ಕೇಂದ್ರ ಸಚಿವ ನಿತಿನ ಗಡಕರಿಯವರ ದಾವೆ !
ಪ್ರತಾಪಗಡ (ರಾಜಸ್ಥಾನ) – ಶೇ. 60 ರಷ್ಟು ಇಥೆನಾಲ್ ಮತ್ತು ಶೇ. 40 ರಷ್ಟು ವಿದ್ಯುತ್ ಬಳಸಿದರೆ, ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 15 ರೂಪಾಯಿಗೆ ಇಳಿಯಬಹುದು. ಇದರಿಂದ ದೇಶದ ಇಂಧನದ ಆಮದು ಕಡಿಮೆಯಾಗುವುದು ಮತ್ತು ಅದರ ಹಣ ಸರಕಾರಕ್ಕೆ ಉಳಿತಾಯವಾಗಲಿದೆ. ಈ ಹಣವನ್ನು ರೈತರ ಕಲ್ಯಾಣಕ್ಕಾಗಿ ಉಪಯೋಗಿಸಬಹುದು ಎಂದು ಕೇಂದ್ರ ಸಚಿವ ನಿತಿನ ಗಡಕರಿಯವರು ಒಂದು ಕಾರ್ಯಕ್ರಮದಲ್ಲಿ ಹೇಳಿದರು.
ಗಡಕರಿಯವರು ತಮ್ಮ ಮಾತನ್ನು ಮುಂದುವರಿಸಿ, ಭಾರತದಲ್ಲಿ ಇಂಧನದ ಆಮದು 16 ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಈ ಆಮದು ಕಡಿಮೆಗೊಳಿಸಿದರೆ ಆ ಹಣ ವಿದೇಶಕ್ಕೆ ಹೋಗುವುದರ ಬದಲು ರೈತರ ಮನೆ ತಲುಪುವುದು. ಕಬ್ಬಿನಿಂದ ಇಥೆನಾಲ್ ಉತ್ಪಾದಿಸಲಾಗುತ್ತದೆ ಮತ್ತು ಭಾರತದಲ್ಲಿ ಲಕ್ಷಾಂತರ ರೈತರ ಜೀವನ ಕಬ್ಬಿನ ಬೆಳೆಯನ್ನು ಅವಲಂಬಿಸಿದೆ. ಈ ಕಾರಣದಿಂದ ಹೀಗೆ ಆದರೆ ರೈತರಿಗೆ ಬಹಳ ಅನುಕೂಲವಾಗಲಿದೆ ಎಂದು ಹೇಳಿದರು.
Petrol priced at just 15 rupees per litre? Sounds impossible, right? In a country where soaring fuel prices have led to high inflation and unaffordable vehicles for many Indians, there has been a hue and cry when auto fuels escalated beyond Rs 100 a litre and still are hovering… pic.twitter.com/cyFvo5Te7a
— IndiaToday (@IndiaToday) July 6, 2023