ದೇವಬಂದ (ಉತ್ತರಪ್ರದೇಶ) – ಏಕರೂಪ ನಾಗರಿಕ ಕಾನೂನಿನ ಹಿನ್ನೆಲೆಯಲ್ಲಿ ಜಮೀಯತ್ ಉಲೇಮಾ ಎ ಹಿಂದ್ ಈ ಮುಸ್ಲಿಂ ಸಂಘಟನೆಯು ತನ್ನ ಅಭಿಪ್ರಾಯವನ್ನು ಕಾನೂನು ಆಯೋಗಕ್ಕೆ ಕಳುಹಿಸಲಿದೆ. ಈ ಸಂಘಟನೆಯು, ಈ ಕಾನೂನು ಧರ್ಮದ ಮೇಲೆ ಆಘಾತ ಮಾಡುವುದಾಗಿದೆ. ಆಯೋಗವು ಸರ್ವಧರ್ಮದ ಉತ್ತರದಾಯಿ ಜನರನ್ನು ಕರೆಸಿ ಅವರ ಜೊತೆಗೆ ಚರ್ಚಿಸಬೇಕು. ಯಾವುದೇ ಕಾನೂನು ಶರಿಯತ್ ನ ವಿರುದ್ಧ ಇದ್ದರೆ ಮುಸಲ್ಮಾನರು ಅದನ್ನು ಸ್ವೀಕರಿಸುವುದಿಲ್ಲ, ಮುಸಲ್ಮಾನರು ಎಲ್ಲವೂ ಸಹಿಸಬಹುದು; ಆದರೆ ಶರೀಯತದ ವಿರುದ್ಧ ಅವರು ಹೋಗಲು ಸಾಧ್ಯವಿಲ್ಲ. ಏಕರೂಪ ನಾಗರಿಕ ಕಾನೂನು ದೇಶದ ಐಕ್ಯತೆಗೆ ಅಪಾಯಕಾರಿಯಾಗಿದೆ ಎಂದು ಹೇಳಿದರು.
೧. ಜಮಿಯತ ಮಾತು ಮುಂದುವರೆಸುತ್ತಾ, ಏಕರೂಪ ನಾಗರಿಕ ಕಾನೂನು ಸಂವಿಧಾನದಲ್ಲಿನ ಧಾರ್ಮಿಕ ಅಧಿಕಾರ ಕಸಿದುಕೊಳ್ಳುತ್ತಿದೆ. ನಮ್ಮ ವೈಯಕ್ತಿಕ ಕಾನೂನು (ಪರ್ಸನಲ್ ಲಾ ) ಕುರಾನಿನ ಮೂಲಕ ರೂಪಿಸಲಾಗಿರುವುದರಿಂದ ಅದು ಪ್ರಲಯದವರೆಗೆ ಬದಲಾಯಿಸಲು ಸಾಧ್ಯವಿಲ್ಲ.
೨. ಈ ಹಿಂದೆ ಜಮಿಯತನ ಮುಖಂಡ ಮೌಲಾನ ಹರ್ಷ ಮದನಿ ಇವರು ಏಕರೂಪ ನಾಗರಿಕ ಕಾನೂನಿನ ವಿರುದ್ಧ ಬೀದಿಗೆ ಇಳಿಯದಿರಲು ಕರೆ ನೀಡಿದ್ದರು.
ಸಂಪಾದಕೀಯ ನಿಲುವು‘ಏಕರೂಪ ನಾಗರಿಕ ಕಾನೂನು ಸಂಸತ್ತಿನಲ್ಲಿ ಅಂಗೀಕರಿಸಲಾದ ನಂತರ ಅದನ್ನು ಎಲ್ಲರಿಗೂ ಸ್ವೀಕರಿಸಲೇಬೇಕಾಗುತ್ತದೆ’, ಎಂದು ಈಗ ಸರಕಾರ ನಿಲುವು ತಾಳಬೇಕು ! |