ರಾಜಸ್ಥಾನದಲ್ಲಿ `ಲವ್ ಜಿಹಾದ’ ನ ಹೊಸ ಪ್ರಕರಣ ಬೆಳಕಿಗೆ !
ಬಿಕಾನೇರ (ರಾಜಸ್ಥಾನ) – ಇಲ್ಲಿನ ಶ್ರೀಡೂಂಗರಡ ತಾಲೂಕಿನ ಒಂದು ಖಾಸಗಿ ಶಾಲೆಯ ಮುಸ್ಲಿಂ ಶಿಕ್ಷಕಿ ನಿದಾ ವಹಲಿಮ್ (ವಯಸ್ಸು 24 ವರ್ಷಗಳು) ಇವಳು 17 ವರ್ಷದ ಅಪ್ರಾಪ್ತ ಹಿಂದೂ ವಿದ್ಯಾರ್ಥಿನಿಯನ್ನು ಅಪಹರಿಸಿದ್ದಾಳೆ. ಇದಕ್ಕಾಗಿ ಅವಳು ತನ್ನ ಇಬ್ಬರು ಸಹೋದರರಾದ ಜುನೈದ ಮತ್ತು ನಾವೇದ ಇವರ ಸಹಾಯವನ್ನು ಪಡೆದಳು. ಈ ಘಟನೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸದ್ದಾರೆ. ಸಂತ್ರಸ್ತ ಬಾಲಕಿಯ ತಂದೆಯು ನಿದಾ ವಹಲಿಮ್, ಜುನೈದ ಮತ್ತು ನಾವೇದ ಈ ಮೂವರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆ ನಡೆದ ಶಾಲೆಯ ಮುಖ್ಯೋಪಾಧ್ಯಯ ಅಬ್ದುಲ್ ಗಫೂರ ಆಗಿದ್ದು, ನಿದಾ ವಹ್ಲಿಮ್ ಇವಳು ಅಬ್ದುಲ್ ಗಫೂರನ ಸಂಬಂಧಿಯಾಗಿದ್ದಾಳೆ, ಇದರಿಂದ `ನನ್ನ ಮಗಳ ಅಪಹರಣದ ಹಿಂದೆ ಶಾಲೆಯ ಆಡಳಿತ ಮಂಡಳಿಯ ಕೈವಾಡವಿದೆ’ಯೆಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ.
17 साल की हिन्दू छात्रा को लेकर फरार हुई शिक्षिका निदा वहलीम, अब्दुल गफूर का है स्कूल: ‘लव जिहाद’ की चर्चा पर बोली पुलिस – दोनों मर्जी से गए#Rajasthan #LoveJihad https://t.co/S88iuEUPto
— ऑपइंडिया (@OpIndia_in) July 2, 2023
ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚಲು ಪೊಲೀಸರ 4 ತಂಡಗಳನ್ನು ನಿಯೋಜಿಸಲಾಗಿದ್ದು, ಶೀಘ್ರದಲ್ಲಿಯೇ ಆಕೆಯನ್ನು ಪತ್ತೆ ಮಾಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಸಂಪಾದಕೀಯ ನಿಲುವು
|