದ ವಿಡಿಯೋ ಪ್ರಸಾರವಾಗಿದೆ. ಆ ಸಮಯದಲ್ಲಿ ಮೌಲಾನಾ ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಮುಸ್ಲಿಂ ಧರ್ಮವನ್ನು ಸ್ವೀಕರಿಸುವಂತೆ ಕರೆ ನೀಡುತ್ತಾ, `ಇವರಿಬ್ಬರೂ ಮುಸಲ್ಮಾನರಾದರೆ, ಬಹಳ ಸುಧಾರಣೆಯಾಗುವುದು. ಅದರೊಂದಿಗೆ ಅಫಘಾನಿಸ್ತಾನದಂತೆ ಭಾರತದಲ್ಲಿಯೂ ಶರಿಯತ ಆಡಳಿತವನ್ನು ಸ್ಥಾಪಿಸಲಾಗುವುದು’ ಎಂದು ಹೇಳಿಕೆ ನೀಡಿದ್ದಾರೆ.

ಮೌಲಾನಾ ತೌಕೀರ ಅಹ್ಮದ್ ತಮ್ಮ ಮಾತನ್ನು ಮುಂದುವರಿಸಿ,

1. ಹಿಂದೂಗಳ ಮುಖ್ಯ ವ್ಯಕ್ತಿಯಾಗಿರುವ ಯೋಗಿ ಆದಿತ್ಯನಾಥ ಮತ್ತು ನರೇಂದ್ರ ಮೋದಿಯವರನ್ನು ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಒತ್ತಾಯಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ.

2. ಮೂರ್ತಿಪೂಜಕರು ಮಾರ್ಗ ತಪ್ಪಿದ್ದಾರೆ. ಅವರಿಗೆ ಅಲ್ಲಾಹುವಿನ ಆರಾಧನೆಗೆ ಕರೆತರುವ ಆವಶ್ಯಕತೆಯಿದೆ.

3. 2014 ರಿಂದ ದೇಶಾದ್ಯಂತ ಸುಮಾರು 20 ಲಕ್ಷ ಮುಸಲ್ಮಾನರಲ್ಲದವರು ಇಸ್ಲಾಂ ಸ್ವೀಕರಿಸಿದ್ದಾರೆ. ತಬ್ಲಿಗಿ ಜಮಾತ ಸದಸ್ಯರು ಹೆಚ್ಚೆಚ್ಚು ಜನರನ್ನು ಇಸ್ಲಾಂಗೆ ಮತಾಂತರಿಸಲು ಪ್ರಯತ್ನಿಸುತ್ತಾರೆ. ಅವರು ದೇಶದಲ್ಲಿ ಶರೀಯತ ಕಾನೂನು ಜಾರಿಗೊಳಿಸುವ ಪ್ರಯತ್ನದಲ್ಲಿ ಕಾರ್ಯನಿರತರಾಗಿದ್ದಾರೆ.

4. ಇಸ್ಲಾಮಿ ಮತಾಂತರದ ಜಾಲ ದೇಶಾದ್ಯಂತರ ಹರಡಿದೆ. ಅದಕ್ಕಾಗಿ ಅರಬ ದೇಶ ಮತ್ತು ಅಪಘಾನಿಸ್ತಾನದಿಂದ ಹಣ ಬರುತ್ತದೆ. ಹಣದ ಆಮಿಷವನ್ನು ತೋರಿಸಿ ಹಿಂದೂಗಳನ್ನು ಮತಾಂತರಗೊಳಿಸಲಾಗುತ್ತಿದೆ. ಭಾರತದ ಹಿಂದೂಗಳ ಮತಾಂತರದ ಶೇ. 99 ರಷ್ಟು ಪ್ರಕರಣಗಳಿಗೆ ತಬ್ಲಿಗಿ ಜಮಾತ ಕಾರಣರಾಗಿದ್ದಾರೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ರಾಷ್ಟ್ರದ ವಿಷಯದಲ್ಲಿ ಯಾರಾದರೂ ಹೇಳಿಕೆ ನೀಡಿದಾಗ `ಪ್ರಜಾಪ್ರಭುತ್ವ ಅಪಾಯದಲ್ಲಿದೆ’, ಎಂದು ಕೂಗುವ ಪ್ರಗತಿಪರರು ಈಗ ಭಾರತದಲ್ಲಿ ಶರೀಯತ ಆಡಳಿತ ಜಾರಿಯಾಗುವ ಮೌಲಾನರ ಹೇಳಿಕೆಯ ಬಗ್ಗೆ ಚಕಾರವನ್ನೂ ಎತ್ತುವುದಿಲ್ಲ ಎನ್ನುವುದನ್ನು ಗಮನಿಸಿರಿ !

ಶರೀಯತ ಆಡಳಿತವನ್ನು ಜಾರಿಗೊಳಿಸಿ ಭಾರತವನ್ನು ಪಾಕಿಸ್ತಾನವಾಗಬಾರದಿದ್ದರೆ, ಹಿಂದೂಗಳು ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಲೇ ಬೇಕಾಗಿದೆ !

ನೇರವಾಗಿ ಪ್ರಧಾನಮಂತ್ರಿ ಮತ್ತು ಒಂದು ರಾಜ್ಯದ ಹಿಂದುತ್ವನಿಷ್ಠ ಮುಖ್ಯಮಂತ್ರಿಗಳನ್ನು ಇಸ್ಲಾಂ ಸ್ವೀಕರಿಸುವಂತೆ ಆಹ್ವಾನಿಸುವ ಧೈರ್ಯ ತೋರಿಸುವ ಮೌಲಾನಾ ಸಾಮಾನ್ಯ ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡುವುದಿಲ್ಲವೆಂದು ಹೇಗೆ ನಂಬುವುದು ? ಈ ಬಗ್ಗೆ ವಿಚಾರಣೆ ನಡೆಸಬೇಕು !