‘೭೨ ಹೂರೆ’ ಚಲನಚಿತ್ರದ ನಿರ್ದೇಶಕ ಸಂಜಯ ಚೌಹಾನ್ ಇವರಿಗೆ ಸಾಮಾಜಿಕ ಜಾಲತಾಣದಿಂದ ಜೀವ ಬೆದರಿಕೆ !

ಚಲನಚಿತ್ರ ಮುಸಲ್ಮಾನ ವಿರೋಧಿ ಎಂದು ಟೀಕೆ

(೭೨ ಹೂರೆ ಇದು ಇಸ್ಲಾಮಿ ಪರಿಕಲ್ಪನೆಯಾಗಿದ್ದು ಅದರ ಪ್ರಕಾರ ಇಸ್ಲಾಂ ಅನ್ನು ಚಾಚೂ ತಪ್ಪದೇ ಪಾಲನೆ ಮಾಡುವವರು ಸ್ವರ್ಗಕ್ಕೆ ಹೋದ ನಂತರ ಅವರಿಗೆ ೭೨ ಸುಂದರ ಯುವತಿಯರ ಸಹವಾಸ ಲಭಿಸುತ್ತದೆ.)

ಮುಂಬಯಿ – ಬಹುನಿರೀಕ್ಷಿತ ಚಲನಚಿತ್ರ ‘೭೨ ಹೂರೆ’ ಬಿಡುಗಡೆ ಆಗುವ ಮೊದಲೇ ಚಲನಚಿತ್ರ ನಿರ್ದೇಶಕ ಸಂಜಯ ಪೂರಣಸಿಂಹ ಚೌಹಾನ ಇವರಿಗೆ ಸಾಮಾಜಿಕ ಜಾಲತಾಣದ ಮೂಲಕ ಜೀವ ಬೆದರಿಕೆ ನೀಡಲಾಗುತ್ತಿದೆ. ಈ ಚಲನಚಿತ್ರ ಮುಂಬಯಿಲ್ಲಿನ ಭಯೋತ್ಪಾದಕ ದಾಳಿಯ ಮೇಲೆ ಆಧಾರಿತವಾಗಿದೆ. ಈ ಚಲನಚಿತ್ರ ಮುಸಲ್ಮಾನ ವಿರೋಧಿ ಎಂದು ಟೀಕಿಸಲಾಗುತ್ತಿದೆ. ನಿರ್ದೇಶಕ ಸಂಜಯ ಚೌಹಾನ ಇವರಿಗೆ ಹಾನಿ ಮಾಡುವುದರ ಬಗ್ಗೆ ಬೆದರಿಕೆ ನೀಡಲಾಗುತ್ತಿದೆ. ‘೭೨ ಹೂರೆ’ ಚಲನಚಿತ್ರ ಜುಲೈ ೭, ೨೦೨೩ ರಂದು ಬಿಡುಗಡೆ ಆಗಲಿದೆ. ಈ ಚಲನಚಿತ್ರದಲ್ಲಿ ಪವನ ಮಲ್ಹೋತ್ರ ಮತ್ತು ಅಮೀರ್ ಬಶೀರ್ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.

೧. ರಶೀದ್ ಖಾನ್ ಇವನು ‘ನಿಮ್ಮ ಸಮಯ ಬಂದಿದೆ’ ಎಂದು ಸಂಜಯ ಚೌಹಾನ ಇವರಿಗೆ ಬೆದರಿಸಿದ್ದಾನೆ.

೨. ಸಾಮಾಜಿಕ ಜಾಲತಾಣ ಉಪಯೋಗಿಸುವ ಇನ್ನೋರ್ವ ಮತಾಂಧನು ಸಂಜಯ ಚೌಹಾನ ಇವರ ತಾಯಿಯ ಮೇಲೆ ಬಲಾತ್ಕಾರ ಮಾಡುವ ಬೆದರಿಕೆ ನೀಡಿದ್ದಾನೆ.

೩. ಮುಷರಫ್ ಅಹಮದ್ ಇವನು ಚೌಹಾನ ಇವರಿಗೆ ‘ಹಂದಿ’ ಮತ್ತು ‘ಮಂಗಳಮುಖಿ’ ಎಂದಿದ್ದಾನೆ.

೪. ಕೆಲವು ಮತಾಂಧ ಮುಸಲ್ಮಾನರು ನಿರ್ದೇಶಕ ಸಂಜಯ ಚೌಹಾನ ಇವರಿಗೆ ಬೈಗುಳ ಬಯ್ಯುವ ನೆಪದಲ್ಲಿ ಹಿಂದುಗಳ ಶ್ರದ್ಧಾಸ್ಥಾನಗಳ ಮೇಲೆ ದಾಳಿ ನಡೆಸಿದ್ದಾರೆ.

೫. ಶಬನಂ ಎಂಬ ಮಹಿಳೆಯು ‘೭೨ ಹೂರೆ’ ಚಲನಚಿತ್ರ ನಿರ್ದೇಶಕ ಸಂಜಯ ಚೌಹಾನ ಇವರ ಮೃತ್ಯುವಿಗಾಗಿ ಪ್ರಾರ್ಥನೆ ಮಾಡಿದ್ದಾಳೆ.

೬. ಪ್ರಸಿದ್ಧ ಭೋಜಪುರಿ ನಾಯಕಿ ಸಭಿಹ ಶೇಖ ಇವಳು ‘೭೨ ಹೂರೆ’ ಚಲನಚಿತ್ರ ನಿರ್ಮಾಪಕನಿಗೆ ಮುಸಲ್ಮಾನ ವಿರೋಧಿ ಎಂದು ಅವರ ಬಗ್ಗೆ ಟೀಕೆ ಮಾಡಿದ್ದಾಳೆ.

ಸಂಪಾದಕರ ನಿಲುವು

ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹರಟೆ ಹೊಡೆಯುವವರು ಈಗ ಯಾವ ಬಿಲದಲ್ಲಿ ಬಚ್ಚಿ ಕುಳಿತಿದ್ದಾರೆ ?