ಸಿಗ್ನಲ್ ನ ತಾಂತ್ರಿಕ ದೋಷದಿಂದ ಒಡಿಸ್ಸಾದ ಬಾಲಾಸೋರ ಅಪಘಾತ ! – ರೈಲು ಸುರಕ್ಷಾ ಆಯುಕ್ತರ ವರದಿ

ನವ ದೆಹಲಿ – ಒಡಿಸ್ಸಾದಲ್ಲಿನ ಬಾಲಸೋರದಲ್ಲಿ ಕಳೆದ ತಿಂಗಳು ನಡೆದಿರುವ ಭೀಕರ ರೈಲು ಅಪಘಾತದ ಕುರಿತು ರೈಲು ಸುರಕ್ಷಾ ಆಯುಕ್ತರಿಂದ ರೈಲು ಬೋರ್ಡಿಗೆ ವರದಿ ಸಲ್ಲಿಸಿದೆ. ಈ ವರದಿಯಲ್ಲಿನ ವಿಸ್ತೃತ ಮಾಹಿತಿ ಬಹಿರಂಗಪಡಿಸದೇ ಇದ್ದರೂ ಕೂಡ ಸಿಗ್ನಲ್ ವ್ಯವಸ್ಥೆಯಲ್ಲಿನ ದೋಷದಿಂದ ಈ ಅಪಘಾತ ನಡೆದಿದೆ ಎಂದು ಹೇಳಲಾಗಿದೆ. ಈ ಅಪಘಾತದಲ್ಲಿ ೨೯೩ ಜನರು ಸಾವನ್ನಪ್ಪಿದ್ದು ೧ ಸಾವಿರಗಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದರು. ಇನ್ನೊಂದು ಕಡೆಗೆ ಕೇಂದ್ರ ತನಿಖಾ ದಳದಿಂದ ಕೂಡ ಈ ಅಪಘಾತದ ಸಮೀಕ್ಷೆ ನಡೆಸಲಾಗುತ್ತಿದೆ.

ಕೋರೊಮಂಡಲ ಎಕ್ಸ್ಪ್ರೆಸ್ ಒಂದು ಸರಕು ಸಾಗಾಣಿಕೆ ರೈಲಿಗೆ ಗುದ್ದಿರುವುದರಿಂದ ಈ ಅಪಘಾತ ನಡೆದಿತ್ತು. ಈ ಎಕ್ಸ್ಪ್ರೆಸ್ ಯಾವ ಮಾರ್ಗದಲ್ಲಿ ಚಲಿಸುತ್ತಿತ್ತೋ ಆ ಮಾರ್ಗದಲ್ಲಿ ಈ ರೈಲಿಗೆ ಹಸಿರು ಸಿಗ್ನಲ್ ನೀಡಲಾಗಿತ್ತು; ಆದರೆ ನಂತರ ಈ ರೈಲು ಹಳಿ ಬದಲಾಯಿಸಿ ಪಕ್ಕದ ಹಳಿಯಲ್ಲಿ ನಿಂತಿದ್ದ ಗೂಡ್ಸ್ ಗಾಡಿಯ ಹಳೆಯ ಮೇಲೆ ತಿರುಗಿಸಿರುವದರಿಂದ ಈ ಅಪಘಾತ ನಡೆದಿದೆ.

ಸಂಪಾದಕರ ನಿಲುವು

ದೋಷಪೂರಿತ ಸಿಗ್ನಲ್ ವ್ಯವಸ್ಥೆಗೆ ಕಾರಣಕರ್ತರಾಗಿರುವ ಅಧಿಕಾರಿಗಳಿಗೆ ನೂರಾರು ಪ್ರಯಾಣಿಕರ ಸಾವಿಗೆ ಹೊಣೆಗಾರರೆಂದು ನಿಶ್ಚಯಿಸಿ ತಕ್ಷಣ ಗಲ್ಲು ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸಬೇಕು !