ವಿಶಿಷ್ಟ ಮೊಬೈಲ್ ಮತ್ತು TV ಗಳ ಬೆಲೆಯಲ್ಲಿ ಇಳಿಕೆ !

ಸರಕು ಮತ್ತು ಸೇವಾ ತೆರಿಗೆ ಶೇ. 31.3. ರಿಂದ ಶೇ. 12 ರಿಂದ ಶೇ. 18 ರ ವರೆಗೆ ಇಳಿಕೆ

ನವದೆಹಲಿ – ಕೇಂದ್ರ ಸರಕಾರವು ಮೊಬೈಲ್ ಫೋನ ಮತ್ತು TV ಸೆಟ್ ಗಳ ಬೆಲೆಯನ್ನು ಕಡಿಮೆ ಮಾಡಿದೆ. ಅವುಗಳ ಮೇಲೆ ವಿಧಿಸಲಾಗುತ್ತಿದ್ದ ಸರಕು ಮತ್ತು ಸೇವಾ ತೆರಿಗೆಯನ್ನು ಕ್ರಮವಾಗಿ ಶೇ. 31.3. ರಿಂದ ಶೇ. 12 ಮತ್ತು ಶೇ. 18 ರಷ್ಟು ಕಡಿಮೆಗೊಳಿಸಿದೆ. ಇದರಿಂದ 32 ಸಾವಿರದ 825 ರೂಪಾಯಿ ಬೆಲೆಯ ಮೊಬೈಲ್ ಫೋನ್ ಈಗ 28 ಸಾವಿರದ 999 ರೂಪಾಯಿಗೆ ಲಭ್ಯವಾಗಲಿದೆ. ಇದರೊಂದಿಗೆ 32825 ರೂಪಾಯಿ ಮೌಲ್ಯದ 27 ಇಂಚಿನ TV ಸೆಟ್ ಈಗ 29500 ರೂಪಾಯಿಗಳಿಗೆ ಲಭ್ಯವಾಗಲಿದೆ. ಆದರೂ 32 ಇಂಚುಗಳಿಗಿಂತ ದೊಡ್ಡ TV ಸೆಟ್ ಗಳ ಮೇಲಿನ ತೆರಿಗೆಯು ಶೇ. 31.3. ಇರಲಿದೆಯೆಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. `ವ್ಯಾಕ್ಯೂಮ್ ಕ್ಲೀನರ್’ ಮತ್ತು `ಯು.ಪಿ.ಎಸ್.’ ಮೇಲಿನ ತೆರಿಗೆಯನ್ನು ಶೇ. 28 ರಿಂದ ಶೇ. 18 ಕ್ಕೆ ಇಳಿಸಲಾಗಿದೆ.